More

    ಮಹಾರಾಷ್ಟ್ರದಿಂದ ಕರ್ನಾಟಕದ ತುಂಬೆಲ್ಲಾ ಕರೊನಾ ಕೇಕೆ: ಒಂದೇ ದಿನ 99 ಪ್ರಕರಣ!

     ಬೆಂಗಳೂರು: ಕರ್ನಾಟಕಕ್ಕೆ ಮಹಾರಾಷ್ಟ್ರ ಬಹಳ ದುಬಾರಿಯಾಗಿ ಪರಿಣಮಿಸಿದೆ. ಮಹಾರಾಷ್ಟ್ರದಿಂದ ಕರ್ನಾಟಕದ ವಿವಿಧ ಊರುಗಳಿಗೆ ವಾಪಸಾದವರಿಗೇ ಅತ್ಯಧಿಕ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಿದ್ದು, ಇದು ಏರುಗತಿಯಲ್ಲಿಯೇ ಸಾಗುತ್ತಿದೆ. ಅದರಲ್ಲಿಯೂ ಮುಂಬೈ ಅಂತೂ ರಾಜ್ಯಕ್ಕೆ ಮಹಾಮಾರಿಯಾಗಿಯೇ ಪರಿಣಮಿಸಿಬಿಟ್ಟಿದೆ!

    ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗೆ ರಾಜ್ಯದಲ್ಲಿ 99 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇವರಲ್ಲಿ ಅತ್ಯಧಿಕ ಪಾಲು ಮಹಾರಾಷ್ಟ್ರದ ಮುಂಬೈ ಹಾಗೂ ಸೋಲಾಪುರಕ್ಕೆ ಸೇರುತ್ತದೆ.

    ಇದನ್ನೂ ಓದಿ: VIDEO: ಕಸ ಎಸೆಯಲು ದಿನವೂ ಇಲ್ಲಿ ಬರುತ್ತವೆ ವಿಚಿತ್ರ ಜೀವಿಗಳು- ನೆಟ್ಟಿಗರು ಫುಲ್​ ಫಿದಾ…

    ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1246ಕ್ಕೆ ಏರಿದೆ.ಕಲಬುರಗಿಯಲ್ಲಿ ಆರು ತಿಂಗಳ ಶಿಶುವಿಗೂ ಸೋಂಕು ಬಾಧಿಸಿದೆ. ಒಟ್ಟು ಸೋಂಕಿತರ ಪೈಕಿ 530 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, 678 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೆ ಈಗಾಗಲೇ 37 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
    ನಿಜಾಮುದ್ದೀನ್‌ ಮರ್ಕಜ್‌ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.

    ಇದನ್ನೂ ಓದಿ: ನೂರಾರು ಭಾರತೀಯರನ್ನು ಗಡಿಪಾರು ಮಾಡಿದ ಅಮೆರಿಕ, ಉಳಿದವರ ಸ್ಥಿತಿ ಅಯೋಮಯ!

    ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

    ರಾಜ್ಯದಲ್ಲಿನ ಕರೊನಾ ಸೋಂಕಿನ ಪ್ರಮಾಣ ಈ ರೀತಿ ಇದೆ:

    ಮಹಾರಾಷ್ಟ್ರದಿಂದ ಕರ್ನಾಟಕದ ತುಂಬೆಲ್ಲಾ ಕರೊನಾ ಕೇಕೆ: ಒಂದೇ ದಿನ 99 ಪ್ರಕರಣ!

    ಮಹಾರಾಷ್ಟ್ರದಿಂದ ಕರ್ನಾಟಕದ ತುಂಬೆಲ್ಲಾ ಕರೊನಾ ಕೇಕೆ: ಒಂದೇ ದಿನ 99 ಪ್ರಕರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts