More

    ಹಡಗುಗಳ ಮೇಲಿನ ದಾಳಿಗೆ ಪ್ರತೀಕಾರ: ಹೌಥಿ ಉಗ್ರರ 36 ನೆಲೆಗಳ ಮೇಲೆ ಯುಎಸ್​-ಯುಕೆ ಜಂಟಿ ದಾಳಿ

    ವಾಷಿಂಗ್ಟನ್​: ವಾಣಿಜ್ಯ​ ಹಡಗುಗಳ ಮೇಲೆ ಪದೇಪದೆ ದಾಳಿ ಮಾಡಿ ಜಾಗತಿಕ ವ್ಯಾಪರಕ್ಕೆ ಅಡ್ಡಿ ಮತ್ತು ಜೀವಗಳನ್ನು ಅಪಾಯಕ್ಕೆ ಸಿಲುಕಿಸಿದ ಇರಾನ್​ ಬೆಂಬಲಿತ ಹೌಥಿ ಉಗ್ರರ​ ನೆಲೆಗಳ ಮೇಲೆ ಅಮೆರಿಕ ಮತ್ತು ಬ್ರಿಟನ್​ ಸೇನೆ ಜಂಟಿ ದಾಳಿ ಮಾಡುವ ಮೂಲಕ ಉಗ್ರರಿಗೆ ಬಿಸಿ ಮುಟ್ಟಿಸಿದೆ.

    ಇರಾನ್​ನಲ್ಲಿರುವ ಸುಮಾರು 36 ಹೌಥಿ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಜನವರಿ 28ರಂದು ಜೋರ್ಡಾನ್‌ನಲ್ಲಿ ಮೂವರು US ಸೈನಿಕರ ಹತ್ಯೆಗೆ ಪ್ರತಿಕ್ರಿಯೆಯಾಗಿ ಇರಾಕ್ ಮತ್ತು ಸಿರಿಯಾದಲ್ಲಿ ಇರಾನ್ ಬೆಂಬಲಿತ ಹೌಥಿಗಳ ವಿರುದ್ಧ ಏಕಪಕ್ಷೀಯವಾಗಿ ಅಮೆರಿಕ ಸೇನೆ ದಾಳಿ ಮಾಡಿದ ಒಂದು ದಿನದ ನಂತರ ಯೆಮೆನ್‌ನಲ್ಲಿ ಜಂಟಿ ವಾಯುದಾಳಿಗಳು ನಡೆದಿವೆ.

    ಕೆಂಪು ಸಮುದ್ರದ ಮೂಲಕ ಸಾಗುವ ಅಂತಾರಾಷ್ಟ್ರೀಯ ಮತ್ತು ವಾಣಿಜ್ಯ ಹಡಗುಗಳು ಹಾಗೂ ನೌಕಾ ಹಡಗುಗಳ ವಿರುದ್ಧ ಹೌಥಿಗಳು ನಿರಂತರ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಯೆಮೆನ್‌ನ 13 ಸ್ಥಳಗಳಲ್ಲಿ 36 ಹೌಥಿ ನೆಲೆಗಳನ್ನು ಹೊಡೆದುರುಳಿಸಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್, ಬ್ರಿಟನ್ ಮತ್ತು ಕಾರ್ಯಾಚರಣೆಗೆ ಬೆಂಬಲ ನೀಡಿದ ಇತರ ದೇಶಗಳು ಪ್ರತಿಕಾ ಹೇಳಿಕೆಯಲ್ಲಿ ಖಚಿತಪಡಿಸಿವೆ.

    ಈ ನಿಖರವಾದ ದಾಳಿಗಳು ಜಾಗತಿಕ ವ್ಯಾಪಾರಕ್ಕೆ ಮತ್ತು ಮುಗ್ಧ ನಾವಿಕರ ಜೀವನಕ್ಕೆ ಬೆದರಿಕೆ ಹಾಕಲು ಹೌಥಿಗಳು ಬಳಸುವ ಕುತಂತ್ರಗಳಿಗೆ ಅಡ್ಡಿಪಡಿಸುವ ಮತ್ತು ಅವರನ್ನು ಕುಗ್ಗಿಸುವ ಉದ್ದೇಶವನ್ನು ಹೊಂದಿವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

    ಇಸ್ರೇಲ್-ಹಮಾಸ್ ಯುದ್ಧದಿಂದ ಧ್ವಂಸಗೊಂಡಿರುವ ಗಾಜಾದಲ್ಲಿ ಪ್ಯಾಲೆಸ್ಟೀನಿಯಾದವರಿಗೆ ಬೆಂಬಲವಾಗಿ ಇಸ್ರೇಲ್-ಸಂಯೋಜಿತ ಹಡಗುಗಳನ್ನು ಗುರಿಯಾಗಿಸಿಕೊಂಡು ಹೌಥಿ ಉಗ್ರರು ಕಳೆದ ನವೆಂಬರ್​ ತಿಂಗಳಿಂದ ಕೆಂಪು ಸಮುದ್ರದಲ್ಲಿ ಸಾಗಾಟ ನಡೆಸುವ ಹಡುಗುಗಳನ್ನು ಗುರಿಯಾಗಿಸಿ ಪದೇಪದೆ ದಾಳಿ ನಡೆಸುತ್ತಿವೆ. (ಏಜೆನ್ಸೀಸ್​)

    ಗಿಫ್ಟ್​ ಆಗಿ ಬಂದ ಮೀನು ತಿಂದು ವ್ಯಕ್ತಿ ಸಾವು: ಈ ಪಫ್ಫರ್​ ಫಿಶ್​ ಬಗ್ಗೆ ಕೇಳಿದ್ರೆ ನೀವು ದಂಗಾಗೋದು ಖಚಿತ!

    ಗಾಂಧಿ ಕೊಂದು ದೇಶ ಉಳಿಸಿದ ಗೋಡ್ಸೆ ಬಗ್ಗೆ ಹೆಮ್ಮೆಯಿದೆ ಎಂದ NET ಪ್ರೊಫೆಸರ್​ಗೆ ಬಿಗ್​ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts