More

    ಕರೊನಾ ಹೆಸರಿನಲ್ಲಿ ಪ್ರತಿ ವಾರ ನಡೆಯುತ್ತಿವೆ 2 ಲಕ್ಷ ಸೈಬರ್ ವಂಚನೆ ಪ್ರಕರಣಗಳು!

    ನವದೆಹಲಿ: ದೇಶಾದ್ಯಂತ ಕಳೆದ ಮೂರು ವಾರಗಳಿಂದ ಪ್ರತಿ ವಾರ ಸುಮಾರು 2 ಲಕ್ಷ ಸೈಬರ್ ವಂಚನೆ ಪ್ರಕರಣಗಳು ಕರೊನಾ ವಿಷಯದಿಂದಲೇ ನಡೆಯುತ್ತಿವೆ.

    ಅಷ್ಟೇ ಅಲ್ಲ, ಈ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಹಿಂದಿನ ವಾರಗಳಿಗೆ ಹೋಲಿಸಿದರೆ ವಂಚನೆ ಪ್ರಮಾಣದಲ್ಲಿ ಶೇಕಡಾ 30 ಏರಿಕೆಯಾಗಿದೆ!

    ಅದ್ಹೇಗೆ ಕರೊನಾ ಹೆಸರಿನಲ್ಲಿ ವಂಚಿಸ್ತಾರೆ ಅಂತೀರಾ? ಕೇಂದ್ರ ಸರ್ಕಾರದ ಆರೋಗ್ಯ ಸೇತು ಆ್ಯಪ್ ಹಾಗೂ ವಿಡಿಯೋ ಕಾಲಿಂಗ್ ಆ್ಯಪ್‌ಗಳ ಹೆಸರಿನಲ್ಲಿ ಜನರ ಖಾತೆಗಳಿಗೆ ಸೈಬರ್ ಹ್ಯಾಕರ್‌ಗಳು ಕನ್ನ ಹಾಕುತ್ತಿದ್ದಾರೆ.
    ಆರೋಗ್ಯ ಸೇತು ಸಂಪರ್ಕ ಪತ್ತೆ ಹಚ್ಚುವ ಆ್ಯಪ್, ಜೂಮ್, ಮೈಕ್ರೋಸ್‌ಟಾ ಟೀಮ್ಸ್ ಮತ್ತು ಗೂಗಲ್ ಮೀಟ್‌ನಂತಹ ವಿಡಿಯೋ ಕಾಲಿಂಗ್ ಆ್ಯಪ್‌ಗಳ ಹೆಸರು ಬಳಸಿ ಸೈಬರ್ ಖದೀಮರು ಜನರನ್ನು ವಂಚಿಸುತ್ತಿದ್ದಾರೆ.

    ಇದನ್ನೂ ಓದಿ:  ಟೋಕನ್ ಕೊಟ್ಟು ವಲಸೆ ಕಾರ್ಮಿಕರ ರವಾನೆ

    ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ಮಾನವ ಸಂಪನ್ಮೂಲ ಇಲಾಖೆಗಳು ಅಥವಾ ವಿವಿಧ ಉನ್ನತ ಕಂಪನಿಗಳ ಅಧಿಕಾರಿಗಳ ಹೆಸರಿನಲ್ಲಿ ಜನರ ಮೊಬೈಲ್ ಅಥವಾ ಕಂಪ್ಯೂಟರ್‌ಗಳಿಗೆ ಸುಳ್ಳು ಸುದ್ದಿಗಳು ಮತ್ತು ಲಿಂಕ್‌ಗಳನ್ನು ಸೈಬರ್ ಹ್ಯಾಕರ್‌ಗಳು ಕಳುಹಿಸುತ್ತಿದ್ದಾರೆ.

    ಅದರಲ್ಲೂ ಮುಖ್ಯವಾಗಿ ‘ನಿಮ್ಮ ನೆರೆಹೊರೆಯವರು ಸೋಂಕಿಗೆ ಒಳಗಾಗಿದ್ದು, ಯಾರ‌್ಯಾರು ಎಂಬುದನ್ನು ತಿಳಿಯಲು ಲಿಂಕ್ ನೋಡಿ’,‘ನಿಮ್ಮ ಜತೆ ಸಂಪರ್ಕಕ್ಕೆ ಬಂದ ವ್ಯಕ್ತಿಯೊಬ್ಬರು ಸೋಂಕಿಗೆ ಒಳಗಾಗಿದ್ದಾರೆ’, ‘ಸ್ವಯಂ ಐಸೋಲೇಷನ್‌ಗೆ ಒಳಗಾಗಲು ಹಾಗೂ ಆರೋಗ್ಯ ಸೇತು ಆ್ಯಪ್ ಬಳಸುವ ಮಾರ್ಗಸೂಚಿಗಳನ್ನು ತಿಳಿಯಿರಿ’ ಎಂಬಂತಹ ನಕಲಿ ಲಿಂಕ್‌ಗಳನ್ನು ಇ-ಮೇಲ್ ಅಥವಾ ಮೆಸೇಜ್ ಮೂಲಕ ರವಾನಿಸುತ್ತಾರೆ.

    ಇದನ್ನೂ ಓದಿ:  ನದಿಯಲ್ಲಿ ಸಿಲುಕಿದ್ದ ವ್ಯಕ್ತಿ ಪಾರು

    ಮೊದಲೇ ಕರೊನಾದಿಂದ ಆತಂಕಕ್ಕೀಡಾಗಿರುವ ಜನರು ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿ ವಂಚಕರ ಬಲೆಗೆ ಬಿದ್ದರೆ ಅವರ ವೈಯಕ್ತಿಕ ಮಾಹಿತಿಗಳು ಸೇರಿದಂತೆ ಬ್ಯಾಂಕ್ ಖಾತೆಯಲ್ಲಿನ ಹಣವೂ ಖದೀಮರ ಪಾಲಾಗುತ್ತದೆ.
    ಈ ಬಗ್ಗೆ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ-ಇನ್) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

    ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವೈದ್ಯ ವಿದ್ಯಾರ್ಥಿಗಳ ಸಮಸ್ಯೆಗೆ ಮುಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts