More

    ಅರ್ಧ ಹೆಣ್ಣು, ಇನ್ನರ್ಧ ಭಾಗ ಗಂಡು! 100 ವರ್ಷದ ನಂತ್ರ ಅಪರೂಪದ ಪಕ್ಷಿ ಪತ್ತೆ, ಏಕೆ ಹೀಗೆ? ಇಲ್ಲಿದೆ ಅಚ್ಚರಿ ಕಾರಣ….

    ನವದೆಹಲಿ: ಪುರಾಣದಲ್ಲಿ ಅರ್ಧನಾರೀಶ್ವರನ ಬಗ್ಗೆ ನೀವು ಕೇಳಿರಬಹುದು. ಒಂದೇ ದೇಹ ಆದರೆ, ಅರ್ಧ ಹೆಣ್ಣು ಅಂದರೆ ಪಾರ್ವತಿ ಮತ್ತು ಇನ್ನರ್ಧ ಗಂಡು ಅಂದರೆ ಶಿವನ ರೂಪದ ಬಗ್ಗೆ ತಿಳಿದಿರಬಹುದು. ಸಿನಿಮಾಗಳಲ್ಲಿಯೂ ಈ ಬಗ್ಗೆ ತೋರಿಸಲಾಗಿದೆ. ಇದಿಷ್ಟೇ ಅಲ್ಲದೆ, ಮನುಷ್ಯರಲ್ಲಿ ಅರ್ಧ ಗಂಡು ಮತ್ತು ಅರ್ಧ ಹೆಣ್ಣಿನ ಗುಣ ಇರುವುದನ್ನು ನೋಡಿದ್ದೇವೆ. ಆದರೆ, ಪ್ರಾಣಿ-ಪಕ್ಷಿಗಳಲ್ಲಿಯೂ ಈ ಅಸಾಮಾನ್ಯ ಸಂಗತಿ ಇದೆಯೇ? ಎಂಬ ಪ್ರಶ್ನೆ ಸಹಜವಾಗಿ ನಮ್ಮಲ್ಲಿ ಮೂಡುತ್ತದೆ. ಇದಕ್ಕೆ ಉತ್ತರ ನೀಡುವಂತಹ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಹೌದು, ಅರ್ಧ ಹೆಣ್ಣು, ಇನ್ನರ್ಧ ಗಂಡಿನ ಅಂಶವುಳ್ಳ ಅಪರೂಪದ ಪಕ್ಷಿಯೊಂದು ಪ್ರಾಣಿಶಾಸ್ತ್ರಜ್ಞರೊಬ್ಬರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. 100 ವರ್ಷಗಳಿಗೂ ಹೆಚ್ಚು ಅವಧಿಯ ಬಳಿಕ ಕಾಣಸಿಕ್ಕ ಎರಡನೇ ಅಪರೂಪದ ದೃಶ್ಯ ಇದಾಗಿದೆ. ಪಕ್ಷಿಯ ಹೆಸರು ಗ್ರೀನ್​ ಹನಿಕ್ರೀಪರ್​. ಹಸಿರು ಬಣ್ಣದಲ್ಲಿರುವ ದೇಹದ ಅರ್ಧ ಭಾಗ ಹೆಣ್ಣು ಮತ್ತು ನೀಲಿ ಬಣ್ಣದಲ್ಲಿರುವ ಇನ್ನರ್ಧ ಭಾಗ ಗಂಡು. ಈ ಪಕ್ಷಿ ಯುನೈಟೆಡ್​ ಸ್ಟೇಟ್ಸ್​ನ ದಕ್ಷಿಣ ಕರೊಲಿನಾ ರಾಜ್ಯದ ಕೊಲಂಬಿಯಾದಲ್ಲಿ ಕಂಡುಬಂದಿದೆ.

    ಒಟಾಗೋ ಯೂನಿವರ್ಸಿಟಿ ಅಪರೂಪದ ಪಕ್ಷಿಯ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ. ಒಟಾಗೋ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಪ್ರಾಣಿಶಾಸ್ತ್ರಜ್ಞ ಹ್ಯಾಮಿಶ್ ಸ್ಪೆನ್ಸರ್ ಅವರು ಕೊಲಂಬಿಯಾದಲ್ಲಿ ವಿಹಾರ ನಡೆಸುತ್ತಿದ್ದ ಸಂದರ್ಭದಲ್ಲಿ ಹವ್ಯಾಸಿ ಪಕ್ಷಿಶಾಸ್ತ್ರಜ್ಞ ಜಾನ್ ಮುರಿಲ್ಲೊ ಅವರು ಗ್ರೀನ್​ ಹನಿಕ್ರೀಪರ್ ಪಕ್ಷಿಯನ್ನು ತೋರಿಸಿದರು. ಈ ಪಕ್ಷಿ ಸಾಮಾನ್ಯವಾಗಿ ತನ್ನ ಬಲಭಾಗದಲ್ಲಿ ಪುರುಷ ಪುಕ್ಕಗಳನ್ನು ಹೊಂದಿತ್ತು ಮತ್ತು ಅದರ ಎಡಭಾಗದಲ್ಲಿ ಸಾಮಾನ್ಯವಾಗಿ ಹೆಣ್ಣು ಗರಿಗಳನ್ನು ಹೊಂದಿತ್ತು. ಅಲ್ಲದೆ, ವಿಶೇಷವಾಗಿ ತಲೆಯ ಮೇಲೆಯೂ ಕೆಲವು ಗರಿಗಳನ್ನು ಹೊಂದಿತ್ತು ಎಂದು ಜರ್ನಲ್ ಆಫ್ ಫೀಲ್ಡ್ ಆರ್ನಿಥಾಲಜಿಯಲ್ಲಿ ಪ್ರಕಟವಾದ ವರದಿಯಲ್ಲಿ ಉಲ್ಲೇಖವಾಗಿದೆ.

    ಅನೇಕ ಪಕ್ಷಿವೀಕ್ಷಕರು ತಮ್ಮ ಇಡೀ ಜೀವನವನ್ನು ಕಳೆದರೂ ಕೆಲವೊಮ್ಮೆ ಯಾವುದೇ ಜಾತಿಯ ಪಕ್ಷಿಗಳಲ್ಲಿ ದ್ವಿಲಿಂಗಿ ಅಥವಾ ಉಭಯಲಿಂಗಿಯನ್ನು ನೋಡಲಾರರು. ಹೀಗಿರುವಾಗ ಈ ವಿದ್ಯಮಾನವು ಪಕ್ಷಿಗಳಲ್ಲಿ ಅತ್ಯಂತ ಅಪರೂಪವಾಗಿದೆ. ಇದನ್ನು ವೈಜ್ಞಾನಿಕವಾಗಿ ಗೈನಾಂಡ್ರೊಮಾರ್ಫಿಕ್ ಎಂದು ಕರೆಯಲಾಗುತ್ತದೆ. ಹಕ್ಕಿ ಗಂಡು ಮತ್ತು ಹೆಣ್ಣು ಎರಡೂ ಲಕ್ಷಣಗಳನ್ನು ಹೊಂದಿದ್ದು, ಮಧ್ಯ ಭಾಗದಲ್ಲಿ ಸಂಪೂರ್ಣವಾಗಿ ವಿಭಜನೆಯಾಗುತ್ತದೆ ಎಂದು ಹ್ಯಾಮಿಶ್ ಸ್ಪೆನ್ಸರ್ ತಿಳಿಸಿದ್ದಾರೆ.

    ಏಕೆ ಸಂಭವಿಸುತ್ತದೆ?
    ಪ್ರೊಫೆಸರ್ ಸ್ಪೆನ್ಸರ್ ಪ್ರಕಾರ, ಅತ್ಯಂತ ಅಪರೂಪದ ವಿದ್ಯಮಾನವು ಮೊಟ್ಟೆಯನ್ನು ಉತ್ಪಾದಿಸಲು ಸ್ತ್ರೀ ಕೋಶ ವಿಭಜನೆಯ ಸಮಯದಲ್ಲಿ ಉಂಟಾಗುವ ದೋಷದಿಂದ ಎರಡು ವೀರ್ಯವೂ ಫಲೀಕರಣಗೊಳ್ಳುವುದರಿಂದ ಇದು ಸಂಭವಿಸುತ್ತದೆ. ಜರ್ನಲ್ ಆಫ್ ಫೀಲ್ಡ್ ಆರ್ನಿಥಾಲಜಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅಪರೂಪದ ಹಕ್ಕಿಯು ಗ್ರೀನ್ ಹನಿಕ್ರೀಪರ್​ಗಿಂತ ವಿಶೇಷವಾಗಿ ವರ್ತಿಸುತ್ತಿಲ್ಲ. ಅದರ ವರ್ತನೆ ಸಾಮಾನ್ಯವಾಗಿಯೇ ಇದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: SciNews)

    ಅರೇ..ಇದೆಂಥಾ ವಿಚಿತ್ರ ಶಾಟ್​! ಮ್ಯಾಕ್ಸಿಯ ಹೊಸ ಹೊಡೆತಕ್ಕೆ ಏನೆಂದು ಕರೀಬೇಕು ನೀವೇ ಹೇಳಿ…

    ಅಯೋಧ್ಯೆಗೂ ಬಾಗಲಕೋಟೆಗೂ ಇದೆ ಲಿಂಕ್​! ಸೀತೆಮನೆ ಗ್ರಾಮದಲ್ಲಿ ಇಂದಿಗೂ ಸೀತೆಯ ನೆನಪುಗಳು ಜೀವಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts