More

    1 ಷೇರಿಗೆ 7 ಬೋನಸ್ ಷೇರುಗಳ ವಿತರಣೆ; 10 ಭಾಗಗಳಾಗಿ ಸ್ಟಾಕ್​ ವಿಂಗಡಣೆ: 6 ತಿಂಗಳಲ್ಲಿ 552% ಏರಿಕೆಯಾದ ಷೇರಿಗೆ ಭರ್ಜರಿ ಡಿಮ್ಯಾಂಡು…

    ಮುಂಬೈ: ಸನ್‌ಶೈನ್ ಕ್ಯಾಪಿಟಲ್ ಲಿಮಿಟೆಡ್ (Sunshine Capital Ltd) ಬೋನಸ್ ಷೇರುಗಳನ್ನು ವಿತರಿಸಲು ಮತ್ತು ಷೇರು ವಿಭಜಿಸಲು ನಿರ್ಧರಿಸಿದೆ. ಇದಕ್ಕಾಗಿ ಕಂಪನಿಯು ದಾಖಲೆಯ ದಿನಾಂಕವನ್ನು ಪ್ರಕಟಿಸಿದೆ.
    ಮುಂದಿನ ವಾರವೇ ದಾಖಲೆ ದಿನಾಂಕ. ಕಂಪನಿಯ ಷೇರುಗಳ ಬೆಲೆ ರೂ 300 ಕ್ಕಿಂತ ಕಡಿಮೆ ಇದೆ.

    10 ರೂಪಾಯಿ ಮುಖಬೆಲೆಯ ಸನ್‌ಸೈನ್ ಕ್ಯಾಪಿಟಲ್ ಲಿಮಿಟೆಡ್‌ನ ಒಂದು ಷೇರನ್ನು 10 ಭಾಗಗಳಾಗಿ ವಿಂಗಡಿಸಲಾಗುತ್ತದೆ. ಅದರ ನಂತರ ಕಂಪನಿಯ ಷೇರುಗಳ ಮುಖಬೆಲೆಯು ಪ್ರತಿ ಷೇರಿಗೆ ರೂ 1 ಕ್ಕೆ ಇಳಿಯುತ್ತದೆ. ಇದೇ ಸಮಯದಲ್ಲಿ, ಕಂಪನಿಯು ರೂ 1 ಮುಖಬೆಲೆಯೊಂದಿಗೆ ಒಂದು ಷೇರಿನ ಮೇಲೆ 7 ಬೋನಸ್ ಷೇರುಗಳನ್ನು ನೀಡುತ್ತದೆ. ಕಂಪನಿಯು ಮಾರ್ಚ್ 8, 2024 ರಂದು ಸ್ಟಾಕ್ ವಿಭಜನೆ ಮತ್ತು ಬೋನಸ್ ವಿತರಣೆಗೆ ದಾಖಲೆಯ ದಿನಾಂಕವನ್ನು ನಿಗದಿಪಡಿಸಿದೆ.

    ಶನಿವಾರದಂದು ಶೇ. 2ರ ಅಪ್ಪರ್ ಸರ್ಕ್ಯೂಟ್ ಅನ್ನು ಮುಟ್ಟಿದ ನಂತರ, ಕಂಪನಿಯ ಷೇರುಗಳ ಬೆಲೆ 278.60 ರೂ. ತಲುಪಿದೆ. ಕಳೆದ ಒಂದು ತಿಂಗಳಲ್ಲಿ ಕಂಪನಿಯ ಷೇರುಗಳ ಬೆಲೆಗಳ ಬೆಲೆ ಶೇಕಡಾ 48 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಇದೇ ಸಮಯದಲ್ಲಿ, 6 ತಿಂಗಳ ಕಾಲ ಷೇರುಗಳನ್ನು ಹೊಂದಿರುವ ಹೂಡಿಕೆದಾರರು ಇಲ್ಲಿಯವರೆಗೆ 552 ಶೇಕಡಾ ಲಾಭವನ್ನು ಪಡೆದಿದ್ದಾರೆ.

    ಷೇರು ಮಾರುಕಟ್ಟೆಯಲ್ಲಿ ಕಂಪನಿಯ 52 ವಾರದ ಗರಿಷ್ಠ ಬೆಲೆ 278.60 ರೂ ಮತ್ತು ಕನಿಷ್ಠ ಬೆಲೆ 34.49 ರೂ. ಕಂಪನಿಯ ಮಾರುಕಟ್ಟೆ ಮೌಲ್ಯ 362.76 ಕೋಟಿ ರೂ. ಕಂಪನಿಯು ಇದೇ ಮೊದಲ ಬಾರಿಗೆ ಬೋನಸ್ ಷೇರುಗಳನ್ನು ವಿತರಿಸಲು ಹೊರಟಿದೆ.

    ಈ ಕಂಪನಿಯು ಈಕ್ವಿಟಿ ಷೇರುಗಳು ಮತ್ತು ಇಕ್ವಿಟಿ-ಸಂಬಂಧಿತ ಭದ್ರತೆಗಳಂತಹ ದೀರ್ಘಾವಧಿಯ ಹೂಡಿಕೆಗಳಲ್ಲಿ ಹೂಡಿಕೆಯಲ್ಲಿ ತೊಡಗಿಸಿಕೊಂಡಿದೆ. ಇದು ಬಂಡವಾಳ ಮಾರುಕಟ್ಟೆಗಳಲ್ಲಿ ವಿವಿಧ ಕಂಪನಿಗಳ ಷೇರುಗಳು ಮತ್ತು ಭದ್ರತೆಗಳ ಖರೀದಿ, ಮಾರಾಟ ಮತ್ತು ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದೆ.

    300 ರಿಂದ 8,000 ರೂಪಾಯಿಗೆ ಏರಿದ ಟಾಟಾ ಕಂಪನಿ ಷೇರು: ವಿಶೇಷ ವಹಿವಾಟಿನಲ್ಲೂ ಅಪ್ಪರ್​ ಸರ್ಕ್ಯೂಟ್​ ಹಿಟ್​

    1 ಲಕ್ಷ ಷೇರು ಖರೀದಿಸಿದ ಬಾಲಿವುಡ್​ ನಟ ಅಜಯ ದೇವಗನ್: ಪನೋರಮಾ ಸ್ಟುಡಿಯೋ ಸ್ಟಾಕ್​ ಬೆಲೆ ಒಂದೇ ವರ್ಷದಲ್ಲಿ 861% ಏರಿಕೆ

    1 ಲಕ್ಷವಾಯ್ತು 12 ಲಕ್ಷ ರೂಪಾಯಿ: ಹೂಡಿಕೆದಾರರಿಗೆ 1200% ಲಾಭ ನೀಡಿದೆ ಚಪ್ಪಲಿ ತಯಾರಿಕೆ ಕಂಪನಿ ಷೇರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts