More

    ಹಾನಗಲ್ಲ ಗ್ಯಾಂಗ್​ರೇಪ್ ಪ್ರಕರಣ ನಾಗರಿಕರು ತಲೆತಗ್ಗಿಸುವ ಘಟನೆ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ

    ಬ್ಯಾಡಗಿ: ಹಾನಗಲ್ಲ ಗ್ಯಾಂಗ್​ರೇಪ್ ಪ್ರಕರಣ ಪ್ರತಿಯೊಬ್ಬರೂ ತಲೆತಗ್ಗಿಸುವ ಘಟನೆಯಾಗಿದೆ. ಈವರೆಗೂ ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗದಿರುವುದು ದುರ್ದೈವದ ಸಂಗತಿಯಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

    ಭಾನುವಾರ ಚಿಕ್ಕಬಾಸೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನವರು ಅಲ್ಪಸಂಖ್ಯಾತರ ಬಗ್ಗೆ ಬಹಳ ಉದ್ದುದ್ದ ಭಾಷಣ ಮಾಡುತ್ತಾರೆ. ಮುಖ್ಯಮಂತ್ರಿಗಳು ಬಾಯಿ ತೆರೆದರೆ ಅಲ್ಪಸಂಖ್ಯಾತರಿಂದಲೇ ಆರಂಭಿಸಿ, ತುಷ್ಟೀಕರಣದಿಂದಲೇ ಮಾತು ಮುಗಿಸುತ್ತಾರೆ. ಜ. 7 ಹಾಗೂ 8ರಂದು ಘಟನೆ ನಡೆದರೂ ಎಫ್​ಐಆರ್ ದಾಖಲಾಗಲಿಲ್ಲ. ಸಂತ್ರಸ್ತೆಯನ್ನು ಮಾತನಾಡಿಸಲಿಲ್ಲ, ಎಲ್ಲೋ ಒಂದು ಕಡೆ ರಾಜ್ಯ ಸರ್ಕಾರ ಈ ದೊಡ್ಡ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡಿದ್ದು, ರಾಜ್ಯದ ಜನ ಗಮನಿಸುತ್ತಿದ್ದಾರೆ. ಸಂತ್ರಸ್ತೆಗೆ ಹಣ ನೀಡಿ, ಸಮಾಧಾನಪಡಿಸಿ ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿರುವುದು ಅತ್ಯಂತ ಖಂಡನೀಯ ಎಂದರು.

    ಯಾವ ಧರ್ಮದ ಮಹಿಳೆಯಾಗಲಿ, ಮಾನವೀಯತೆ ಅಗತ್ಯ. ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳೇ ಸುದ್ದಿ ಹೊರಬರದಂತೆ ಮುಚ್ಚಿಹಾಕುವಲ್ಲಿ ನೇರವಾಗಿ ಭಾಗಿಯಾಗಿದ್ದು, ಸರ್ಕಾರದ ಕೈಗೊಂಬೆಯಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಪಸಂಖ್ಯಾತ ಮಹಿಳೆಗೆ ರಾಜ್ಯದಲ್ಲಿ ರಕ್ಷಣೆಯಿಲ್ಲದಂತಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಸರ್ಕಾರ ಈ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡಿದ್ದು, ಜನಸಾಮಾನ್ಯರ ಗತಿಯೇನು..? ಬೆಳಗಾವಿ, ಹಾನಗಲ್ಲ ಘಟನೆಗಳನ್ನು ನೋಡಿದರೆ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿದಂತಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts