More

    ಹಿಮಾಚಲದಲ್ಲಿ ಗೆದ್ದ ಜೈರಾಮ್​ ಠಾಕೂರ್​ ಕರ್ನಾಟಕದ ಅಳಿಯ!

    ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತೀವ್ರ ಪೈಪೋಟಿ ನಡೆಸಿದ್ದವು. ಆದರೆ ಇದೀಗ ಕಾಂಗ್ರೆಸ್​ 38 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಹಿಂದಿಕ್ಕಿದ್ದು ಸ್ಪಷ್ಟ ಚಿತ್ರಣ ಕೆಲವೇ ಕ್ಷಣಗಳಲ್ಲಿ ಬರಲಿದೆ. ಈ ನಡುವೆ ಕರ್ನಾಟಕದ ಅಳಿಯ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂಬ ವಿಶೇಷ ಸುದ್ದಿ ಬೆಳಕಿಗೆ ಬಂದಿದೆ.

    ಕರ್ನಾಟಕದ ಅಳಿಯ ಹಾಗೂ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿ ಜೈರಾಮ್ ಠಾಕೂರ್ ಬರೋಬ್ಬರಿ 20 ಸಾವಿರ ಮತಗಳ ಅಂತರದಿಂದ ಸೆರಾಜ್ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಹಿಮಾಚಲ ಪ್ರದೇಶದ ಹಾಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ತಮ್ಮಮ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೂ ಇಡೀ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಗೆಲುವಿನ ವಿಶ್ವಾಸದಲ್ಲಿಯೇ ಗುರುವಾರ ಪತ್ನಿ ಸಾಧನಾ ಠಾಕೂರ್ ಹಾಗೂ ಮಕ್ಕಳೊಂದಿಗೆ ಅವರು ದೇವಸ್ಥಾನ ಭೇಟಿ ಮಾಡಿ ಪೂಜೆ ಸಲ್ಲಿಸಿದ್ದರು.

    57 ವರ್ಷದ ಜೈರಾಮ್ ಠಾಕೂರ್ ಪತ್ನಿ ಸಾಧನಾ ಠಾಕೂರ್, ಮೂಲತಃ ಶಿವಮೊಗ್ಗದವರು. ಇವರಿಗೆ ಚಂದ್ರಿಕಾ ಠಾಕೂರ್ ಹಾಗೂ ಪ್ರಿಯಾಂಕಾ ಠಾಕೂರ್ ಎನ್ನುವ ಮುಬ್ಬಾದ ಇಬ್ಬರು ಪುತ್ರಿಯರಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಸಾಧನಾ ಠಾಕೂರ್ ಮೂಲ ಹೆಸರು ಸಾಧನಾ ರಾವ್ ಎಂದು. ಈ ಹಿಂದೆ ಕೆಲ ಕಾಲ ಅವರು ಬೆಂಗಳೂರಿನಲ್ಲಿಯೂ ವಾಸವಿದ್ದರು.

    ತಮ್ಮ ಬಾಲ್ಯದಲ್ಲಿಯೇ ಸಾಧನಾ ಠಾಕೂರ್​ ಜೈಪುರಕ್ಕೆ ಶಿಫ್ಟ್ ಆಗಿದ್ದರು. ಆದರೆ ಇಂದಿಗೂ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ! ಅವರ ತಂದೆ ಶ್ರೀನಾಥ್ ರಾವ್ ಆರೆಸ್ಸೆಸ್ ಮೂಲದವರು. ಸಾಧನಾ ಠಾಕೂರ್​ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಎಂಬಿಬಿಎಸ್ ಪದವಿಯನ್ನು ಪೂರೈಸಿದ್ದರು. ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದರೂ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ಸಕ್ರಿಯ ಸದಸ್ಯರಾಗಿದ್ದರು.

    ಜಮ್ಮು ಕಾಶ್ಮೀರದಲ್ಲಿ ಪೂರ್ಣ ಪ್ರಮಾಣದ ಎಬಿವಿಪಿ ಕಾರ್ಯಕರ್ತೆಯಾಗಿದ್ದಾಗ ಜೈರಾಮ್ ಠಾಕೂರ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಅಲ್ಲಿಂದ ಇವರ ಪ್ರೇಮ ಶುರುವಾಗಿ ಬಳಿಕ ವಿವಾಹವಾಗಿದ್ದರು.

    ತಮ್ಮ ಕರ್ನಾಟಕ ಮೂಲದ ಬಗ್ಗೆ ಮಾತನಾಡುವಾಗ ಸಾಧನಾ ಠಾಕೂರ್​ ‘ಈಗಲೂ ನನ್ನ ಸಂಬಂಧಿಕರು ಶಿವಮೊಗ್ಗದಲ್ಲಿಯೇ ಇದ್ದಾರೆ. ಇನ್ನೂ ಕೆಲವು ಸಂಬಂಧಿಕರು ಬೆಂಗಳೂರಿನಲ್ಲಿ ಇದ್ದಾರೆ. ಎಬಿವಿಪಿಯಿಂದಾಗಿ ನಾವು ಮೊದಲ ಬಾರಿಗೆ ಪರಿಚಿತರಾಗಿದ್ದೆವು. ನಾವಿಬ್ಬರು ಸ್ನೇಹಿತರಾಗಿದ್ದೆವು. ಬಳಿಕ ಕುಟುಂಬದವರ ಅನುಮತಿ ಪಡೆದು ವಿವಾಹವಾಗಿದ್ದೆವು. ಬೆಂಗಳೂರಿಗಾಗಲಿ, ಶಿವಮೊಗ್ಗಕ್ಕಾಗಿ ಮೊದಲಿನಷ್ಟು ಬರೋದಿಲ್ಲ. ಈಗ ತೀರಾ ಅಪರೂಪವಾಗಿದೆ’ ಎಂದು ಹೇಳುತ್ತಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts