More

    ಪೆರೋಲ್​ ಪಡೆದು ಜೈಲಿನಿಂದ ಹೊರಬಂದಿದ್ದ ಡಾ.ಬಾಂಬ್ ಕುಖ್ಯಾತಿಯ ಜಾಲಿಸ್​ ಅನ್ಸಾರಿ ನಾಪತ್ತೆ; ಮಗನಿಂದ ದೂರು ದಾಖಲು

    ಮುಂಬೈ: ಪೆರೋಲ್​ ಮೇಲೆ ಜೈಲಿನಿಂದ ಹೊರಬಂದಿದ್ದ 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ. ಡಾ. ಬಾಂಬ್​ ಎಂದೇ ಕುಖ್ಯಾತಿ ಪಡೆದಿದ್ದ ಜಾಲಿಸ್ ಅನ್ಸಾರಿ ನಾಪತ್ತೆಯಾಗಿದ್ದಾಗಿ ವರದಿಯಾಗಿದೆ.
    ಅನ್ಸಾರಿ (68) ನಾಪತ್ತೆಯಾದ ಬಗ್ಗೆ ಆತನ ಕುಟುಂಬದವರು ಮುಂಬೈನ ಅಗ್ರಿಪಾಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ರಾಜಸ್ಥಾನದ ಅಜ್ಮೇರ್​ ಸೆಂಟ್ರಲ್​ ಜೈಲಿನಲ್ಲಿದ್ದ ಅನ್ಸಾರಿ 21ದಿನಗಳ ಪೆರೋಲ್​ ಪಡೆದು ಹೊರಬಂದಿದ್ದರು. ಗುರುವಾರ ಬೆಳಗ್ಗೆ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

    ಅನ್ಸಾರಿ ನಮಾಜ್​ ಮಾಡಿ ಬರುತ್ತೇನೆ ಎಂದು ಹೇಳಿ ಗುರುವಾರ ಬೆಳಗ್ಗೆ ಹೋದವರು ವಾಪಸ್​ ಮನೆಗೆ ಬಂದಿಲ್ಲ ಎಂದು ಆತನ 35 ವರ್ಷದ ಮಗ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪೊಲೀಸರು ತಪ್ಪಿಸಿಕೊಂಡ ಅಪರಾಧಿಗಾಗಿ ಹುಡುಕುತ್ತಿದ್ದಾರೆ. ಬಸ್ ನಿಲ್ದಾಣ, ರೈಲ್ವೆ ಸ್ಟೇಶನ್​ಗಳಲ್ಲಿನ ಸಿಸಿಟಿವಿ ಕ್ಯಾಮರಾಗಳ ಫೂಟೇಜ್​ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರ ಹಲವು ತಂಡಗಳು ಬೇರೆ ಬೇರೆ ಪ್ರದೇಶಗಳಿಗೆ ತೆರಳಿ ಅನ್ಸಾರಿಗಾಗಿ ಹುಡುಕಾಟ ನಡೆಸಿದೆ.

    1993ರ ಮಾರ್ಚ್​ 12ರಂದು ಮುಂಬೈನಲ್ಲಿ ನಡೆದ ಭೀಕರ ಸರಣಿ ಸ್ಫೋಟದ ಮುಖ್ಯ ರೂವಾರಿ ಈ ಜಾಲಿಸ್​ ಅನ್ಸಾರಿ. ಬಾಂಬ್​ ಬ್ಲಾಸ್ಟ್​ನಲ್ಲಿ 250 ಮಂದಿ ಮೃತಪಟ್ಟಿದ್ದರು. 713 ಜನರು ಗಾಯಗೊಂಡಿದ್ದರು. ಅಷ್ಟೇ ಅಲ್ಲದೆ 2008ರಲ್ಲಿ ನಡೆದ ಜೈಪುರ ಬಾಂಬ್​ ಬ್ಲಾಸ್ಟ್​ನಲ್ಲೂ ಅನ್ಸಾರಿಯದೇ ಕೈವಾಡವಿದ್ದು ಅಪರಾಧಿ ಎಂದು ಸಾಬೀತಾಗಿದ್ದ. ಒಟ್ಟಾರೆ 60ಕ್ಕೂ ಹೆಚ್ಚು ಬಾಂಬ್​ ಸ್ಫೋಟ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಈತ ಡಾ. ಬಾಂಬ್​ ಎಂದೇ ಕುಖ್ಯಾತಿ ಗಳಿಸಿದ್ದ.

    ಅನ್ಸಾರಿ ಸಿಮಿ, ಇಂಡಿಯನ್​ ಮುಜಾಹಿದ್ದೀನ್​ ಸೇರಿ ಹಲವು ಉಗ್ರಸಂಘಟನೆಗಳೊಟ್ಟಿಗೆ ಸಂಪರ್ಕದಲ್ಲಿದ್ದ ಎಂದು ವರದಿಯಾಗಿದೆ.

    ಅನ್ಸಾರಿಯನ್ನು 2011ರಲ್ಲಿ ರಾಷ್ಟ್ರೀಯ ತನಿಖಾ ದಳ ವಿಚಾರಣೆ ನಡೆಸಿತ್ತು. ರಾಜಸ್ತಾನ ಜೈಲು ಸೇರಿದ್ದವನು ಸದ್ಯ 21 ದಿನಗಳ ಪೆರೋಲ್​ ಪಡೆದು ಹೊರಗೆ ಬಂದಿದ್ದ. ಇಂದಿಗೆ ಅವನ ಪೆರೋಲ್​ ಮುಗಿದಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts