More

    ರಾಮಮಂದಿರ ಸಾಂಸ್ಕೃತಿಕ ಸ್ವಾತಂತ್ರ್ಯದ ಪ್ರತೀಕ; ಜೆ.ನಂದಕುಮಾರ ಅಭಿಮತ

    ಬೆಂಗಳೂರು : ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರವು ರಾಷ್ಟ್ರೀಯ ಸಾಂಸ್ಕೃತಿಕ ಸ್ವಾತಂತ್ರ್ಯದ ಪ್ರತೀಕ ಎಂದು ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಂಯೋಜಕ ಜೆ.ನಂದಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಎನ್.ಆರ್. ಕಾಲನಿಯ ಡಾ. ಸಿ.ಅಶ್ವತ್ಥ್ ಕಲಾ ಭವನದಲ್ಲಿ ಮಂಥನ ಸಂಸ್ಥೆ ಆಯೋಜಿಸಿದ್ದ ಲೇಖಕಿ ರಶ್ಮೀ ಸಾಮಂತ್ ಅವರ ‘ರಾಮ ಜನ್ಮಭೂಮಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು.

    ಶ್ರೀರಾಮ ನಮ್ಮ ಧರ್ಮದ ನೈಜ ವಿಗ್ರಹ, ಸಕಲ ಸದ್ಗುಣಗಳ ಮೇಲ್ಪಂಕ್ತಿ. ಅಂತಹ ರಾಮ ಜನಿಸಿದ ಅಯೋಧ್ಯೆ ರಾಮನಿಗೇ ಸಲ್ಲಬೇಕೆಂದು ಅನೇಕರು ಪ್ರಾಣಾರ್ಪಣೆ ಮಾಡಿದ್ದಾರೆ. ರಾಮನಿಗಾಗಿ ನಡೆದ ಆಂದೋಲನಗಳ ಪ್ರತಿಫಲವಾಗಿ ಇಂದು ನಿರ್ಮಾಣಗೊಳ್ಳುತ್ತಿರುವ ರಾಮಮಂದಿರ ನಮ್ಮ ಇತಿಹಾಸದಲ್ಲಿ ನಿಜವಾದ ರಾಷ್ಟ್ರೀಯ ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಪಡೆದ ಸಂತಸವನ್ನು ಜನಮಾನಸದಲ್ಲಿ ಉಂಟು ಮಾಡಿದೆ.

    ೨೫ ತಲೆಮಾರುಗಳಿಂದ ರಾಮಜನ್ಮಭೂಮಿಯ ವಿಷಯದಲ್ಲಿ ಹೋರಾಟ ನಡೆದಿದೆ. ಶತಮಾನಗಳಿಂದ ರಾಷ್ಟ್ರೀಯ ಆಂದೋಲನದ ಮಾದರಿಯಲ್ಲಿ ನಡೆದ ಹಿಂದುಗಳ ಹೋರಾಟಕ್ಕೆ ಇಂದು ಫಲ ದೊರೆತಿದೆ. ರಾಮಮಂದಿರ ನಿರ್ಮಾಣವು ವಸಾಹತುಶಾಹಿತ್ವದ ಕುರುಹುಗಳನ್ನು ಅಳಿಸಿ ಹಾಕಿದ್ದು, ರಾಷ್ಟ್ರೀಯ ಗರಿಮೆ ಮತ್ತು ಗತವೈಭವವನ್ನು ಮರುಕಳಿಸಿದೆ. ಭಾರತದ ಅಮೃತಕಾಲದ ಆರಂಭಕ್ಕೆ ಇದು ಶುಭಾರಂಭ ಎಂದು ಅವರು ಹೇಳಿದ್ದಾರೆ.

    ರಾಷ್ಟ್ರೀಯತೆಯ ನವಜಾಗರಣಕ್ಕೆ ಸಾಕ್ಷಿ : ಕಾರ್ಯಕ್ರಮದಲ್ಲಿ ಮಾತನಾಡಿದ ಲೇಖಕಿ ರಶ್ಮೀ ಸಾಮಂತ್ ಶ್ರೀರಾಮ ನಮ್ಮ ರಾಷ್ಟ್ರೀಯ ಐಕ್ಯತೆಯ ಸಂಕೇತ. ರಾಮ ನಡೆದ ಹಾದಿ ರಾಮಾಯಣ ಕಾಲ್ಪನಿಕವಲ್ಲ, ಅದು ಇತಿಹಾಸ. ನಮ್ಮ ಇತಿಹಾಸವನ್ನು ಸುಳ್ಳೆಂದು ನಿರೂಪಿಸುವ ಮತ್ತು ಇತಿಹಾಸವನ್ನೂ ಮಾರ್ಪಡಿಸುವ ಪ್ರಯತ್ನಗಳೆಲ್ಲ ವಿಲವಾಗಿದ್ದು, ರಾಷ್ಟ್ರೀಯತೆಯ ನವಜಾಗರಣಕ್ಕೆ ರಾಮಮಂದಿರ ನಿರ್ಮಾಣ ಸಾಕ್ಷಿಯಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts