More

    ರಾಮ ಜಪ ಮಾಡಿದ ‘ರಾಬರ್ಟ್’ … ಶಂಕರ್ ಮಹಾದೇವನ್ ಧ್ವನಿಯಲ್ಲಿ ‘ಜೈ ಶ್ರೀರಾಮ್ …’

    ರಾಮನವಮಿ ಪ್ರಯುಕ್ತ ‘ರಾಬರ್ಟ್’ ಚಿತ್ರದ ‘ಜೈ ಶ್ರೀರಾಮ್ …’ ಹಾಡಿನ ಮುಂದುವರೆದ ಭಾಗವನ್ನು ಬಿಡುಗಡೆ ಮಾಡುವುದಕ್ಕೆ ಎರಡು ದಿನಗಳ ಹಿಂದೆ ನಿರ್ದೇಶಕ ತರುಣ್ ಸುಧೀರ್ ಘೋಷಿಸಿದ್ದರು. ಅದರಂತೆ ಗುರುವಾರ ಬೆಳಿಗ್ಗೆ ಯೂಟ್ಯೂಬ್‌ನ ಆನಂದ್ ಆಡಿಯೋ ಚಾನಲ್‌ನಲ್ಲಿ ಹಾಡು ಬಿಡುಗಡೆಯಾಗಿದೆ.

    ‘ಜೈ ಶ್ರೀರಾಮ್’ ಹಾಡು ಮಾರ್ಚ್ 9ರಂದೇ ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯವಾಗಿದೆ. ಅದಾದ ಮೇಲೆ ‘ದೋಸ್ತ’ ಎಂಬ ಇನ್ನೊಂದು ಹಾಡು ಸಹ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯವಾದ ನಂತರವೂ ‘ಜೈ ಶ್ರೀರಾಮ್’ ಮತ್ತೊಮ್ಮೆ ಬಿಡುಗಡೆಯಾಗುತ್ತಿರುವುದಕ್ಕೆ ಕಾರಣವೂ ಇದೆ. ಪ್ರಮುಖವಾಗಿ, ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರ ಏಪ್ರಿಲ್ 9ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಇಡೀ ದೇಶವೇ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಹೀಗಿರುವಾಗ ಚಿತ್ರದ ಮತ್ತೊಂದು ಹಾಡು ಅಥವಾ ಟೀಸರ್ ಬಿಡುಗಡೆ ಮಾಡುವುದಕ್ಕೆ ದರ್ಶನ್ ಅವರ ಅಭಿಮಾನಿಗಳು ಚಿತ್ರತಂಡಕ್ಕೆ ಮನವಿ ಸಲ್ಲಿಸಿದ್ದರು. ಹಾಗಾಗಿ ‘ಜೈ ಶ್ರೀರಾಮ್’ ಹಾಡಿನ ಹೊಸ ವರ್ಷನ್ ಬಿಡುಗಡೆ ಮಾಡಲಾಗಿದೆ.

    ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ‘ರಾಮ ನಾಮ ಹಾಡಿರೋ ರಾಮ ಬರುವನು, ಅವನ ಹಿಂದೆ ಹನುಮನು ಇದ್ದೇ ಇರುವನು …’ ಎಂದು ಸಾಗುವ ಈ ಹಾಡನ್ನು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಇನ್ನು ಶಂಕರ್ ಮಹದೇವನ್ ಹಾಡಿದ್ದಾರೆ. ಈ ಲಿರಿಕಲ್ ವೀಡಿಯೋದಲ್ಲಿ ಶಂಕರ್ ಮಹದೇವನ್ ಹಾಡಿರುವ ತುಣುಕುಗಳ ಜತೆಗೆ, ಚಿತ್ರೀಕರಣದ ತುಣುಕುಗಳನ್ನು ಸಹ ಸೇರಿಸಲಾಗಿದೆ. ಬಿಡುಗಡೆಯಾದ ಎರಡೇ ತಾಸಿನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿರುವ ಈ ಹಾಡು, ಚಿತ್ರದ ಹೈಲೈಟ್ ಎಂದು ಹೇಳಲಾಗಿದೆ.

    ರಾಮನವಮಿಗೆ ಪೊಗರಿನ ಖರಾಬು ತೋರಿಸಲು ಧ್ರುವ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts