More

    ಗಿಫ್ಟ್​ ಆಗಿ ಬಂದ ಮೀನು ತಿಂದು ವ್ಯಕ್ತಿ ಸಾವು: ಈ ಪಫ್ಫರ್​ ಫಿಶ್​ ಬಗ್ಗೆ ಕೇಳಿದ್ರೆ ನೀವು ದಂಗಾಗೋದು ಖಚಿತ!

    ಬ್ರಾಸಿಲಿಯಾ: ಆಘಾತಕಾರಿ ಘಟನೆಯಲ್ಲಿ ತನಗೆ ಉಡುಗೊರೆಯಾಗಿ ನೀಡಿದ ವಿಷಪೂರಿತ ಪಫ್ಫರ್​ ಮೀನನ್ನು ಬೇಯಿಸಿ, ಸೇವಿಸಿದ ಕೇವಲ 35 ದಿನಗಳ ಬಳಿಕ ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿದ್ದಾರೆ.

    ಮೃತ ವ್ಯಕ್ತಿಯನ್ನು ಮ್ಯಾಗ್ನೊ ಸೆರ್ಗಿಯೊ ಗೋಮ್ಸ್ (46) ಎಂದು ಗುರುತಿಸಲಾಗಿದೆ. ಬ್ರೆಜಿಲ್‌ನ ಎಸ್ಪಿರಿಟೊ ಸಾಂಟಾ ಪ್ರಾಂತ್ಯದ ಅರಾಕ್ರೂಜ್‌ ನಿವಾಸಿ. ಜಪಾನ್ ಸಮುದ್ರದಲ್ಲಿ ಕಂಡುಬರುವ ಈ ರೀತಿಯ ಮೀನು ಜಪಾನ್‌ನ ಅತ್ಯಂತ ಜನಪ್ರಿಯ ಮೀನು ಆಹಾರವಾಗಿದೆ. ಇದನ್ನು ಸೆರ್ಗಿಯೋ ಉಡುಗೊರೆಯಾಗಿ ಪಡೆದಿದ್ದ.

    ಮ್ಯಾಗ್ನೋ ಸೆರ್ಗಿಯೋ ಮತ್ತು ಅವನ ಸ್ನೇಹಿತ ಇಬ್ಬರೂ ಉಡುಗೊರೆಯಾಗಿ ಬಂದ ಮೀನನ್ನು ಅಡುಗೆ ಮಾಡಿ, ಸೇವಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಮ್ಯಾಗ್ನೋ ಸೆರ್ಗಿಯೋ, ಕೋಮಾ ಸ್ಥಿತಿಗೆ ಜಾರಿದನು. ಬರೋಬ್ಬರಿ 35 ದಿನಗಳವರೆಗೆ ಕೋಮಾಗೆ ಜಾರಿದ್ದ ಮ್ಯಾಗ್ನೋ ಸೆರ್ಗಿಯೋ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಮ್ಯಾಗ್ನೋ ಸೆರ್ಗಿಯೋ ಜತೆ ಮೀನು ತಿಂದಿದ್ದ ಆತನ ಸ್ನೇಹಿತನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೀನನ್ನು ತಿಂದು ಅದು ಹೇಗೆ ಮೃತಪಟ್ಟನು ಎಂದು ಎಲ್ಲರು ಅಚ್ಚರಿಪಡುತ್ತಿದ್ದಾರೆ. ಅಂದಹಾಗೆ ಈ ಪಫ್ಪರ್ ಮೀನು ತುಂಬಾ ವಿಷಕಾರಿ ಮೀನು. ಇತರ ಸಮುದ್ರ ಪ್ರಭೇದಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು, ಈ ಮೀನಿನ ಯಕೃತ್ತಿನಲ್ಲಿ ಶಕ್ತಿಯುತವಾದ ವಿಷವನ್ನು ಉತ್ಪಾದಿಸುತ್ತದೆ. ಈ ವಿಷವು ಸೈನೈಡ್‌ಗಿಂತ 1,000 ಪಟ್ಟು ಹೆಚ್ಚು ಮಾರಕವಾಗಿದೆ.

    ಕೆಲವು ತರಬೇತಿ ಪಡೆದ ಜಪಾನಿನ ಬಾಣಸಿಗರಿಗೆ ಮಾತ್ರ ಈ ಮೀನನ್ನು ಸೂಕ್ಷ್ಮವಾಗಿ ಬೇಯಿಸುವುದು ಹೇಗೆ ಎಂದು ತಿಳಿದಿದೆ ಎಂಬುದು ಗಮನಾರ್ಹ ಸಂಗತಿ. ಅಲ್ಲದೆ, ಈ ಮೀನು ಅಡುಗೆ ಮಾಡಲು ಲೈಸೆನ್ಸ್​ ಸಹ ಪಡೆಯಬೇಕಿದೆ. ಈ ಮೀನು ಖಾದ್ಯ ತಿಂದು ಪ್ರತಿ ವರ್ಷ ನೂರಾರು ಜಪಾನಿಗರು ಸಾಯುತ್ತಾರೆ. (ಏಜೆನ್ಸೀಸ್​)

    ವಿಶ್ವದ ಅತ್ಯಂತ ಶ್ರೀಮಂತ ಸ್ಟಾರ್​ ನಟರಿವರು! ಭಾರತದ ಯಾವ ನಟರಿಗೆ ಈ ಸಾಲಿನಲ್ಲಿ ಸ್ಥಾನ? ಇಲ್ಲಿದೆ ಮಾಹಿತಿ

    ನಿಜ್ಜರ್ ಸ್ನೇಹಿತನ ಮನೆ ಮೇಲೆ ಗುಂಡಿನ ದಾಳಿ: ತನಿಖೆಗೆ ಮುಂದಾದ ಕೆನಡಾ ಸರ್ಕಾರ

    285 ವರ್ಷ ಹಳೆಯ ನಿಂಬೆಹಣ್ಣು ಹರಾಜಿನಲ್ಲಿ ಬಾಚಿದ ಮೊತ್ತ ಕೇಳಿದ್ರೆ ನೀವು ಬೆರಗಾಗೋದು ಖಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts