More

    ಟೊಮ್ಯಾಟೊ ಬೆಲೆ ಕೆ.ಜಿ.ಗೆ 300 ರೂ.ಗೆ ಜಿಗಿಯುವ ಸಂಭವ: ಬೆಲೆ ಸ್ಥಿರಗೊಳ್ಳಲು ಕನಿಷ್ಠ 2 ತಿಂಗಳು ಅಗತ್ಯ

    ನವದೆಹಲಿ: ಸಾರ್ವಕಾಲಿಕ ದಾಖಲೆ ಮಟ್ಟದ ಬೆಲೆ ಕಂಡಿರುವ ಟೊಮ್ಯಾಟೊ ಧಾರಣಿ ಇನ್ನೂ ಹೆಚ್ಚಾಗಲಿದ್ದು, ಒಂದು ಕೆ.ಜಿ.ಗೆ 300 ರೂಪಾಯಿ ಆಗುವ ಸಾಧ್ಯತೆ ದಟ್ಟವಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ದೇಶಾದ್ಯಂತ ಟೊಮಾಟೊ ದರ ಶೇಕಡ 300ಕ್ಕಿಂತ ಅಧಿಕ ಪ್ರಮಾಣದಲ್ಲಿ ಹೆಚ್ಚಿದ್ದು ಇನ್ನಷ್ಟು ಏರುವುದು ಖಚಿತ ಎಂದು ಕೃಷಿ ತಜ್ಞರು ಹೇಳಿದ್ದಾರೆ. ಟೊಮ್ಯಾಟೊ ಬೆಲೆಯೇರಿಕೆ ಸಮಸ್ಯೆ ಇನ್ನೂ ಸ್ವಲ್ಪ ಸಮಯ ಮುಂದುವರಿಯಲಿದೆ ಎಂದು ರಾಷ್ಟ್ರೀಯ ಸರಕು ನಿರ್ವಹಣಾ ಸೇವಾ ಸಂಸ್ಥೆ (ಎನ್​ಸಿಎಂಎಲ್) ಸಿಇಒ ಸಂಜಯ್ ಗುಪ್ತಾ ಹೇಳಿದ್ದಾರೆ. ವಿಪರೀತ ಮಳೆಯಾಗುತ್ತಿರುವುದರಿಂದ ಹೊಸದಾಗಿ ಟೊಮ್ಯಾಟೋ ಸಸಿ ನಾಟಿ ಸಾಧ್ಯವಿಲ್ಲ. ಬೆಲೆ ಸ್ಥಿರಗೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗಬಹುದೆಂದು ಅವರು ಹೇಳಿದ್ದಾರೆ. ಜೂನ್ ಮೊದಲ ವಾರದಲ್ಲಿ ಕೆಜಿಗೆ 40 ರೂಪಾಯಿ ಇದ್ದ ಟೊಮ್ಯಾಟೊ ಬೆಲೆ ಜುಲೈ ಮೊದಲ ವಾರದ ಹೊತ್ತಿಗೆ ಕೆಜಿಗೆ ಸರಾಸರಿ 100 ರೂ. ಆಗಿತ್ತು. ಭಾರಿ ಮಳೆಯ ನಡುವೆ ಟೊಮ್ಯಾಟೋ ಸರಬರಾಜು ಅಸ್ತವ್ಯಸ್ತಗೊಂಡಿರುವುದರಿಂದ ಬೆಲೆ ಕೆ.ಜಿ.ಗೆ ಸರಾಸರಿ 200 ರೂಪಾಯಿಗೆ ಏರಿದೆ.

    ರಿಯಾಯಿತಿ ಮಾರಾಟ: ಬೆಲೆಯೇರಿಕೆಯಿಂದ ಹೈರಾಣಾಗಿರುವ ಜನರಿಗೆ ಸ್ವಲ್ಪ ಮಟ್ಟಿಗಿನ ಪರಿಹಾರ ಒದಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ರಿಯಾಯಿತಿ ದರದಲ್ಲಿ ಟೊಮ್ಯಾಟೊ ಮಾರಲು ನಿರ್ಧರಿಸಿದೆ. ದೆಹಲಿ-ರಾಷ್ಟ್ರ ರಾಜಧಾನಿ ವಲಯ, ಲಖನೌ, ಪಟನಾ ಮತ್ತು ದೇಶದಾದ್ಯಂತ ಆಯ್ದ ನಗರಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮ್ಯಾಟೊ ಮಾರಾಟ ಮಾಡಲಾಗುತ್ತದೆ. ಒಬ್ಬರಿಗೆ ಗರಿಷ್ಠ ಎರಡು ಕೆಜಿ ಮಾತ್ರ ನೀಡಲಾಗುತ್ತದೆ. ಭಾರತ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ನೋಯ್ಡಾ, ಲಖನೌ, ಕಾನ್ಪುರ, ಜೈಪುರ ಮೊದಲಾದೆಡೆ ಟೊಮಾಟೋ ಮಾರಲು ಆರಂಭಿಸಲಿದೆ.

    ಕಸ್ಟಮ್ಸ್​ ಅಧಿಕಾರಿಗಳ ಕಳ್ಳಾಟ: ನೇಪಾಳದಿಂದ ಕಳ್ಳಸಾಗಾಟದ ಮೂಲಕ ಭಾರತವನ್ನು ಪ್ರವೇಶಿಸಿದ್ದ 4.8 ಲಕ್ಷ ರೂಪಾಯಿ ಬೆಲೆ ಬಾಳುವ ಮೂರು ಟನ್​ನಷ್ಟು ಟೊಮ್ಯಾಟೊ ಇದ್ದ ವಾಹನವನ್ನು ಮಾಲು ಸಹಿತ ವಶಪಡಿಸಿಕೊಂಡಿದ್ದರೂ ಅದನ್ನು ಬಿಡುಗಡೆ ಮಾಡಿದ ಕಸ್ಟಮ್್ಸ ಇಲಾಖೆಯ ಆರು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯ ಬಳಿ ಜುಲೈ 7ರಂದು ವಾಹನವನ್ನು ಪೊಲೀಸರು ಮತ್ತು ಸಶಸ್ತ್ರ ಸೀಮಾ ಬಲದ ಸಿಬ್ಬಂದಿ ವಶಪಡಿಸಿಕೊಂಡು ಕಸ್ಟಮ್್ಸ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದರು. ಆದರೆ ಕಸ್ಟಮ್್ಸ ಅಧಿಕಾರಿಗಳು ಕ್ರಮ ಕೈಗೊಳ್ಳುವ ಬದಲಿಗೆ ವಾಹನವನ್ನು ಬಿಟ್ಟು ಕಳುಹಿಸಿದ್ದರು ಎನ್ನಲಾಗಿದೆ.

    ರೈತನ ಪ್ರಾಣಕ್ಕೆ ಎರವಾದ ಟೊಮ್ಯಾಟೊ ಲಾಭ

    ರೈತ ಕೃಷಿಯಲ್ಲಿ ಲಾಭ ಮಾಡುವುದೇ ಕಷ್ಟ. ಆದರೆ ಟೊಮ್ಯಾಟೊ ಬೆಲೆ ಏರಿಕೆಯಿಂದ ಒಂದಷ್ಟು ಹಣ ಕಂಡ ರೈತ ಇದೇ ಕಾರಣಕ್ಕೆ ಪ್ರಾಣ ಕಳೆದುಕೊಳ್ಳಬೇಕಾದ ಘಟನೆ ಆಂಧ್ರಪ್ರದೇಶದಲ್ಲಿ ಸಂಭವಿಸಿದೆ. ಅನ್ನಮಯ್ಯ ಜಿಲ್ಲೆ ಮದನಪಲ್ಲಿಯ ನರೇಂ ರಾಜಶೇಖರ ರೆಡ್ಡಿ (62) ಎಂಬ ರೈತನನ್ನು ದುಷ್ಕರ್ವಿುಗಳು ಅಪಹರಿಸಿ ಹತ್ಯೆ ಮಾಡಿದ್ದಾರೆ. ರಾಜಶೇಖರ ರೆಡ್ಡಿ ಟೊಮ್ಯಾಟೋ ಮಾರಾಟದಿಂದ 32 ಲಕ್ಷ ರೂ. ಲಾಭ ಗಳಿಸಿದ್ದರು ಎನ್ನಲಾಗಿದ್ದು, ಈ ವಿಚಾರ ಗೊತ್ತಾಗಿ ದರೋಡೆಕೋರರು ಅವರನ್ನು ಅಪಹರಿಸಿ ಕೊಂದು ಹಣ ದೋಚಿರಬಹುದು ಎಂದು ಶಂಕಿಸಲಾಗಿದೆ. ಮಂಗಳವಾರ ರಾತ್ರಿ ಹಾಲು ಹಾಕಲೆಂದು ಹಳ್ಳಿಗೆ ಹೋಗಿದ್ದ ರೆಡ್ಡಿ, ತುಂಬಾ ಹೊತ್ತಾದರೂ ವಾಪಸ್ ಬರಲಿಲ್ಲ. ಗಾಬರಿಗೊಂಡ ಕುಟುಂಬಸ್ಥರು ಹುಡುಕಾಡಿದಾಗ ಆತನ ಬೈಕ್ ಮತ್ತು ಮೊಬೈಲ್ ರಸ್ತೆ ಮಧ್ಯ ಬಿದ್ದಿದ್ದು ಗಮನಕ್ಕೆ ಬಂದಿದೆ. ನಂತರ ಇನ್ನಷ್ಟು ಹುಡುಕಾಡಿದಾಗ ಕೈಕಾಲುಗಳನ್ನು ಕಟ್ಟಿದ ಸ್ಥಿತಿಯಲ್ಲಿ ರೆಡ್ಡಿಯ ಮೃತ ದೇಹ ಮರವೊಂದರ ಕೆಳಗೆ ಪತ್ತೆಯಾಗಿತ್ತು. ಹತ್ಯೆಗೀಡಾಗಿರುವ ರೆಡ್ಡಿಯ ಇಬ್ಬರು ಪುತ್ರಿಯರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

    ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?

    ಈತ ಗಂಡಸಿಯ ಸಾಹಸಿ: ಚಿರತೆಯನ್ನು ಹಿಡಿದು ಬೈಕ್​ಗೆ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಗೆ ಒಪ್ಪಿಸಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts