More

    ಲಸಿಕೆ ಹಾಕುವವರ ಸೋಗಿನಲ್ಲಿ ಮನೆಗೆ ಬಂದು, ಪಿಸ್ತೂಲ್​ ತೋರಿಸಿ ಹೆದರಿಸಿ ದರೋಡೆ!

    ಬೆಂಗಳೂರು: ಯಾರಾದರೂ ಲಸಿಕೆ ಹಾಕಿಸುವುದಾಗಿ ಮನೆ ಬಳಿಗೆ ಬಂದರೂ ಇನ್ನು ಜಾಗ್ರತೆಯಿಂದಲೇ ವ್ಯವಹರಿಸಬೇಕು ಎಂಬುದಕ್ಕೆ ಇದೊಂದು ನಿದರ್ಶನ. ಏಕೆಂದರೆ ವೈದ್ಯಕೀಯ ಸಿಬ್ಬಂದಿ ಎಂದು ಹೇಳಿಕೊಂಡು ಮನೆ ಹತ್ತಿರ ಬಂದು ದರೋಡೆ ಮಾಡಿಕೊಂಡು ಹೋದಂತಹ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್​ಬಿಎಂ ಕಾಲನಿಯ ಸಂಪತ್ ಸಿಂಗ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಕಾರು ಹಾಗೂ ಬೈಕ್​ನಲ್ಲಿ ಬಂದಿದ್ದ ಆಗಂತುಕರು ವೈದ್ಯಕೀಯ ಸಿಬ್ಬಂದಿ ಎಂದು ಹೇಳಿಕೊಂಡು ಮನೆಗೆ ಬಂದಿದ್ದರು.

    ಇದನ್ನೂ ಓದಿ: ಮದುವೆ ಆಗ್ತಿದ್ದಾರೆ ‘ರಾಧಾ ರಮಣ’ ಸೀರಿಯಲ್ ನಟಿ ಕಾವ್ಯಾ ಗೌಡ; ಆ ನಂತರವೂ ನಟನೆ ಮುಂದುವರಿಸುತ್ತಾರಾ?

    ಸಂಪತ್ ಸಿಂಗ್ ಅವರ ತಾಯಿ ಹಾಗೂ ಪತ್ನಿ ಇಬ್ಬರೇ ಮನೆಯಲ್ಲಿದ್ದಾಗ ಹೀಗೆ ಮೂರ್ನಾಲ್ಕು ಯುವಕರು ಲಸಿಕೆ ಹಾಕಿಸುವವರ ಸೋಗಿನಲ್ಲಿ ಬಂದು ಮನೆಗೆ ಪ್ರವೇಶಿಸಿದ್ದಾರೆ. ಬಳಿಕ ಪಿಸ್ತೂಲ್ ತೋರಿಸಿ ಬೆದರಿಸಿ ಸಿನಿಮೀಯ ರೀತಿಯಲ್ಲಿ ಮನೆಯಲ್ಲಿ ದರೋಡೆ ಮಾಡಿದ್ದಾರೆ. ಆರೋಪಿಗಳು 150 ಗ್ರಾಂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದು, ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ಪುನೀತ್ ಸಾವಿಗೆ ನಿಜವಾದ ಕಾರಣ ಏನು ಎಂಬುದನ್ನು ಬಿಚ್ಚಿಟ್ಟ ರಾಘವೇಂದ್ರ ರಾಜಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts