ನವದೆಹಲಿ: ಕಳೆದ ಕೆಲವು ತಿಂಗಳ ಹಿಂದೆ ಭಾರತ ಸರ್ಕಾರದ ಜತೆ ಸಂಘರ್ಷದ ಮೂಲಕ ಭಾರಿ ಸುದ್ದಿಯಲ್ಲಿದ್ದ ಟ್ವಿಟರ್ ಈಗ ಮತ್ತೊಮ್ಮೆ ತನ್ನ ಆಡಳಿತಾತ್ಮಕ ವಿಷಯಕ್ಕೆ ಸುದ್ದಿಯಲ್ಲಿದೆ. ಅಷ್ಟಕ್ಕೂ ಟ್ವಿಟರ್ ಬಗ್ಗೆ ಈಗ ಬಹುತೇಕರು ಮಾತನಾಡುವಂತಾಗಲು ಕಾರಣ ಟ್ವಿಟರ್ ಸಿಇಒ. ಹೌದು.. ಟ್ವಿಟರ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ಜಾಕ್ ಡಾರ್ಸಿ ನೀಡಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕರಲ್ಲಿ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿದೆ ಬಿಎಸ್ಎನ್ಎಲ್ ಪ್ರೇಮ; ಕಾರಣ ಆ ಮೂವರು…
ಸೋಷಿಯಲ್ ಮೀಡಿಯಾದ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ಟ್ವಿಟರ್ನ ಸಹ ಸಂಸ್ಥಾಪಕರೂ ಆಗಿರುವ ಜಾಕ್, 2006ರಲ್ಲಿ ಟ್ವಿಟರ್ ಆರಂಭಿಸುವಲ್ಲಿ ಕೈಜೋಡಿಸಿದ್ದರು. ಆದರೆ 2020ರಲ್ಲಿ ಟ್ವಿಟರ್ ಷೇರ್ಹೋಲ್ಡರ್ ಪೈಕಿ ಒಂದಾಗಿರುವ ಎಲಿಯಟ್ ಮ್ಯಾನೇಜ್ಮೆಂಟ್ ಟ್ವಿಟರ್ ಸಿಇಒ ಸ್ಥಾನದಿಂದ ಜಾಕ್ ಅವರನ್ನು ತೆರವುಗೊಳಿಸಲು ಯತ್ನಿಸಿತ್ತು.
ಇದನ್ನೂ ಓದಿ: ಮದುವೆ ಆಗ್ತಿದ್ದಾರೆ ‘ರಾಧಾ ರಮಣ’ ಸೀರಿಯಲ್ ನಟಿ ಕಾವ್ಯಾ ಗೌಡ; ಆ ನಂತರವೂ ನಟನೆ ಮುಂದುವರಿಸುತ್ತಾರಾ?
ಜಾಕ್ ತಾವೇ ರೂಪಿಸಿರುವ ಹಣಕಾಸು ಪಾವತಿ ಕಂಪನಿ ಸ್ಕ್ವೇರ್ನ ಮುಖ್ಯಸ್ಥರಲ್ಲೂ ಒಬ್ಬರಾಗಿದ್ದು, ಅದರ ಜತೆಗೆ ಟ್ವಿಟರ್ ಕೂಡ ನಿಭಾಯಿಸಲು ಸಮರ್ಥರೇ ಎಂದು ಒಂದಷ್ಟು ಹೂಡಿಕೆದಾರರು ಬಹಿರಂಗವಾಗಿಯೇ ಪ್ರಶ್ನಿಸಿದ್ದರು. ಅದಾಗ್ಯೂ ಒಂದುಮಟ್ಟಿಗೆ ಸಮರ್ಥವಾಗಿಯೇ ನಿಭಾಯಿಸಿದ ಜಾಕ್ ಇತ್ತೀಚೆಗೆ ಕ್ರಿಪ್ಟೋಕರೆನ್ಸಿ ಕುರಿತು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ದನ ಕೊಳ್ಳಲು ಹಣವಿಲ್ಲ ಎಂಬ ಚಿಂತೆಯಲ್ಲಿದ್ದವರ ಬ್ಯಾಂಕ್ ಖಾತೆಗೆ ಬಂತು 2 ಕೋಟಿ ರೂಪಾಯಿ!; ಕಾರಣ ‘ಕೌ ಇನ್ಸ್ಪೆಕ್ಟರ್’ ಝಾನ್ಸಿ..
ಇವೆಲ್ಲದರ ನಡುವೆ ಜಾಕ್ ರಾಜೀನಾಮೆಗೆ ಮುಂದಾಗಿರುವುದು ಯಾಕೆ ಎಂಬುದರ ಕುರಿತು ಖಚಿತ ಮಾಹಿತಿ ಹೊರಬಿದ್ದಿಲ್ಲ. ಆದರೆ ಹೊಸ ಸಿಇಒ ಆಗಿ ಪರಾಗ್ ಅಗರ್ವಾಲ್ ಜವಾಬ್ದಾರಿ ವಹಿಸಿಕೊಳ್ಳಲಿರುವ ಕುರಿತು ಜಾಕ್ ತಿಳಿಸಿದ್ದಾರೆ. ಟ್ವಿಟರ್ನಲ್ಲಿನ ಈ ಬೆಳವಣಿಗೆ ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಕುತೂಹಲ ಕೆರಳಿಸಿದೆ.
ಒಮಿಕ್ರಾನ್ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!
ಪುನೀತ್ ಸಾವಿಗೆ ನಿಜವಾದ ಕಾರಣ ಏನು ಎಂಬುದನ್ನು ಬಿಚ್ಚಿಟ್ಟ ರಾಘವೇಂದ್ರ ರಾಜಕುಮಾರ್