More

    ‘ಕಾಟೇರ’ ಲೇಟ್​ ನೈಟ್​ ಪಾರ್ಟಿ ಸಂಕಷ್ಟ; ನಟ ದರ್ಶನ್​ ಸೇರಿ 8 ಮಂದಿಗೆ ವಿಚಾರಣೆಗೆ ಹಾಜರು

    – ಕಾಟೇರ ಸಿನಿಮಾ ತಂಡ ವಿಚಾರಣೆಗೆ ಹಾಜರು

    ಬೆಂಗಳೂರು: ಜೆಟ್​ ​ಲ್ಯಾಗ್ ಪಬ್​ನಲ್ಲಿ ನಟ ದರ್ಶನ್ ಕಾಟೇರ ಸಿನಿಮಾ ಸಕ್ಸಸ್​​ ಪಾರ್ಟಿಯನ್ನು ಆಯೋಜಿಸಿದ್ದರು. ರಾಜಾಜಿನಗರದ ಜಟ್ಲಾಗ್ ರೆಸ್ಟೋಬಾರ್ ನಲ್ಲಿ ಭರ್ಜರಿಯಾಗಿ ನಡೆಸಲಾಗಿತ್ತು. ನಿಯಮ ಉಲ್ಲಂಘಿಸಿ ಬೆಳಗ್ಗಿನವರೆಗೂ ಸ್ಯಾಂಡಲ್‌ವುಡ್‌ನ ಹಲವು ನಟ ನಟಿಯರು ಪಾರ್ಟಿ ಮಾಡಿದ್ದು, ಜೆಟ್ಲಾಗ್ ರೆಸ್ಟೋಬಾರ್ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೀಗ ಸ್ಯಾಂಡಲ್​ವುಡ್​ನ ಹಲವು ನಟ ನಟಿಯರಿಗೆ ನೋಟಿಸ್​ ಜಾರಿ ಮಾಡಿದ್ದ ಬೆನ್ನಲ್ಲೆ ಸ್ಯಾಂಡಲ್​ವುಡ್​ನ ಹಲವು ಕಲಾವಿದರು ವಿಚಾರಣೆಗೆ ಹಾಜರಾಗಿದ್ದಾರೆ.

    ಅಭಿಷೇಕ್ ಅಂಬರೀಷ್ ಸೇರಿ ಅನೇಕ ಸೆಲೆಬ್ರೆಟಿಗಳು ಮುಂಜಾನೆವರೆಗೆ ಪಾರ್ಟಿ ಮಾಡಿದ್ದರು. ಈ ಪ್ರಕರಣ ಸಾಕಷ್ಟು ಸುದ್ದಿ ಆಗಿತ್ತು. ಈ ಪ್ರಕರಣದಲ್ಲಿ ಪಬ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪಾರ್ಟಿಯಲ್ಲಿ ಭಾಗಿ ಆದ ನಟ ದರ್ಶನ್, ಅಭಿಷೇಕ್, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ನಟರಾದ ಡಾಲಿ ಧನಂಜಯ್, ಚಿಕ್ಕಣ್ಣ, ನಿನಾಸಂ ಸತೀಶ್ ಹಾಗೂ ನಿರ್ದೇಶಕ ತರುಣ್ ಸುಧೀರ್​ಗೆ​ ನೋಟಿಸ್ ಜಾರಿ ಆಗಿತ್ತು.   ವಿದೇಶ ಪ್ರವಾದಸದಲ್ಲಿದ್ದ ಚಿತ್ರತಂಡ ಇದೀಗ ವಿಚಾರಣೆಗೆ ಹಾಜರಾಗಿದೆ.

    ಈ ಪಾರ್ಟಿಯಲ್ಲಿ ಭಾಗಿ ಆದ ನಟ ದರ್ಶನ್, ಅಭಿಷೇಕ್, ರಾಕ್​ಲೈನ್ ವೆಂಕಟೇಶ್, ಡಾಲಿ ಧನಂಜಯ್, ನಿನಾಸಂ ಸತೀಶ್ ಹಾಗೂ ತರುಣ್ ಸುಧೀರ್, ವಿ ಹರೀಕೃಷ್ಣ ಮತ್ತು ಇನ್ನಿತರ ಕಲಾವಿಧರು ಸುಬ್ರಹ್ಮಣ್ಯ ನಗರ ಪೊಲೀಸ್​​ ಠಾಣೆ ಮುಂದೆ ಹಾಜರಾಗಿದ್ದಾರೆ.

    ಬೆಂಗಳೂರಿನ ಒರಾಯನ್‌ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್​​ನಲ್ಲಿ ಪಾರ್ಟಿ ಮಾಡಿದ್ದರು. ಜನವರಿ‌ 3ರಂದು‌ ರಾತ್ರಿ‌ ಪಬ್​ಗೆ ಇವರು ಬೆಳಗಿನಜಾವದವರೆಗೆ ಪಾರ್ಟಿ ಮಾಡಿದ್ದರು. ನಿಯಮದ ಪ್ರಕಾರ ತಡರಾತ್ರಿ 1 ಗಂಟೆವರೆಗೆ ಮಾತ್ರ ಪಬ್ ಓಪನ್ ಇಡಲು ಅವಕಾಶ ಇದೆ. ಆದರೆ, ನಿಯಮವನ್ನು ಇಲ್ಲಿ ಮೀರಲಾಗಿದೆ. ಲೇಟ್‌ ನೈಟ್‌ ಪಾರ್ಟಿಯಲ್ಲಿದ್ದವರು ಯಾರ್ಯಾರು ಎಂಬ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಹೀಗಾಗಿ ಪಾರ್ಟಿಯಲ್ಲಿದ್ದ ಸ್ಟಾರ್ ಗಳಿಗೆ ವಿಚಾರಣೆಯ ಟೆನ್ಶನ್ ಆರಂಭವಾಗಿದೆ. ಜೆಟ್ ಲ್ಯಾಗ್ ಪಬ್ ನಲ್ಲಿ ಬೆಳಗಿನ ಜಾವದವರೆಗೂ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿಯಲ್ಲಿದ್ದ ಸ್ಟಾರ್ ಗಳಿಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ. ಸುಬ್ರಮಣ್ಯನಗರ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಈಗಾಗಲೇ ಕ್ಲೋಸಿಂಗ್ ಟೈಮ್ ಮುಗಿದರೂ ಅಲ್ಲೇ ಪಾರ್ಟಿಗೆ ಅವಕಾಶ ನೀಡಿದ ಹಿನ್ನೆಲೆ ಜೆಟ್ಲಾಗ್ ರೆಸ್ಟೋಬಾರ್ ಮಾಲೀಕರಾದ ಶಶಿರೇಖಾ ಮತ್ತು ಮ್ಯಾನೇಜರ್‌ ಪ್ರಶಾಂತ್ ವಿರುದ್ದ ಎಫ್ಐಆರ್ ದಾಖಲು ಮಾಡಲಾಗಿದೆ.

    ಎಫ್ಐಆರ್​ನಲ್ಲಿರುವುದೇನು?: ಅಬಕಾರಿ ಕಾಯಿದೆ ಷರತ್ತುಗಳ ಪ್ರಕಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 1 ಗಂಟೆಯವರೆಗೆ ಮಾತ್ರ ರೆಸ್ಟೋಬಾರ್ ತೆರೆಯಲು ಅವಕಾಶವಿದೆ. ಆದರೆ ಜಟ್ಲಾಗ್ ರೆಸ್ಟೋಬಾರ್ ಈ ನಿಮಯಮ ಉಲ್ಲಂಘಿಸಿ ಬೆಳಗಿನ ಜಾವ 3.30ರವರೆಗೂ ಪಾರ್ಟಿ ಮಾಡಲು ಸೆಲೆಬ್ರಿಟಿಗಳಿಗೆ ಅವಕಾಶ ಕೊಟ್ಟಿತ್ತು. ರೆಸ್ಟೋಬಾರ್ ಬೆಳಗ್ಗಿನ ಜಾವ 3 ಗಂಟೆಯಾದ್ರೂ ತೆಗೆದೇ ಇರುವ ಬಗ್ಗೆ ಸ್ಥಳೀಯರು ಸುಬ್ರಹ್ಮಣ್ಯ ನಗರ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಜಟ್ಲಾಗ್ ರೆಸ್ಟೋಬಾರ್ ಮೇಲೆ ದಾಳಿ‌ ನಡೆಸಿದ್ದ ಪೊಲೀಸರು ಕೂಡಲೇ ಬಾರ್ ಕ್ಲೋಸ್ ಮಾಡಿಸಿ 3.30ರ ಸುಮಾರಿಗೆ ಜೆಟ್ಲಾಗ್ ನಲ್ಲಿ ಪಾರ್ಟಿ ಮಾಡ್ತಿದ್ದ ಸೆಲೆಬ್ರಿಟಿಗಳನ್ನ ಮನೆಗೆ ಕಳುಹಿಸಿದ್ದರು.

    ‘ಕಾಟೇರ’ ಸಕ್ಸಸ್‌ ಪಾರ್ಟಿ; ನಟ ದರ್ಶನ್​ ಸೇರಿ 8 ಮಂದಿಗೆ ನೋಟಿಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts