More

    ವಂಶಿಕಾ ಹೆಸರಲ್ಲಿ ವಂಚನೆ ಪ್ರಕರಣ: ಬೆಳಕಿಗೆ ಬರುತ್ತಿದೆ ನಿಶಾ ನರಸಪ್ಪಳ ಒಂದೊಂದೆ ಮೋಸ

    ಬೆಂಗಳೂರು: ಮಾಸ್ಟರ್​ ಆನಂದ್​ ಪುತ್ರಿ ಹಾಗೂ ಬಾಲ ನಟಿ ವಂಶಿಕಾ ಹೆಸರು ಬಳಸಿ ವಂಚನೆ ಎಸಗಿರುವ ಸಂಬಂಧ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ರಾಮನಗರದ ಮೂಲದ ಆರೋಪಿ ನಿಶಾ ನರಸಪ್ಪಳ ಒಂದೊಂದೆ ವಂಚನೆ ಪ್ರಕರಣ ಇದೀಗ ಬೆಳಕಿಗೆ ಬರುತ್ತಿದೆ.

    ನಿಶಾ ವಿರುದ್ಧ ಪ್ರಕರಣ ದಾಖಲಾಗಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಪ್ರಕರಣ ದಾಖಲಾಗಿವೆ. ಇದೀಗ ವಂಶಿಕಾ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಿಶಾಳ ಒಂದೊಂದೆ ವಂಚನೆಗಳು ಬಟಾಬಯಲಾಗುತ್ತಿವೆ. ಕಳೆದ ತಿಂಗಳು ದಾಖಲಾದ ದೂರುಗಳ ಬೆನ್ನಲ್ಲೇ ಇದೀಗ ಸಾಕಷ್ಟು ಮಂದಿಯಿಂದ ನಿಶಾ ವಿರುದ್ಧ ದೂರಿನ ಸರಮಾಲೆಗಳು ಹರಿದು ಬರುತ್ತಿವೆ.

    ಇದನ್ನೂ ಓದಿ: ನಿಮ್ಮ ದಿನಚರಿಯಲ್ಲಿ ಈ ಒಂದು ಬದಲಾವಣೆ ಮಾಡಿದ್ರೆ ಸಾಕು ಹೃದಯ, ಲಿವರ್​ ಸದಾ ಆರೋಗ್ಯವಾಗಿರುತ್ತವೆ!

    ಹಲವು ವಂಚನೆ ದೂರುಗಳು ಬೆಳಕಿಗೆ

    ತಾರಾ ಎಂಬುವರಿಗೆ ಇಪ್ಪತ್ತು ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪ ಇದೀಗ ಕೇಳಿಬಂದಿದೆ. ಈವೆಂಟ್ ಮ್ಯಾನೇಜ್​ಮೆಂಟ್​ ಹೆಸರಲ್ಲಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಳೆದ ತಿಂಗಳು ಯಲಹಂಕ ನ್ಯೂ ಟೌನ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೇ ರೀತಿ ಕೋಣನಕುಂಟೆ ಹಾಗೂ ಜ್ಞಾನಭಾರತಿ ಠಾಣೆಯಲ್ಲಿಯೂ ವಂಚನೆ ದೂರುಗಳು ದಾಖಲಾಗಿವೆ.

    ಲಾಭಾಂಶ ನೀಡುವುದಾಗಿ ವಂಚನೆ

    ಸದಾಶಿವನಗರ ಠಾಣೆಯಲ್ಲಿ ದಾಖಲಾದ ಕೇಸ್​ನಲ್ಲಿ ಬರೋಬ್ಬರಿ 35 ಲಕ್ಷ ರೂ. ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಸಾಲದ ರೂಪದಲ್ಲಿ ಬಂಡವಾಳ ಹೂಡಿದರೆ ಲಾಭಾಂಶ ನೀಡುವುದಾಗಿ ವಂಚಿಸಿದ್ದಾಳೆ. ಮೊದ ಮೊದಲು ಲಾಭಾಂಶದ ಹಣ ಕೊಟ್ಟು ನಂಬಿಸಿ, ಆ ಬಳಿಕ ಎರಡರಷ್ಟು ಹಣ ಪಡೆದು ವಂಚನೆ ಮಾಡಿದ್ದಾಳೆ.

    ರೆಸಾರ್ಟ್​ಗಳಲ್ಲಿ ಶೂಟಿಂಗ್​

    ನಿಶಾ, ಬೆಂಗಳೂರಿನ ದೊಡ್ಡ ಮಾಲ್​​ಗಳಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದಳು. ಬೆಂಗಳೂರು ಮಾತ್ರವಲ್ಲದೆ, ನಗರದ ಹೊರಹೊಲಯದಲ್ಲಿನ ರೆಸಾರ್ಟ್​ಗಳಲ್ಲಿ ಶೂಟಿಂಗ್ ಮಾಡುವ ಮೂಲಕ ಪೋಷಕರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದಳು. ಕೇವಲ ಮಕ್ಕಳಷ್ಟೇ ಅಲ್ಲ ಸಾಕಷ್ಟು ಮಂದಿಗೆ ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾಳೆ.

    ಇದನ್ನೂ ಓದಿ: ಮೋದಿಗೆ ಫ್ರಾನ್ಸ್​ನ ಅತ್ಯುನ್ನತ ಗೌರವ: ಗ್ರ್ಯಾಂಡ್​ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಪ್ರದಾನ; ಈ ಗೌರವ ಪಡೆದ ಮೊದಲ ಭಾರತೀಯ ಪ್ರಧಾನಿ

    ಹೈಕೋರ್ಟ್​ನಲ್ಲೂ ಕೇಸ್​

    ಸದ್ಯ ಸದಾಶಿವನಗರ ಠಾಣೆಗೆ ಬರುತ್ತಿರುವ ದೂರುಗಳನ್ನು ತಮ್ಮ ಮನೆ ವ್ಯಾಪ್ತಿಯ ಠಾಣೆಯಲ್ಲಿ ನೀಡಲು ಸೂಚನೆ ನೀಡಲಾಗಿದೆ. ಹೈಕೋರ್ಟ್​ನಲ್ಲೂ ಓರ್ವ ಮಹಿಳೆ ಕೇಸ್ ಹಾಕಿದ್ದು, ವಿಚಾರಣೆಯ ಹಂತದಲ್ಲಿದೆ. ಲಕ್ಷಾಂತರ ರೂ. ಹಣದಲ್ಲಿ ಲಕ್ಸುರಿ ಲೈಫ್ ಲೀಡ್ ಮಾಡ್ತಿದ್ದ ನಿಶಾ ನರಸಪ್ಪ, ಇದೀಗ ವಂಶಿಕಾ ಪ್ರಕರಣದಲ್ಲಿ ತಗ್ಲಾಕ್ಕೊಂಡಿದ್ದಾಳೆ. ಆಕೆಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. (ದಿಗ್ವಿಜಯ ನ್ಯೂಸ್​)

    ಏಕಕಾಲದಲ್ಲಿ ಯುವಕರಿಬ್ಬರನ್ನು ಮದ್ವೆಯಾಗಲು ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಅರ್ಜಿ ಸಲ್ಲಿಸಿದ ಯುವತಿಗೆ ಶಾಕ್​!

    ಟೊಮ್ಯಾಟೊ ಬೆಲೆ ಕೆ.ಜಿ.ಗೆ 300 ರೂ.ಗೆ ಜಿಗಿಯುವ ಸಂಭವ: ಬೆಲೆ ಸ್ಥಿರಗೊಳ್ಳಲು ಕನಿಷ್ಠ 2 ತಿಂಗಳು ಅಗತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts