More

    ಜಗ್ಗೇಶ್​ ಹೆಸರಲ್ಲಿ ನಕಲಿ ಟ್ವಿಟರ್ ಅಕೌಂಟ್!; ಖಾತೆ ತೆರೆದವನಿಗೆ ಎದುರಾಯ್ತು ಸಂಕಷ್ಟ

    ಬೆಂಗಳೂರು: ಸೋಷಿಯಲ್​ ಮೀಡಿಯಾದಲ್ಲಿ ಫೇಕ್​ ಖಾತೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸ್ಟಾರ್ ಕಲಾವಿದರ ಹೆಸರಲ್ಲಿ ಸಾಕಷ್ಟು ಫೇಕ್​ ಅಕೌಂಟ್​ಗಳನ್ನು ತೆರೆಯುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಇದರಿಂದ ಸ್ಟಾರ್ ನಟರು ಮುಜುಗರಕ್ಕೀಡಾದ ಉದಾಹರಣೆಗಳೂ ನಡೆದಿವೆ. ಇದೀಗ, ನವರಸ ನಾಯಕ ಜಗ್ಗೇಶ್​ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಲಾಗಿದ್ದು, ಇದು ಜಗ್ಗೇಶ್​ ಅವರ ಗಮನಕ್ಕೂ ಬಂದಿದೆ. ಅಷ್ಟೇ ಅಲ್ಲ, ಹಾಗೆ ಮಾಡಿದವರಿಗೆ ಬಿಸಿಯನ್ನೂ ಮುಟ್ಟಿಸಲಾಗಿದೆ.

    ಇದನ್ನೂ ಓದಿ: ಎಂದೂ ನೀವಿಲ್ಲ ಎಂದುಕೊಂಡಿಲ್ಲ.. ಚಿಕ್ಕವನು ನಾನು.. ಕೈ ಹಿಡಿದು ಮುನ್ನಡೆಸಿ; ಅನಿರುದ್ಧ್​

    ‘ಹಿಂದಿ ಹೇರಿಕೆ ಬಗ್ಗೆ ಅಭಿಪ್ರಾಯ ಹೇಳಿ ಎಂದು ಜನರ ಒತ್ತಾಯಕ್ಕೆ ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ನನ್ನ ಮನಃಸಾಕ್ಷಿ ಅರಿತು ಈ ಮಾತು ಹೇಳುತ್ತಿದ್ದೇನೆ. ಕರ್ನಾಟಕ ಮತ್ತು ಕನ್ನಡಕ್ಕಿಂತ ಹೆಚ್ಚಾಗಿ ಯಾವುದೂ ಇಲ್ಲ, ಯಾರು ಇಲ್ಲ. ಆದರೆ ರಾಜಕೀಯ ಮತ್ತು ಪಕ್ಷ ಮತ್ತು ಐಟಿ ಈಡಿಗೆ ಹೆದರಿ ಬಹಳಷ್ಟು ನಟರುಗಳ ಹಾಗೆ ನಾನು ಮೂಕನಾಗಬೇಕಾಯಿತು ಕ್ಷಮಿಸಿ’ ಎಂದು ಫೇಕ್​ ಖಾತೆಯಿಂದ ಟ್ವಿಟ್​ ಮಾಡಲಾಗಿದ್ದು, ಈ ವಿಚಾರ ಜಗ್ಗೇಶ್​ ಗಮನಕ್ಕೆ ಬಂದಿದ್ದೇ ತಡ, ಸೈಬರ್​ ಕ್ರೈಂಗೆ ದೂರು ನೀಡಿದ್ದಾರೆ.

    ಜಗ್ಗೇಶ್​ ಹೆಸರಲ್ಲಿ ನಕಲಿ ಟ್ವಿಟರ್ ಅಕೌಂಟ್!; ಖಾತೆ ತೆರೆದವನಿಗೆ ಎದುರಾಯ್ತು ಸಂಕಷ್ಟ

    ಇದನ್ನೂ ಓದಿ: ವಿಷ್ಣುವರ್ಧನ್, ಉಪೇಂದ್ರ ಮತ್ತು ಶ್ರುತಿಗೆ ಸ್ಯಾಂಡಲ್​ವುಡ್​ ಕಡೆಯಿಂದ ಶುಭಾಶಯ

    ‘Online complaint ಕೊಟ್ಟಿರುವೆ. ಈ ರೀತಿಯ ಯತ್ನಗಳಿಗೆ ನಾನು ಹೆದರುವುದಿಲ್ಲ. ನನ್ನ ಅಭಿಮಾನಿಗಳು ನಂಬುವುದಿಲ್ಲ. ನಿಮ್ಮ ಕಾರ್ಯ ನೀವು ಮುಂದುವರಿಸಿ ನಮ್ಮ ಕಾರ್ಯ ನಾವು ಮಾಡುತ್ತೇವೆ. ಒಟ್ಟಿನಲ್ಲಿ ತಂತ್ರಜ್ಞಾನ ಬಳಕೆ ಮಜವಾಗಿದೆ. best of luck ಭೇಟಿಯಾಗುವ’ ಎಂದು ದೂರು ನೀಡಿದ ಬಗ್ಗೆ ಟ್ವಿಟರ್​ನಲ್ಲಿ ವಾಟ್ಸಾಪ್​ ಸ್ಕ್ರೀನ್​ ಶಾಟ್​ ಶೇರ್​ ಮಾಡಿಕೊಂಡಿದ್ದಾರೆ.

    100 ಕೋಟಿ ಬಜೆಟ್​ನ ಸಿನಿಮಾದಲ್ಲಿ ಉಪ್ಪಿ ಪಾತ್ರ ಹೇಗಿರಲಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts