More

    ಯುಕೆಯಲ್ಲಿ 2ನೇ ವಿಶ್ವಯುದ್ಧದ ಬಾಂಬ್​ ಸ್ಫೋಟ! ನಿಷ್ಕ್ರಿಯಗೊಳಿಸುವ ಪ್ರಯತ್ನ ವಿಫಲ

    ಲಂಡನ್​: ಈವರೆಗೂ ಪತ್ತೆಯಾಗದಿರುವ ಎರಡನೇ ವಿಶ್ವಯುದ್ಧದ ಸ್ಫೋಟಗೊಳ್ಳದ ಸಾವಿರಾರು ಬಾಂಬ್​ಗಳು ಪ್ರಪಂಚಾದ್ಯಂತ ಇರುವ ಸಾಧ್ಯತೆ ಇದೆ. ಈ ಹಿಂದೆ ಸ್ಫೋಟಕ ತಜ್ಞರು ಸಾವಿರಾರು ಜನರು ವಾಸಿಸುವ ಪ್ರದೇಶಗಳಲ್ಲಿ ಇಂತಹ ಬಾಂಬ್​ಗಳನ್ನು ನಿಷ್ಕ್ರಿಯೆಗೊಳಿಸಿದ ಉದಾಹರಣೆಗಳಿವೆ. ತೀರಾ ಇತ್ತೀಚೆಗೆ ನಾರ್ಫೋಲ್ಕ್​ನ ಗ್ರೇಟ್ ಯಾರ್ಮೌಥ್​ ಪಟ್ಟಣದಲ್ಲಿ​ 2ನೇ ವಿಶ್ವಯುದ್ಧದ ಬಾಂಬ್​ ಒಂದು ಆಕಸ್ಮಿಕವಾಗಿ ಸ್ಫೋಟಗೊಂಡಿರುವುದಾಗಿ ಬ್ರಿಟಿಷ್​ ಎಮರ್ಜೆನ್ಸಿ ಸರ್ವೀಸ್​ ಆ್ಯಂಡ್​ ಏಜೆನ್ಸೀಸ್​ ಘೋಷಣೆ ಮಾಡಿದೆ.

    ನಾರ್ಫೋಲ್ಕ್​ ಪೊಲೀಸರ ಪ್ರಕಾರ ಇದೊಂದು ಯೋಜಿತವಲ್ಲದ ಸ್ಫೋಟವಾಗಿದೆ. ತಜ್ಞರು ಬಾಂಬ್​ ಅನ್ನು ನಿಷ್ಕ್ರಿಯಗೊಳಿಸಲು ಯತ್ನಿಸುತ್ತಿರುವಾಗಲೇ ಸ್ಫೋಟಗೊಂಡಿದೆ. ಆದರೆ, ಈ ಸ್ಫೋಟದಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಬಾಂಬ್​ ಸ್ಫೋಟಕ್ಕೆ ಸಂಬಂಧಿಸಿದ ವಿಡಿಯೋ ತುಣುಕನ್ನು ನಾರ್ಫೋಲ್ಕ್​ ಪೊಲೀಸರು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

    ಗ್ರೇಟ್​ ಯಾರ್ಮೌಥ್​ನಲ್ಲಿ ಮಂಗಳವಾರ ಬೆಳಗ್ಗೆ ಮಿಲಿಟರಿ ಸಾಧನ ಬಾಂಬ್​ ಅನ್ನು ಪತ್ತೆಹಚ್ಚಿತು. ಇದರ ಬೆನ್ನಲ್ಲೇ ನೂರಾರು ಮಂದಿಯನ್ನು ಮನೆ ಮತ್ತು ಕೆಲಸ ಮಾಡುವ ಸ್ಥಳದಿಂದ ಬೇರೆಡೆ ಸ್ಥಳಾಂತರ ಮಾಡಲಾಯಿತು. ಆದಾಗ್ಯೂ ವಿಶೇಷ ರೋಬೋಟ್​ಗಳನ್ನು ನಿಯೋಜಿಸಿ ಬಾಂಬ್​ ಅನ್ನು ಸುರಕ್ಷಿತವಾಗಿ ಸ್ಫೋಟಿಸುವ ತಜ್ಞರ ಪ್ಲಾನ್​ ಯಶಸ್ವಿಯಾಗಲಿಲ್ಲ. ಬಾಂಬ್​ ಸ್ಫೋಟಗೊಳ್ಳುವುದನ್ನು ಯಾರಿಂದಲೂ ತಡೆಯಲಾಗಲಿಲ್ಲ.

    ಎಲ್ಲಾ ಸೇನೆ ಮತ್ತು ತುರ್ತು ಸೇವಾ ಸಿಬ್ಬಂದಿಯು ಈ ಘಟನೆಗೆ ಸಾಕ್ಷಿಯಾದರು ಮತ್ತು ಸ್ಫೋಟದಿಂದ ಸಂಭವಿಸಿದ ಹಾನಿಯನ್ನು ನಿರ್ಣಯಿಸಲಾಗುತ್ತಿದೆ. ಈವರೆಗೂ ಯಾವುದೇ ದೈಹಿಕ ಹಾನಿ ಅಥವಾ ಪ್ರಾಣ ಹಾನಿ ವರದಿಯಾಗಿಲ್ಲ.

    ಸಾಧನವನ್ನು ನಿಶ್ಯಸ್ತ್ರಗೊಳಿಸಲು ಕೆಲಸ ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ ಸ್ಫೋಟಗೊಂಡಿತು ಎಂದು ನಾರ್ಫೋಲ್ಕ್​ ಕಾನ್‌ಸ್ಟಾಬ್ಯುಲರಿಯ ಸಹಾಯಕ ಮುಖ್ಯ ಕಾನ್ಸ್‌ಟೇಬಲ್ ನಿಕ್ ಡೇವಿಸನ್ ಖಚಿತಪಡಿಸಿದರು. (ಏಜೆನ್ಸೀಸ್​)

    ಅಪ್ರಾಪ್ತೆಯ ಶವಪರೀಕ್ಷೆಯಿಂದ ಸಿಕ್ಕಿಬಿದ್ದ ಕಾಮುಕ! ಸಂಬಂಧಿ ಯುವಕನಿಂದಲೇ ನಡೆಯಿತು ಘೋರ ಕೃತ್ಯ

    ಲಕ್ಷಾಂತರ ಟೆಕ್ಕಿಗಳು ಲೇ ಆಫ್: ಅಗ್ರ ಸ್ಥಾನದಲ್ಲಿ ಗೂಗಲ್​, ಇನ್ನಷ್ಟು ಟೆಕ್ಕಿಗಳು ಸಂತ್ರಸ್ತರಾಗುವ ಭೀತಿ

    ಇಪ್ಪತ್ತು ವಸಂತಗಳನ್ನು ಸಾಗಿ ಬಂದ ಚಿಣ್ಣರಬಿಂಬ: ಮಕ್ಕಳ ಕಾಳಜಿ, ಭವ್ಯ ರಾಷ್ಟ್ರ ನಿರ್ಮಾಣದ ಗುರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts