More

    ಮಹಿಳೆ ಮೇಲೆ ಶೋಷಣೆ ನಿರಂತರ

    ಜಿಲ್ಲಾ ಲಿಂಗಾಯತ ಶಿವ ಶಿಂಪಿ ಮಹಿಳಾ ಘಟಕದಿಂದ ಮಹಿಳಾ ದಿನಾಚರಣೆ ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
    ಮಹಿಳೆ ಮೇಲಿನ ಶೋಷಣೆ ನಿರಂತರವಾಗಿದೆ ಎಂದು ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಕಳವಳ ವ್ಯಕ್ತಪಡಿಸಿದರು.
    ಜಿಲ್ಲಾ ಲಿಂಗಾಯತ ಶಿವ ಶಿಂಪಿ ಮಹಿಳಾ ಘಟಕ ಸೋಮವಾರ ಸಂಜೆ ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ‘ಮಹಿಳೆ ಸಮರ್ಥ ಸಾಂಸ್ಕೃತಿಕ ರಾಯಭಾರಿ’ ಕುರಿತು ಮಾತನಾಡಿದರು.
    ಮಹಿಳೆ ಅಬಲೆಯಲ್ಲ, ಆದರೆ, ಆಕೆಗೆ ಅನ್ಯಾಯವಾಗುತ್ತಿರುವುದು ಇವತ್ತಿನ ಕಥೆಯಲ್ಲ. ತನಗಾಗುತ್ತಿರುವ ಅನ್ಯಾಯವನ್ನು ಮೌನವಾಗಿಯೇ ಅನುಭವಿಸುತ್ತಿದ್ದಾಳೆ. ಇದು ಸರಿಯಲ್ಲ. ಆದರೆ ಇಂದು ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಸ್ವಾವಲಂಬನೆಯಿಂದ ಮಹಿಳೆಯ ಸಾಮಾಜಿಕ ಪರಿಸ್ಥಿತಿ ಸುಧಾರಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಅಭಿಪ್ರಾಯವಪಟ್ಟರು.
    ಚಿತ್ರದುರ್ಗ ಆಕಾಶವಾಣಿಯ ದ್ಯಾಮಲಾಂಬಿಕಾ ಮಾತನಾಡಿ, ಬಸವಾದಿ ಶರಣರು ಮಹಿಳೆ-ಪುರುಷ ಎಂಬ ಭೇದ ತೋರಲಿಲ್ಲ. ಶರಣರ ವಚನಗಳು ನಮ್ಮನ್ನು ಸರಿದಾರಿಯಲ್ಲಿ ಕರೆದೊಯ್ಯುತ್ತಿವೆ ಎಂದರು.
    ಕಾಳಘಟ್ಟ ಗ್ರಾಪಂ ಅಧ್ಯಕ್ಷೆ ನೀಲಮ್ಮ ಮಾತನಾಡಿದರು. ಜಿಲ್ಲಾ ಲಿಂಗಾಯತ ಶಿವಶಿಂಪಿ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಮುರುಗೇಶ್ ಅಧ್ಯಕ್ಷತೆ ವಹಿಸಿದ್ದರು. ಘಟಕದ ಕಾರ್ಯದರ್ಶಿ ಕವಿತಾ ಪಂಪಾಪತಿ ವಾರ್ಷಿಕ ವರದಿ ಮಂಡಿಸಿದರು. ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
    ಶೈಲಜಾ ವಿಜಯಕುಮಾರ್ ಪ್ರಾರ್ಥಿಸಿದರು. ನಿರ್ಮಲಾ ಬಸವರಾಜು ಸ್ವಾಗತಿಸಿದರು. ಕವಿತಾ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಾ ಬಕ್ಕೇಶ್ ವಂದಿಸಿದರು, ಅನ್ನಪೂರ್ಣ ವಿಜಯಕುಮಾರ್, ಶೈಲಜಾ ಉಮಾ ಮಹೇಶ್ವರಪ್ಪ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts