More

    ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಪರಿಸರ ಸ್ನೇಹಿ

    ಜಗಳೂರು: ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳ ಬಳಸುವುದು ಪರಿಸರ ಸ್ನೇಹಿಯಾಗಿದೆ ಎಂದು ಜಿಲ್ಲಾ ವಾಯು ಮಾಲಿನ್ಯ ನಿಯಂತ್ರಣಾಧಿಕಾರಿ ಲಕ್ಷಿ ್ಮೀಕಾಂತ್ ಹೇಳಿದರು.

    ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಪಟ್ಟಣ ಪಂಚಾಯಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಯೂತ್ ಫಾರ್ ಸೇವಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು.

    ಭೂಮಿ ಮೇಲಿರುವ ಸಕಲ ಜೀವರಾಶಿಗಳಿಗೂ ಮಣ್ಣು, ನೀರು, ಮರ ಬಹುಮುಖ್ಯ. ಇದರಲ್ಲಿ ಒಂದಿಲ್ಲವಾದರೂ ಬದುಕುವುದು ಕಷ್ಟವಾಗುತ್ತದೆ. ಆದ್ದರಿಂದ ಎಲ್ಲವನ್ನು ಮಿತವಾಗಿ ಬಳಸಿ ಉಳಿಸಬೇಕು ಎಂದು ತಿಳಿಸಿದರು.

    ಸಿಪಿಐ ಶ್ರೀನಿವಾಸ್ ಮಾತನಾಡಿ, ಪಿಒಪಿ, ಬಣ್ಣಲೇಪಿತ ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ತಡೆಯಬೇಕು. ಮಣ್ಣಿನ ಗಣೇಶ ಮೂರ್ತಿಯನ್ನು ನೀರಿನಲ್ಲಿಟ್ಟು ಕರಗಿಸಿ ಅದನ್ನು ಸಸಿಗಳಿಗೆ ಹಾಕಿದರೆ ಸಮೃದ್ಧಿಯಾಗಿ ಬೆಳೆಯುತ್ತವೆ ಎಂದರು.

    ಯೂತ್ ಫಾರ್ ಸೇವಾ ಮುಖ್ಯಸ್ಥ ದಿದ್ದಿಗಿ ಪ್ರಶಾಂತ್ ಅವರು ಗಣೇಶ ಮೂರ್ತಿ ತಯಾರಿಗೆ ತರಬೇತಿ ನೀಡಿದರು. ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಆರೋಗ್ಯ ನಿರೀಕ್ಷಕ ಕಿಫಾಯಿತ್, ಶಿಕ್ಷಕ ರಮೇಶ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts