More

    ಮಿಡ್ಲೈಫ್ ಕ್ರೈಸಿಸ್: ವಿಶ್ವದ ಯುವಕರಿಗೆ ಎಚ್ಚರಿಕೆ ನೀಡಿದ ಈ ವರದಿ!

    ಬೆಂಗಳೂರು: ವಿಶ್ವದಲ್ಲಿ ವಯಸ್ಸಾದವರಿಗಿಂತ ಯುವ ಜನಜನತೆ ಕಡಿಮೆ ಸಂತೋಷ ಅನುಭವಿಸುತ್ತಾರೆ ಎಂದು ಜಾಗತಿಕ ಸಂಶೋಧನೆಯು ಬಹಿರಂಗಪಡಿಸಿದೆ. ಏಕೆಂದರೆ ಅವರು ಮಿಡ್‌ಲೈಫ್ ಕ್ರೈಸಿಸ್‌ನಂತಹ ಕೆಲವು ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಈ ಸಂಶೋಧನೆಗೆ ಸಂಬಂಧಿಸಿದಂತೆ ಅಮೆರಿಕದ ಉನ್ನತ ವೈದ್ಯರೊಬ್ಬರು ಯುವ ಜನರು ಬಹಳ ಕಷ್ಟದಲ್ಲಿದ್ದಾರೆ ಎಂದು ಹೇಳಿದರು. ಅಮೆರಿಕಾದ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ನಿಯಂತ್ರಿಸಲು ಸರ್ಕಾರಗಳಿಗೆ ಸಾಧ್ಯವಾಗದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರು.

    ಉತ್ತರ ಅಮೆರಿಕಾದ ಯುವಕರನ್ನು ನೋಡಿದರೆ ತಿಳಿಯುತ್ತದೆ. ಅವರು ತಮ್ಮ ಹಿರಿಯರಿಗಿಂತ ಕಡಿಮೆ ಸಂತೋಷವಾಗಿರುತ್ತಾರೆ. ಪಶ್ಚಿಮ ಯುರೋಪ್‌ನಲ್ಲಿಯೂ ಅದೇ ಬದಲಾವಣೆಯು ಸಂಭವಿಸುವ ನಿರೀಕ್ಷೆಯಿದೆ ಎಂದು ಮೂರ್ತಿ ತಿಳಿಸಿದ್ದಾರೆ.

    ಏನಿದು ಮಿಡ್‌ಲೈಫ್ ಕ್ರೈಸಿಸ್?
    ಮಿಡ್‌ಲೈಫ್ ಕ್ರೈಸಿಸ್ ವ್ಯಕ್ತಿಯು ತನ್ನ ಗುರುತು ಮತ್ತು ಆತ್ಮವಿಶ್ವಾಸದೊಂದಿಗೆ ಹೋರಾಡುವ ಜೀವನದ ಅವಧಿ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ 25 ರಿಂದ 60 ವರ್ಷ ವಯಸ್ಸಿನ ಪುರುಷರು ಮತ್ತು ಮಹಿಳೆಯರಲ್ಲಿ ಸಂಭವಿಸಬಹುದು. ಮಿಡ್ಲೈಫ್ ಬಿಕ್ಕಟ್ಟು ಒಂದು ಅಸ್ವಸ್ಥತೆ ಅಲ್ಲ, ಆದರೆ ಮುಖ್ಯವಾಗಿ ಮಾನಸಿಕತೆಗೆ ಸಂಬಂಧಿಸಿದೆ.

    ಅಮೆರಿಕದಲ್ಲಂತೂ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರ ಆರೋಗ್ಯದ ಮೇಲೆ ನಿರಂತರವಾಗಿ ಪರಿಣಾಮ ಬೀರುತ್ತಿದೆ ಈ ಮಿಡ್ಲೈಫ್ ಕ್ರೈಸಿಸ್. ಈ ಕಾರಣದಿಂದಾಗಿ 2024 ರ ವಿಶ್ವ ಸಂತೋಷದ ವರದಿಯಲ್ಲಿ ಅಮೆರಿಕವು ಟಾಪ್-20 ಸಂತೋಷದ ದೇಶಗಳ ಪಟ್ಟಿಯಿಂದ ಹೊರಗಿದೆ. 15 ರಿಂದ 24 ವರ್ಷ ವಯಸ್ಸಿನ ಮಕ್ಕಳನ್ನು ಹಿರಿಯರಿಗಿಂತ ಸಂತೋಷವಾಗಿರುತ್ತಾರೆ ಎಂದು ಪರಿಗಣಿಸುವ ಕಾಲವಿತ್ತು. ಆದರೆ 2017 ರಲ್ಲಿ ಈ ಪ್ರವೃತ್ತಿ ಬದಲಾಗಿದೆ ಎಂದು ಡಾ.ಮೂರ್ತಿ ಹೇಳಿದರು. ಅಮೆರಿಕದಲ್ಲಿ ಯುವಕರು ನಿಜವಾಗಿಯೂ ಕಷ್ಟಪಡುತ್ತಿದ್ದಾರೆ ಮತ್ತು ಪ್ರಪಂಚದಾದ್ಯಂತ ಈ ಪ್ರವೃತ್ತಿ ಹೆಚ್ಚುತ್ತಿದೆ ಎಂಬುದಕ್ಕೆ ಈ ವರದಿಯು ನಿಜವಾಗಿಯೂ ಎಚ್ಚರಿಕೆ ಗಂಟೆಯಾಗಿದೆ ಎಂದು ತಿಳಿಸಿದರು.

    ಮಕ್ಕಳು ಮತ್ತು ಹದಿಹರೆಯದವರಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಸುರಕ್ಷಿತವಾಗಿದೆಯೇ ಎಂದು ತೋರಿಸಲು ದತ್ತಾಂಶಕ್ಕಾಗಿ ತಾನು ಇನ್ನೂ ಕಾಯುತ್ತಿದ್ದೇನೆ ಎಂದು ಅವರು ಹೇಳಿದರು ಮತ್ತು ಯುವಕರ ನೈಜ-ಜೀವನದ ಸಾಮಾಜಿಕ ಸಂವಹನಗಳನ್ನು ಸುಧಾರಿಸಲು ಅಂತರರಾಷ್ಟ್ರೀಯ ಕ್ರಮಕ್ಕೆ ಕರೆ ನೀಡಿದರು. ಮಿಡ್ಲೈಫ್ ಕ್ರೈಸಿಸ್‌ನಿಂದ ಬಳಲುತ್ತಿರುವ ಮಕ್ಕಳಿಗಾಗಿ ತಕ್ಷಣ ನೀತಿಯನ್ನು ರೂಪಿಸಬೇಕಿದೆ ಎಂದರು.

    ಫಿನ್ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಾಯಕ ದೇಶ
    ವಿಶ್ವಸಂಸ್ಥೆಯು ಬಿಡುಗಡೆ ಮಾಡಿದ ವಿಶ್ವ ಸಂತೋಷದ ವರದಿಯ ಪ್ರಕಾರ, ಫಿನ್ಲ್ಯಾಂಡ್ ಸತತ ಏಳನೇ ಬಾರಿಗೆ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿದೆ. ಕಳೆದ ವರ್ಷದಂತೆ ಈ ಪಟ್ಟಿಯಲ್ಲಿ ಭಾರತ 126 ನೇ ಸ್ಥಾನದಲ್ಲಿದೆ. ನಾರ್ಡಿಕ್ ದೇಶಗಳಾದ ಡೆನ್ಮಾರ್ಕ್, ಐಸ್ಲ್ಯಾಂಡ್ ಮತ್ತು ಸ್ವೀಡನ್ ಟಾಪ್-10 ಸಂತೋಷದ ದೇಶಗಳ ಪಟ್ಟಿಯಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿವೆ. 2020ರ ನಂತರ ಮತ್ತೆ ತಾಲಿಬಾನ್ ಹಿಡಿತಕ್ಕೆ ಬಂದ ಅಫ್ಘಾನಿಸ್ತಾನ ಈ 143 ದೇಶಗಳ ಪಟ್ಟಿಯಲ್ಲಿ ಭೀಕರ ಮಾನವ ದುರಂತದಿಂದಾಗಿ ಕೊನೆಯ ಸ್ಥಾನದಲ್ಲಿದೆ. 

    ಅದ್ಭುತ! ಬಾಲಕನಿಗೆ ಥೇಟ್ ರಾಮಲಲ್ಲಾ ಮೂರ್ತಿಯ ಹಾಗೆಯೇ ಮೇಕಪ್ ಮಾಡಿದ ಆರ್ಟಿಸ್ಟ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts