More

    ಆಧುನಿಕರಣದ ಭರಾಟೆಗೆ ಸೊರಗುತ್ತಿದೆ ಗ್ರಾಮೀಣ ಜನಪದ

    ಜಗಳೂರು: ಆಧುನಿಕ ಜೀವನ ಶೈಲಿ ಅಳವಡಿಕೆಯಿಂದ ನಮ್ಮ ಗ್ರಾಮೀಣ ಜಾನಪದದ ಸತ್ವ ಸೊರಗುತ್ತಿದೆ ಎಂದು ಜಗಳೂರು ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ವಿಷಾದಿಸಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಗಳೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಿರಿಜನ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಗ್ರಾಮೀಣ ಸೊಗಡಿನ ಸವಿ ಕಾಪಾಡುವ ಹೊಣೆ ನಮ್ಮ ಮೇಲಿದೆ ಎಂದರು.

    ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಳ್ಳಿಗಾಡಿನ ಯುವಕರ ಕಲೆಯನ್ನು ಗುರುತಿಸಿ ಪ್ರೋತಾಹಿಸುತ್ತಿರುವುದು ಶ್ಲಾಘನೀಯ. ಇಂತಹ ಕೆಲಸಗಳು ಹೆಚ್ಚಬೇಕು ಎಂದು ಆಶಿಸಿದರು.

    ಈ ಹಿಂದೆ ಕೃಷಿಕರು ಆಚರಿಸುವ ಹಬ್ಬ ಹಾಗೂ ಜಾತ್ರೆಯ ವೇಳೆ ಭಾರ ಎತ್ತುವುದು,ಗುಂಡು ಎಸೆಯುವುದು, ಕಬಡ್ಡಿ, ಕುಸ್ತಿ, ಗೀಗೀ ಪದ, ಡೊಳ್ಳು ಕುಣಿತ, ಬಯಲಾಟ ಪ್ರದರ್ಶನಗಳು ಸಾಮಾನ್ಯವಾಗಿದ್ದವು. ಪೀಳಿಗೆಯಿಂದ ಪೀಳಿಗೆಗೆ ಈ ಕಲೆಗಳು ಕರಗತವಾಗಿ ಹರಿದು ಬರುತ್ತಿತ್ತು. ಆದರೆ ನಾವೀಗ ಸುಧಾರಣೆಯ ಸೋಗಿನಲ್ಲಿ ಮರೆಯಬಾರದು ಎಂದರು.

    ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ಸಂಗೀತ, ಕಲೆ, ಕುಣಿತ, ಹಾಡುಗಾರರ ಪ್ರತಿಭೆಗೆ ವೇದಿಕೆ ವೇದಿಕೆ ಕಲ್ಪಿಸುವ ಮೂಲಕ ಕಲೆ ಹಾಗೂ ಸಂಸ್ಕೃತಿ ರಕ್ಷಿಸಲಾಗುತ್ತಿದೆ ಎಂದರು.

    ಉತ್ಸವಕ್ಕೆ ಕಳೆ ತಂದ ಕಲಾ ತಂಡಗಳು: ಗಿರಿಜನ ಉತ್ಸವಕ್ಕೆ ಜನಪದ ಕಲಾತಂಡಗಳು ಕಳೆ ತಂದವು. ವಿವಿಧ ಕಲಾ ತಂಡಗಳು ತಮ್ಮ ನೈಪುಣ್ಯ ಪ್ರದರ್ಶಿಸಿದವು. ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ಹೊಸ ಬಸ್ ನಿಲ್ದಾಣ, ಡಾ. ರಾಜ್‌ಕುಮಾರ್ ರಸ್ತೆ, ಮಹಾತ್ಮಗಾಂಧಿ ಹಳೇ ವೃತ್ತ, ಪ್ರವಾಸ ಮಂದಿರ ರಸ್ತೆಯ ಮೂಲಕ ಬಯಲು ರಂಗ ಮಂದಿರಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಬೇಡರ ಪಡೆ, ವೀರಗಾಸೆ, ಕೋಲಾಟ, ಸುಗಮ ಸಂಗೀತ ಸೇರಿ ನಾನಾ ಕಲಾ ತಂಡಗಳ ಪ್ರದರ್ಶನ ಜನಮನ ಸೆಳೆದವು.

    ಕೆಪಿಸಿಸಿ ಪ.ಪಂಗಡ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ, ಸಾಹಿತಿ ಎನ್.ಟಿ. ಎರ‌್ರಿಸ್ವಾಮಿ, ಬಿಇಒ ಹಾಲುಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಬಿ. ಮಹೇಶ್ವರ್, ಜಿಪಂ ಎಇಇ ಶಿವಮೂರ್ತಿ, ದೈಹಿಕ ನಿರ್ದೇಶಕ ಸುರೇಶ್ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶೇಖರಪ್ಪ ಪಲ್ಲಾಗಟ್ಟೆ, ಪಪಂ ಸದಸ್ಯ ಸಣ್ಣ ತಾನಾಜಿ ಗೋಸಾಯಿ, ಮುಖಂಡರಾದ ಕಾನನಕಟ್ಟೆ ಪ್ರಭು, ಮಾಳಮ್ಮನಹಳ್ಳಿ ವೆಂಕಟೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts