More

    ಯಶಸ್ವಿ ಅಮೋಘ ಬ್ಯಾಟಿಂಗ್,​ ಅಶ್ವಿನ್ ಸ್ಪಿನ್​ ದಾಳಿ: ಮೊದಲ ಟೆಸ್ಟ್​ನಲ್ಲಿ ವಿಂಡೀಸ್​ ವಿರುದ್ಧ ಭಾರತಕ್ಕೆ ಸುಲಭ ಜಯ​

    ಡೊಮಿನಿಕಾ: ಪದಾರ್ಪಣೆ ಟೆಸ್ಟ್​ ಪಂದ್ಯದಲ್ಲೇ ಯಶಸ್ವಿ ಜೈಸ್ವಾಲ್​ ಅಮೋಘ ಶತಕ (171 ರನ್​, 387 ಎಸೆತ, 16 ಬೌಂಡರಿ, 1 ಸಿಕ್ಸರ್​) ಹಾಗೂ ರವಿಚಂದ್ರನ್​ ಅಶ್ವಿನ್ (ಎರಡು ಇನ್ನಿಂಗ್ಸನ್​ಲ್ಲಿ 12 ವಿಕೆಟ್) ಅವರ​​ ಮಾರಕ ಸ್ಪಿನ್​ ದಾಳಿ ತತ್ತರಿಸಿದ ವೆಸ್ಟ್​ಇಂಡೀಸ್​ ಪಡೆ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ 141 ರನ್​ಗಳ ಹೀನಾಯ ಸೋಲು ಅನುಭವಿಸಿದೆ.

    ಅದ್ಭುತ ಗೆಲುವಿನೊಂದಿಗೆ ಭಾರತ 1-0 ಅಂತರದಿಂದ ಟೆಸ್ಟ್​ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

    ಇದನ್ನೂ ಓದಿ: ವಂಶಿಕಾ ಹೆಸರಲ್ಲಿ ವಂಚನೆ ಪ್ರಕರಣ: ಬೆಳಕಿಗೆ ಬರುತ್ತಿದೆ ನಿಶಾ ನರಸಪ್ಪಳ ಒಂದೊಂದೆ ಮೋಸ

    ಜುಲೈ 12ರಿಂದ ವಿಂಡ್ಸರ್​ ಪಾರ್ಕ್​ ಸ್ಟೇಡಿಯಂನಲ್ಲಿ ಆರಂಭವಾದ ಮೊದಲ ಪಂದ್ಯ ಜುಲೈ 14ಕ್ಕೆ ಅಂತ್ಯಗೊಂಡಿದ್ದು, ಟಾಸ್​​​ ಗೆದ್ದು ಮೊದಲ ಇನ್ನಿಂಗ್ಸ್​ ಆರಂಭಿಸಿದ ವಿಂಡೀಸ್​ ಪಡೆ, 64.3 ಓವರ್​ಗಳಲ್ಲಿ 150 ರನ್​ಗೆ ಆಲೌಟ್​ ಆಯಿತು. ಮೊದಲ ಇನ್ನಿಂಗ್ಸ್​ನಲ್ಲಿ ರವಿಚಂದ್ರನ್ ಅಶ್ವಿನ್​ 5 ಹಾಗೂ ರವೀಂದ್ರ ಜಡೇಜಾ 3 ವಿಕೆಟ್​ ಕಬಳಿಸುವ ಮೂಲಕ ವಿಂಡೀಸ್​ ಪಡೆಗೆ ಮುಳುವಾದರು.

    ವಿಂಡೀಸ್​ ಪಡೆ ನೀಡಿದ 150 ರನ್​ಗಳ ಗುರಿ ಬೆನ್ನತ್ತಿದ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 152.2 ಓವರ್‌ಗಳಲ್ಲಿ 5 ವಿಕೆಟ್​ಗೆ 421 ರನ್ ಕಲೆಹಾಕಿ 271 ರನ್ ಮುನ್ನಡೆಯೊಂದಿಗೆ ಡಿಕ್ಲೇರ್ ಮಾಡಿಕೊಂಡಿತು. ಭಾರತದ ಪರ ಪದಾರ್ಪಣೆ ಟೆಸ್ಟ್‌ನಲ್ಲೇ ಅಬ್ಬರಿಸಿದ ಯಶಸ್ವಿ ಜೈಸ್ವಾಲ್ (171 ರನ್, 387 ಎಸೆತ, 16 ಬೌಂಡರಿ, 1 ಸಿಕ್ಸರ್) ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (76 ರನ್ 182 ಎಸೆತ, 5 ಬೌಂಡರಿ) ತಾಳ್ಮೆಯ ಆಟ ಉತ್ತಮ ಮೊತ್ತ ಕಲೆಹಾಕಲು ನೆರವಾಯಿತು.

    ಭಾರತದ ನೀಡಿದ ಗುರಿಯನ್ನು ಬೆನ್ನತ್ತಿದ ವಿಂಡೀಸ್​ ಪಡೆ ಎರಡನೇ ಇನ್ನಿಂಗ್ಸ್​ನಲ್ಲಿ ರವಿಂದ್ರ ಚಂದ್ರನ್​ ಅಶ್ವಿನ್​ ಅವರ ಬೌಲಿಂಗ್​ ದಾಳಿಗೆ ತತ್ತರಿಸಿತು. 21.3 ಓವರ್​ ಎಸೆದ ಅಶ್ವಿನ್​ 7 ಮೇಡನ್​ನೊಂದಿಗೆ 71 ರನ್​ ನೀಡಿ ಬರೋಬ್ಬರಿ 7 ವಿಕೆಟ್​ ಕಬಳಿಸುವ ಮೂಲಕ ವಿಂಡಿಸ್​ ಪಡೆಗೆ ದುಸ್ವಪ್ನವಾಗಿ ಕಾಡಿದರು. ಎರಡನೇ ಇನ್ನಿಂಗ್ಸ್​ನಲ್ಲಿ 50.3 ಓವರ್​ಗಳಲ್ಲಿ ಕೇವಲ 130 ರನ್​ಗೆ ಸರ್ವಪತನ ಕಂಡಿತು. ಈ ಮೂಲಕ 141 ರನ್​ ಅಂತರದಲ್ಲಿ ವಿಂಡೀಸ್​ ಪಡೆ ಪಂದ್ಯವನ್ನು ಕೈಚೆಲ್ಲಿತು.

    ಇದನ್ನೂ ಓದಿ: ಚಂದ್ರಯಾನ-3: ಯಶಸ್ವಿ ಉಡಾವಣೆ; 16 ನಿಮಿಷಕ್ಕೆ ರಾಕೆಟ್​ನಿಂದ ಬೇರ್ಪಟ್ಟ ನೌಕೆ, ಚಂದ್ರನಲ್ಲಿಗೆ 40 ದಿನದ ಪಯಣ

    ಯಶಸ್ವಿ ದಾಖಲೆ

    ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಪದಾರ್ಪಣೆ ಟೆಸ್ಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದರು. 21 ಪ್ಲಸ್ ರನ್ ಗಳಿಸಿದ 3ನೇ ಭಾರತೀಯ ಎನಿಸಿದರು. ಅಲ್ಲದೆ ಚೊಚ್ಚಲ ಟೆಸ್ಟ್‌’ನಲ್ಲಿ 3ನೇ ಗರಿಷ್ಠ ರನ್ ಸಾಧಕರಾಗಿದ್ದಾರೆ. ಶಿಟರ್ ಧವನ್ (187), ರೋಹಿತ್ ಶರ್ಮ (177) ಮೊದಲೆರಡು ಸ್ಥಾನದಲ್ಲಿದ್ದಾರೆ. ಪದಾರ್ಪಣೆಯ ಟೆಸ್ಟ್‌ನಲ್ಲಿ ಗರಿಷ್ಠ ಎಸೆತ (387) ಎದುರಿಸಿದ ಭಾರತೀಯರೆಂಬ ಸಾಧನೆಯೂ ಜೈಸ್ವಾಲ್ ಅವರದಾಗಿದೆ. ಮೊಹಮದ್ ಆಜರುದ್ದೀನ್ 322 ಎಸೆತ ಆಡಿದ್ದು ಹಿಂದಿನ ದಾಖಲೆ, ಪದಾರ್ಪಣೆ ಟೆಸ್ಟ್ ನಲ್ಲಿ 350 ಪ್ಲಸ್ ಎಸೆತ ಎದುರಿಸಿದ ಮೊದಲ ಭಾರತೀಯರೆನಿಸಿದರು. (ಏಜೆನ್ಸೀಸ್​)

    ಲಂಚ ಪಡೆದು ಎಸ್ಕೇಪ್​ ಆಗುತ್ತಿದ್ದ ಭ್ರಷ್ಟನನ್ನು ಸಿನಿಮಾ ಸ್ಟೈಲ್​ನಲ್ಲಿ ಚೇಸ್​ ಮಾಡಿ ಹಿಡಿದ ಲೋಕಾಯುಕ್ತ ಅಧಿಕಾರಿಗಳು!

    ಏಕಕಾಲದಲ್ಲಿ ಯುವಕರಿಬ್ಬರನ್ನು ಮದ್ವೆಯಾಗಲು ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಅರ್ಜಿ ಸಲ್ಲಿಸಿದ ಯುವತಿಗೆ ಶಾಕ್​!

    ಬೆಂಗಳೂರಿನಲ್ಲಿ ಕೆಲವೇ ಸೆಕೆಂಡುಗಳಲ್ಲಿ ನಡೆಯಿತು ಕೋಟಿ ರೂ. ದರೋಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts