More

    ಪೆರೋಲ್​ ಮೇಲೆ ಬಿಡುಗಡೆಯಾದ ರಾಮ್​ ರಹೀಮ್​: ಜೈಲಿಂದ ಹೊರ ಬರುತ್ತಿದ್ದಂತೆ ಹೋಗಿದ್ದೆಲ್ಲಿಗೆ?

    ರೋಹ್ಟಕ್​: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್​ಮೀತ್​ ರಾಮ್​ ರಹೀಮ್​ 40 ದಿನಗಳವರೆಗೆ ಪೆರೋಲ್​ ಮೇಲೆ ಜೈಲಿಂದ ಹೊರ ಬಂದಿದ್ದಾರೆ.

    ಆಶ್ರಮದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಹಾಗೂ 2002ರಲ್ಲಿ ಡೇರಾ ಸಚ್ಚಾ ಸೌದಾದ ಮ್ಯಾನೇಜನರ್​ ರಣಜೀತ್ ಸಿಂಗ್​ನ ಕೊಲೆ ಕೇಸ್​ನಲ್ಲಿ ಗುರ್​ಮೀತ್​ ರಾಮ್​ ರಹೀಮ್​ಗೆ ಜೈಲು ಶಿಕ್ಷೆಯಾಗಿದೆ. ಇವರನ್ನು ಪೆರೋಲ್​ ಮೇಲೆ ಬಿಡುವಂತೆ ಕುಟುಂಬಸ್ಥರು ಸುನೈರಾ ಜೈಲಿನ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದೀಗ ಪೆರೋಲ್​ ಮೇಲೆ ಹೊರ ಬಂದಿದ್ದಾರೆ. ಜೈಲಿಂದ ಹೊರ ಬರುತ್ತಿದ್ದಂತೆ ರಾಮ್​ ರಹೀಮ್​ ಮೊದಲಿಗೆ ಹೋಗಿದ್ದು ಬರ್ನವಾದ ಬಾಗ್​ಪತ್​ ಆಶ್ರಮಕ್ಕೆ!

    ಡೇರಾ ಮುಖ್ಯಸ್ಥರು ಶಿಬಿರದೊಳಗೆ ಮಹಿಳಾ ಶಿಷ್ಯರನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣ ಹಾಗೂ ಈ ಬಗ್ಗೆ ಮಾಹಿತಿ ನೀಡಿದ್ದ ಡೇರಾದ ಮ್ಯಾನೇಜರ್​ ರಂಜಿತ್ ಸಿಂಗ್ ಅವರ ಹತ್ಯೆ ಮಾಡಿದ ಕೇಸ್​ನಲ್ಲಿ ಈತನಿಗೆ ಜೀವಾವಧಿ ಶಿಕ್ಷೆಯಾಗಿದೆ. ಈ ಬಗ್ಗೆ ಬರೆದಿದ್ದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಕೂಡ ಈತ ಮಾಡಿದ್ದು ಸಾಬೀತಾಗಿದೆ. 2021ರ ಅಕ್ಟೋಬರ್​ನಲ್ಲಿ ರಾಮ್ ರಹೀಂಗೆ ಜೀವಾವಧಿ ಶಿಕ್ಷೆಯಾಗಿದೆ. ಇದಕ್ಕೂ ಮೊದಲು ಅಂದರೆ 2017ರ ಆಗಸ್ಟ್ 28 ರಂದು ಸಿಬಿಐ ನ್ಯಾಯಾಲಯವು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts