More

    ಮೆಟಾವರ್ಸ್​ ವಿಡಿಯೋ ಗೇಮ್​ನಲ್ಲಿ ಯುವತಿ ಮೇಲೆ ಅತ್ಯಾಚಾರ: ಸಂತ್ರಸ್ತೆ ಹೇಳಿಕೆ ಕೇಳಿ ಪೊಲೀಸರೇ ಶಾಕ್​

    ಲಂಡನ್​: ತಂತ್ರಜ್ಞಾನ ಬೆಳೆಯುತ್ತಿರುವ ಪರಿ ನೋಡಿದರೆ ಭವಿಷ್ಯದಲ್ಲಿ ಸಾಕಷ್ಟು ಪರಿಣಾಮಗಳನ್ನು ಮನುಷ್ಯ ಎದುರಿಸಬೇಕಾಗಿರುವುದರಲ್ಲಿ ಸಂಶಯವೇ ಇಲ್ಲ. ಈಗಾಗಲೇ ಡೀಪ್​ ಫೇಕ್​ ಸೃಷ್ಟಿಸಿದ ಅವಾಂತರವನ್ನು ನೀವೇಲ್ಲ ಕಂಡಿದ್ದೀರಿ. ಸ್ವತಃ ಪ್ರಧಾನಿ ಮೋದಿ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಇದೀಗ ಮೆಟಾವರ್ಸ್​ ತಂತ್ರಜ್ಞಾನ ಕೂಡ ಅಪಾಯದ ಮುನ್ಸೂಚನೆಯನ್ನು ನೀಡಿದೆ.

    ಮೆಟಾವರ್ಸ್​ನಲ್ಲಿ ನಡೆದ ಮೊದಲ ಅತ್ಯಾಚಾರ ಪ್ರಕರಣ ಯುನೈಟೆಡ್​ ಕಿಂಗ್​ಡಮ್​ನಲ್ಲಿ ಬೆಳಕಿಗೆ ಬಂದಿದೆ. ವರ್ಚುವಲ್​ ರಿಯಾಲಿಟಿ ವಿಡಿಯೋ ಗೇಮ್​ನಲ್ಲಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಯುವತಿಯಿಬ್ಬರು ಯುಕೆಯಲ್ಲಿ ದೂರು ನೀಡಿದ್ದಾಳೆ. ಆದರೆ, ಯುವತಿಗೆ ಯಾವುದೇ ತರಹದ ದೈಹಿಕ ಹಾನಿ ಆಗಿಲ್ಲ. ಆದರೆ, ನೈಜ ಜಗತ್ತಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯಂತೆ ಅದೇ ಮಾನಸಿಕ ಮತ್ತು ಭಾವನಾತ್ಮಕ ಆಘಾತವನ್ನು ಅನುಭವಿಸಿದ್ದೇನೆ ಎಂದು ಯುವತಿ ಹೇಳಿಕೆ ನೀಡಿದ್ದು, ಪೊಲೀಸರೇ ಶಾಕ್​ ಆಗಿದ್ದಾರೆ. ಅಲ್ಲದೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

    ಮೆಟಾವರ್ಸ್​ನಲ್ಲಿ ನಡೆದ ಮೊದಲ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡಿರುವ ಯುಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ವಿವರಣೆಗೆ ಬರುವುದಾದರೆ, ಸಂತ್ರಸ್ತ ಯುವತಿ ವರ್ಚುವಲಿ ರಿಯಾಲಿಟಿ ವಿಡಿಯೋ ಗೇಮ್​ ಆಡುತ್ತಿದ್ದಳು. ಈ ವೇಳೆ ಪುರುಷರ ಗ್ಯಾಂಗ್​ ಒಂದು ಗೇಮ್​ನಲ್ಲೇ ವರ್ಚುವಲ್​ ಅವತಾರದಲ್ಲಿ ಅತ್ಯಾಚಾರ ಎಸಗಿರುವುದಾಗಿ ದಿ ಮಿರರ್​ ವರದಿ ಮಾಡಿದೆ. ಆಪಾದಿತ ವರ್ಚುವಲ್ ದೌರ್ಜನ್ಯ ನಡೆದಾಗ ಸಂತ್ರಸ್ತೆಯ ಡಿಜಿಟಲ್ ಪಾತ್ರವು ಹೆಚ್ಚಿನ ಸಂಖ್ಯೆಯ ಇತರ ಬಳಕೆದಾರರೊಂದಿಗೆ ಆನ್‌ಲೈನ್ “ರೂಮ್” ನಲ್ಲಿತ್ತು. ಯುವತಿ “ಲೈಂಗಿಕವಾಗಿ” ಗುರಿಯಾದಾಗ ಆಕೆ ಯಾವ ವರ್ಚುವಲ್ ರಿಯಾಲಿಟಿ ಗೇಮ್​ ಆಡುತ್ತಿದ್ದಳು ಎಂಬುದು ಸ್ಪಷ್ಟವಾಗಿಲ್ಲ.

    ಕಿರಾತಕರಿಗೆ ಮೆಟಾವರ್ಸ್ ವೇದಿಕೆ ಸೃಷ್ಟಿ
    ನ್ಯಾಷನಲ್​ ಪೊಲೀಸ್​ ಚೀಫ್​ ಕೌನ್ಸಿಲ್​ನ ಮಕ್ಕಳ ರಕ್ಷಣೆ ಮತ್ತು ದೌರ್ಜನ್ಯ ತನಿಖಾ ತಂಡದ ಮುಖ್ಯಸ್ಥ ಇಯಾನ್ ಕ್ರಿಚ್ಲಿ ಅವರು ಡೈಲಿ ಮೇಲ್‌ನೊಂದಿಗೆ ಮಾತನಾಡಿದ್ದು, ಮೆಟಾವರ್ಸ್ ಲೈಂಗಿಕ ಅಪರಾಧಿಗಳಿಗೆ ಘೋರ ಅಪರಾಧಗಳನ್ನು ಎಸಗಲು ಅವಕಾಶವನ್ನು ನೀಡುತ್ತದೆ ಎಂದಿದ್ದಾರೆ. ಇದಕ್ಕಾಗಿಯೇ ನಾವು ಕಿರಾತಕರ ವಿರುದ್ಧ ಸಾಮೂಹಿಕವಾಗಿ ಹೋರಾಟ ಮಾಡಬೇಕಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಯುವಜನರಿಗೆ ಆನ್‌ಲೈನ್‌ ರಕ್ಷಣೆ ಮತ್ತು ಬೆದರಿಕೆ ಅಥವಾ ಭಯವಿಲ್ಲದೆ ಸುರಕ್ಷಿತವಾಗಿ ತಂತ್ರಜ್ಞಾನವನ್ನು ಬಳಸಬಹುದು ಎಂಬ ನಂಬಿಕೆಯನ್ನು ಕೊಡಬಹುದಾಗಿದೆ ಎಂದಿದ್ದಾರೆ.

    ಇಂದಿನ ದಿಜಿಟಲ್​ ಯುಗದಲ್ಲಿ ಅಪರಾಧಿಗಳು ವರ್ಚುವಲ್ ಜಗತ್ತನ್ನು ಪ್ರವೇಶಿಸಿದ್ದಾರೆ. ಹಣಕಾಸಿನ ಹಗರಣಗಳು, ಕಿರುಕುಳ, ದ್ವೇಷದ ಮಾತು ಮತ್ತು ಬೆದರಿಕೆಗಳು ಡಿಜಿಟಲ್​ನಲ್ಲಿ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿವೆ. ನಿರಂತರವಾಗಿ ಅಪರಾಧಿಗಳ ಮೇಲೆ ಹದ್ದಿನ ಕಣ್ಣಿಡಲು ಮತ್ತು ಎಲ್ಲ ಆನ್‌ಲೈನ್ ವೇದಿಕೆಗಳಲ್ಲಿ ಸಂತ್ರಸ್ತರನ್ನು ರಕ್ಷಿಸಲು ನಮಗೆ ನೆರವಾಗುವಂತಹ ನಮ್ಮ ಪೊಲೀಸಿಂಗ್ ವಿಧಾನವನ್ನು ಇನ್ನಷ್ಟು ಅಪ್​ಡೇಟ್​ ಮಾಡಬೇಕಿದೆ ಎಂದು ಕ್ರಿಚ್ಲಿ ಹೇಳಿದರು.

    ಡಿಜಿಟಲ್ ಗುರುತುಗಳನ್ನು ರಕ್ಷಿಸುವುದು ಮತ್ತು ಬಳಕೆದಾರರ ಸುರಕ್ಷತೆಯನ್ನು ಖಾತ್ರಿಪಡಿಸುವುದು ಕಾನೂನು-ಜಾರಿ ಸಂಸ್ಥೆಗಳಿಗೆ ಹೊಸ ಸವಾಲಾಗುತ್ತಿದೆ. ವರ್ಚುವಲ್ ರಿಯಾಲಿಟಿ ಸ್ಪೇಸ್‌ಗಳನ್ನು ಪೊಲೀಸಿಂಗ್​ ಮಾಡಲು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನೈಜ-ಪ್ರಪಂಚದ ಕಾನೂನು ಜಾರಿ ಅಗತ್ಯವಿರುತ್ತದೆ ಎಂದು ಕ್ರಿಚ್ಲಿ ತಿಳಿಸಿದರು. (ಏಜೆನ್ಸೀಸ್​)

    ಅರ್ಧ ಹೆಣ್ಣು, ಇನ್ನರ್ಧ ಭಾಗ ಗಂಡು! 100 ವರ್ಷದ ನಂತ್ರ ಅಪರೂಪದ ಪಕ್ಷಿ ಪತ್ತೆ, ಏಕೆ ಹೀಗೆ? ಇಲ್ಲಿದೆ ಅಚ್ಚರಿ ಕಾರಣ….

    ಅರೇ..ಇದೆಂಥಾ ವಿಚಿತ್ರ ಶಾಟ್​! ಮ್ಯಾಕ್ಸಿಯ ಹೊಸ ಹೊಡೆತಕ್ಕೆ ಏನೆಂದು ಕರೀಬೇಕು ನೀವೇ ಹೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts