More

    ಇದೊಂದು ವಿಭಿನ್ನ ಅನುಭವ; ಏಕದಿನ ವಿಶ್ವಕಪ್​ ಸೋಲಿನ ಬಳಿಕ ಮೊದಲ ಬಾರಿಗೆ ಮೌನ ಮುರಿದ ವಿರಾಟ್​ ಕೊಹ್ಲಿ

    ನವದೆಹಲಿ: ಏಕದಿನ ವಿಶ್ವಕಪ್ ಫಿನಾಲೆ ಸೋಲಿನ​ ಬಳಿಕ ಕ್ರಿಕೆಟ್​ನಿಂದ ಅಂತರ ಕಾಯ್ದುಕೊಂಡಿದ್ದ ಟೀಂ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೆ ತಂಡ ಕೂಡಿಕೊಂಡಿದ್ದಾರೆ. ಏಕದಿನ ವಿಶ್ವಕಪ್​ನಲ್ಲಿ ಟಾಪ್​ ರನ್​ ಸ್ಕೋರರ್​ ಆಗಿ ಹೊರಹೊಮ್ಮಿದ ಕಿಂಗ್​ ಕೊಹ್ಲಿ ಟೆಸ್ಟ್​ ಪಂದ್ಯದ ಮಹತ್ವ ಕುರಿತು ಮಾತನಾಡಿದ್ದಾರೆ.

    ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ವಿರಾಟ್ ಕೊಹ್ಲಿ, ನನಗೆ ಟೆಸ್ಟ್ ಕ್ರಿಕೆಟ್ ಆಟದ ಅಡಿಪಾಯವಿದ್ದಂತೆ. ನನ್ನ ಪಾಲಿಗೆ ಟೆಸ್ಟ್ ಕ್ರಿಕೆಟ್ ಎಂಬುದು ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ಎಲ್ಲಕ್ಕಿಂತ ವಿಭಿನ್ನ ಅನುಭವ ನೀಡುತ್ತದೆ ಎಂದಿದ್ದಾರೆ.

    ಇದನ್ನೂ ಓದಿ: ಕ್ಯಾಪ್ಟನ್​ ಆದ ಬೆನ್ನಲ್ಲೇ ಪ್ರತಾಪ್​ ಬೆನ್ನಿಗೆ ಚೂರಿ ಹಾಕಿದ್ರಾ ನಮ್ರತಾ?

    ಆಟಗಾರನಾಗಿ, ಸುದೀರ್ಘ ಇನ್ನಿಂಗ್ಸ್ ಆಡುವ ಮತ್ತು ತಂಡಕ್ಕೆ ಗೆಲುವು ತಂದುಕೊಡುವುದು ವಿಶೇಷ ಅನುಭವವನ್ನು ನೀಡುತ್ತದೆ. ಟೆಸ್ಟ್ ಕ್ರಿಕೆಟ್ ಆಡುವುದು ನನಗೆ ತುಂಬಾ ಖುಷಿ ನೀಡುತ್ತದೆ. ಈ ಆಟ ನನಗೆ ತೃಪ್ತಿ ನೀಡಿದೆ. 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಲು, ಟೆಸ್ಟ್ ಕ್ರಿಕೆಟ್ ಆಡುವ ಕನಸು ಕಾಣಲು ಮತ್ತು ಟೆಸ್ಟ್ ಕ್ರಿಕೆಟಿಗನಾಗಲು, ನಾನು ನಿಜವಾಗಿಯೂ ಹೆಮ್ಮೆ ಪಡುತ್ತೇನೆ ಎಂದು ಸಂದರ್ಶನದಲ್ಲಿ ವಿರಾಟ್​ ಕೊಹ್ಲಿ ಹೇಳಿದ್ದಾರೆ.

    111 ಟೆಸ್ಟ್​ ಪಂದ್ಯಗಳನ್ನು ಆಡಿರುವ ವಿರಾಟ್​ ಕೊಹ್ಲಿ 49.29ರ ಸರಾಸರಿಯಲ್ಲಿ 8676 ರನ್ ಗಳಿಸಿದ್ದಾರೆ. 29 ಶತಕ ಮತ್ತು 29 ಅರ್ಧಶತಕಗಳನ್ನು ಒಳಗೊಂಡಂತೆ 8676 ರನ್​ ಗಳಿಸಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ ಡಿಸೆಂಬರ್​ 26ರಂದು ಸೆಂಚುರಿಯನ್​ನಲ್ಲಿ ಆರಂಭವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts