More

    ಇಸ್ಲಾಮಿಕ್​ ಟೆಲಿಧರ್ಮಬೋಧಕ ಜಾಕೀರ್​ ನಾಯ್ಕ್​ ಚಾನೆಲ್​ಗಳಿಗೆ ಬಿತ್ತು 2.76 ಕೋಟಿ ರೂ. ದಂಡ

    ಲಂಡನ್​/ನವದೆಹಲಿ: ವಿವಾದಾತ್ಮಕ ಇಸ್ಲಾಮಿಕ್​ ಟೆಲಿಧರ್ಮಬೋಧಕ ಜಾಕೀರ್​ ನಾಯ್ಕ್​ ಒಡೆತನದ ಪೀಸ್​ ಟಿವಿ ಮತ್ತು ಪೀಸ್​ ಟಿವಿ ಉರ್ದು ಚಾನೆಲ್​ಗಳಿಗೆ ಬ್ರಿಟನ್​ನ ಟಿವಿ ಪ್ರಸಾರ ಸೇವೆಗಳ ನಿಯಂತ್ರಕ ಆಪ್​ಕಾಂ (Ofcom) 2.76 ಕೋಟಿ ರೂ. ದಂಡ ವಿಧಿಸಿದೆ.

    ಈ ಚಾನೆಲ್​ಗಳಲ್ಲಿ ಧಾರ್ಮಿಕ ಸೌಹಾರ್ದತೆ ಹದಗೆಡಿಸಲು ದ್ವೇಷಪೂರಿತ ಭಾಷಣ ಮಾಡಿದ್ದಲ್ಲದೆ, ಜನರನ್ನು ಕೊಲ್ಲುವಂತೆ ಪದೇಪದೆ ಪ್ರೇರೇಪಿಸಿದ್ದಕ್ಕಾಗಿ ಬ್ರಿಟನ್​ನ ಮಾಧ್ಯಮ ಮೇಲ್ವಿಚಾರಣಾ ಸಂಸ್ಥೆ ಆಫ್​ಕಾಂ (Ofcom) ಈ ಕ್ರಮ ಕೈಗೊಂಡಿದೆ.

    ಜಾಕೀರ್​ ನಾಯ್ಕ್​ ಒಡೆತನದ ಪೀಸ್​ ಟಿವಿಯ ಮೂಲ ಕಂಪನಿ ಲಾರ್ಡ್​ ಕಮ್ಯುನಿಕೇಷನ್ಸ್​ಗೆ 92.16 ಲಕ್ಷ ರೂ. ಮತ್ತು ಪೀಸ್​ ಟಿವಿ ಉರ್ದು ಮಾಲೀಕತ್ವ ಹೊಂದಿರುವ ಕ್ಲಬ್​ ಟಿವಿಗೆ 1.84 ಕೋಟಿ ರೂ. ದಂಡ ವಿಧಿಸಲಾಗಿದೆ.

    ಇದನ್ನೂ ಓದಿ: ಕರೊನಾ ಹೆಸರಿನಲ್ಲಿ ಪ್ರತಿ ವಾರ ನಡೆಯುತ್ತಿವೆ 2 ಲಕ್ಷ ಸೈಬರ್ ವಂಚನೆ ಪ್ರಕರಣಗಳು!

    ಪೀಸ್​ ಟಿವಿ ಉರ್ದು ಮತ್ತು ಪೀಸ್​ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಸೌಹಾರ್ದತೆ ಕದಡುವ ರೀತಿಯ ದ್ವೇಷಪೂರಿತ ಭಾಷಣಗಳನ್ನು ಪ್ರಸಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೆ, ಕೆಲವು ಕಾರ್ಯಕ್ರಮಗಳಂತೂ ಹಿಂಸೆಗೆ ಪ್ರಚೋದನೆ ನೀಡುವಂತಿರುತ್ತವೆ ಎಂದು ಆಫ್​ಕಾಂ ಹೇಳಿದೆ.

    ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರಚೋದನೆ ಮತ್ತು ಧನಸಹಾಯ ನೀಡಿದ ಆರೋಪದಲ್ಲಿ ಜಾಕೀರ್​ ನಾಯ್ಕ್​ ಭಾರತ ಮತ್ತು ಬಾಂಗ್ಲಾದೇಶಗಳಿಗೆ ಬೇಕಾಗಿದ್ದಾನೆ. ಸದ್ಯ ಆತ ಮಲೇಷ್ಯಾದಲ್ಲಿ ಶರಣಾಗತಿ ಪಡೆಯಲು ಯತ್ನಿಸುತ್ತಿದ್ದಾನೆ ಎನ್ನಲಾಗಿದೆ.

    ಮಹಾರಾಷ್ಟ್ರದಿಂದ ಕರ್ನಾಟಕದ ತುಂಬೆಲ್ಲಾ ಕರೊನಾ ಕೇಕೆ: ಒಂದೇ ದಿನ 99 ಪ್ರಕರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts