More

    1300% ಲಾಭ ನೀಡಿದ ಫಾರ್ಮಾ ಸ್ಟಾಕ್​: ಮ್ಯೂಚುವಲ್​ ಫಂಡ್​ ಕಂಪನಿ ಷೇರು ಖರೀದಿಸುತ್ತಿದ್ದಂತೆಯೇ ಮತ್ತೆ ಡಿಮ್ಯಾಂಡು

    ಮುಂಬೈ: ಸ್ಮಾಲ್ ಕ್ಯಾಪ್ ಫಾರ್ಮಾ ಕಂಪನಿ ಕೊಪ್ರಾನ್ ಲಿಮಿಟೆಡ್ (Kopran Limited) ಷೇರುಗಳಲ್ಲಿ ಭಾರಿ ಏರಿಕೆಯಾಗಿದೆ. ಕೊಪ್ರಾನ್ ಲಿಮಿಟೆಡ್‌ನ ಷೇರುಗಳ ಬೆಲೆ ಸೋಮವಾರ 8% ಗೂ ಅಧಿಕ ಹೆಚ್ಚಳದೊಂದಿಗೆ 281.15 ರೂ. ತಲುಪಿದೆ. ಈ ಮೂಲಕ ಕಂಪನಿಯ ಷೇರುಗಳು ಒಂದು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿವೆ.

    ಫಾರ್ಮಾ ಕಂಪನಿ ಕೊಪ್ರಾನ್‌ನ ಷೇರುಗಳಲ್ಲಿ ಈ ಏರಿಕೆಯು ಪ್ರಮುಖ ಮ್ಯೂಚುವಲ್ ಫಂಡ್ ಕಂಪನಿಯಾದ ಕ್ವಾಂಟ್‌ನಿಂದ ದೊಡ್ಡ ಹೂಡಿಕೆಯ ನಂತರ ಬಂದಿದೆ. ಕ್ವಾಂಟ್ ಸ್ಮಾಲ್‌ಕ್ಯಾಪ್ ಫಂಡ್ ಶುಕ್ರವಾರ ಕೊಪ್ರಾನ್‌ನಲ್ಲಿ 0.5 ಶೇಕಡಾ ಪಾಲನ್ನು ಬೃಹತ್ ವ್ಯವಹಾರಗಳ ಮೂಲಕ ಖರೀದಿಸಿದೆ.

    ಕ್ವಾಂಟ್ ಸ್ಮಾಲ್‌ಕ್ಯಾಪ್ ಫಂಡ್ ಈ ಕಂಪನಿಯಲ್ಲಿ 2,50,000 ಷೇರುಗಳನ್ನು ಖರೀದಿಸಿದೆ. ಪ್ರತಿ ಷೇರಿಗೆ 255.51 ರೂ. ಬೆಲೆಯಲ್ಲಿ ಖರೀದಿಸಲಾಗಿದೆ. ಸದ್ಯ ಈ ಷೇರುಗಳನ್ನು ಯಾರು ಮಾರಾಟ ಮಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ.

    ಕೊಪ್ರಾನ್ ಲಿಮಿಟೆಡ್ ಕಂಫನಿಯು ಫಾರ್ಮುಲೇಶನ್ಸ್ ಮತ್ತು ಫಾರ್ಮಾಸ್ಯುಟಿಕಲ್ ಎಪಿಐಗಳನ್ನು ತಯಾರಿಸುವ ವ್ಯವಹಾರದಲ್ಲಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 1280 ಕೋಟಿ ರೂ. ಇದೆ.

    ಕಳೆದ 4 ವರ್ಷಗಳಲ್ಲಿ ಕಂಪನಿಯ ಷೇರುಗಳ ಬೆಲೆ 1300% ಕ್ಕಿಂತ ಹೆಚ್ಚು ಹೆಚ್ಚಾಗಿದೆ. ಮಾರ್ಚ್ 27, 2020 ರಂದು ಈ ಕಂಪನಿಯ ಷೇರುಗಳ ಬೆಲೆ 18.90 ರೂ. ಇತ್ತು. ಕಂಪನಿಯ ಷೇರುಗಳು ಮಾರ್ಚ್ 18, 2024 ರಂದು ರೂ 281.15 ತಲುಪಿದೆ. ಕಳೆದ ಒಂದು ವರ್ಷದಲ್ಲಿ ಈ ಷೇರುಗಳ ಬೆಲೆ 160%ಗೂ ಹೆಚ್ಚು ಏರಿಕೆಯಾಗಿದೆ. ಕಂಪನಿಯ ಷೇರುಗಳು ಮಾರ್ಚ್ 20, 2023 ರಂದು ರೂ 103.90 ಇತ್ತು.

    ಈ ಷೇರುಗಳ 52 ವಾರಗಳ ಗರಿಷ್ಠ ಬೆಲೆ 292.40 ರೂ. ಹಾಗೂ ಕನಿಷ್ಠ ಬೆಲೆ 96 ರೂ. ಇದೆ. ಸಾರ್ವಕಾಲಿಕ ಗರಿಷ್ಠ ಬೆಲೆ 375 ರೂ. ಇತ್ತು. ಏಪ್ರಿಲ್ 18, 1996 ರಂದು ಬೆಲೆಯು ಈ ಮಟ್ಟದಲ್ಲಿತ್ತು. ಕಂಪನಿಯ ಷೇರುಗಳ ಸಾರ್ವಕಾಲಿಕ ಕನಿಷ್ಠ ಬೆಲೆ 6 ರೂ. ಇದೆ.

     

    5 ವರ್ಷಗಳಲ್ಲಿ 3955% ಲಾಭ ನೀಡಿದ ಷೇರು: ಕಾಮಗಾರಿ ಪೂರ್ಣಗೊಳಿಸಿದ ಸುದ್ದಿ ಬರುತ್ತಿದ್ದಂತೆಯೇ ಅಪ್ಪರ್​ ಸರ್ಕ್ಯೂಟ್ ಹಿಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts