More

    VIDEO: ಕಸ ಎಸೆಯಲು ದಿನವೂ ಇಲ್ಲಿ ಬರುತ್ತವೆ ವಿಚಿತ್ರ ಜೀವಿಗಳು- ನೆಟ್ಟಿಗರು ಫುಲ್​ ಫಿದಾ…

    ಸ್ಪೇನ್​: ಇವರು ಸ್ಪೇನ್​ನಲ್ಲಿರುವ ಅಪ್ಪ-ಮಗಳು. ದಿನವೂ ಇವರು ಕಸವನ್ನು ಹೊತ್ತು ರೋಡಿಗೆ ಬರುವುದನ್ನೇ ಜನ ಕಾಯುತ್ತಿರುತ್ತಾರೆ. ಅಷ್ಟೇ ಏಕೆ? ಇವರು ಕಸ ಹೊತ್ತು ಬರುವ ದೃಶ್ಯಕ್ಕೆ ಇಡೀ ವಿಶ್ವದ ನೆಟ್ಟಿಗರೇ ಭೇಷ್​ ಭೇಷ್​ ಎಂದಿದ್ದಾರೆ.

    ಅಷ್ಟಕ್ಕೂ ಇವರು ಕಸ ತರುವುದರಲ್ಲಿ ಅಂಥದ್ದೇನು ವಿಶೇಷ ಅಂತೀರಾ? ಕಸ ತರುವುದರಲ್ಲಿ ಏನೂ ವಿಶೇಷವಿಲ್ಲ. ಏಕೆಂದರೆ ಎಲ್ಲರಂತೆಯೇ ಇವರು ತರವುದು ಕೂಡ ಮನೆಯಲ್ಲಿನ ಕಸವೇ. ಆದರೆ ವಿಶೇಷ ಇರುವುದು ಇವರ ಡ್ರೆಸ್​ನಲ್ಲಿ.

    ಹೌದು! ಲಾಕ್​ಡೌನ್​ನಿಂದ ಕೋಟ್ಯಂತರ ಮಂದಿ ಜೀವನವೇ ಮುಗಿದುಹೋಯ್ತು ಎಂದು ತಲೆಮೇಲೆ ಕೈಹೊತ್ತು ಕುಳಿತಿರುವಾಗಿ ಈ ಅಪ್ಪ-ಮಗಳ ಜೀವನೋತ್ಸಾಹ ನೋಡಿಯೇ ಇಷ್ಟೊಂದು ಮೆಚ್ಚುಗೆ ವ್ಯಕ್ತವಾಗಿದೆ. ಈ ಅಪ್ಪ- ಮಗಳು ಮಾಡುವುದು ಏನೆಂದರೆ ದಿನವೂ ಚಿತ್ರ-ವಿಚಿತ್ರ ಗೆಟಅಪ್​ನಲ್ಲಿ ಕಸದ ಚೀಲ ಹೊತ್ತು ಬರುತ್ತಾರೆ. ಅದು ಸಾಮಾನ್ಯ ರೀತಿಯ ವೇಷ ಭೂಷಣ ಅಲ್ಲವೇ ಅಲ್ಲ.

    ಇದನ್ನೂ ಓದಿ: ನೂರಾರು ಭಾರತೀಯರನ್ನು ಗಡಿಪಾರು ಮಾಡಿದ ಅಮೆರಿಕ, ಉಳಿದವರ ಸ್ಥಿತಿ ಅಯೋಮಯ!

    ನೋಡಿದರೆ ಇವರು ಮನುಷ್ಯರು ಎಂದು ಎನಿಸುವುದೇ ದಿನ. ಅಷ್ಟು ವಿಚಿತ್ರ ಆಗಿದ್ದರೂ ಅಷ್ಟೇ ಸುಂದರವೂ ಆಗಿರುತ್ತದೆ. ಮಕ್ಕಳಂತೂ ಇವರಿಬ್ಬರು ಮನೆಯಿಂದ ದಿನವೂ ಕಸ ತೆಗೆದುಕೊಂಡು ಹೊರಕ್ಕೆ ಬರುವುದನ್ನೇ ಕಾಯುತ್ತಿರುತ್ತಾರಂತೆ. ಮಕ್ಕಳಷ್ಟೇ ಅಲ್ಲದೇ, ಕಸದ ತೊಟ್ಟಿ ಇಟ್ಟಿರುವ ಏರಿಯಾದ ಅಕ್ಕ-ಪಕ್ಕದ ಜನ ಲಾಕ್​ಡೌನ್​ ನಡುವೆಯೂ ಇವರು ಕಸ ತರುವ ಸಮಯಕ್ಕೇ ಕಾದು ಕಸ ಹಾಕಿದ ಮೇಲೆ ಟಾಟಾ ಮಾಡಿ ಅವರನ್ನು ಬೀಳ್ಕೊಟ್ಟು ಹೋಗುತ್ತಿದ್ದಾರೆ.
    ಲಾಕ್​ಡೌನ್​ನಿಂದ ಮನೆಯೊಳಕ್ಕೆ ಕುಳಿತು ತುಂಬಾ ಬೋರ್​ ಆಗಿತ್ತು. ನಮ್ಮ ಏರಿಯಾದಲ್ಲಿನ ಜನರು ಕೂಡ ಸೋತು ಸುಣ್ಣಗಾಗಿದ್ದರು. ಆದ್ದರಿಂದ ಅವರಿಗೆ ಯಾವುದಾದರೂ ರೀತಿಯಲ್ಲಿ ಖುಷಿ ಪಡಿಸಬೇಕು ಎಂದುಕೊಂಡೆ. ಅದಕ್ಕೆ ನಾನು ಮತ್ತು ಮಗಳು ಈ ರೀತಿ ಮಾಡುತ್ತಿದ್ದೇವೆ ಎನ್ನುತ್ತಾರೆ ಜೇಮಿ.

    VIDEO: “ಆತ್ಮನಿರ್ಭರ್​ ಭಾರತ್​”ಗೆ ಸುಪ್ರಸಿದ್ಧ ಸಂಗೀತಗಾರರಿಂದ ಹೀಗೊಂದು ನಮನ… ಟ್ವಿಟರ್​ನಲ್ಲಿ ಶ್ಲಾಘನೆಗಳ ಮಹಾಪೂರ…​

    ಇದನ್ನು ವೀಡಿಯೋ ಮಾಡಿರುವ ಸ್ಥಳೀಯರು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಪ ಸಮಯದಲ್ಲಿಯೇ ಇದು ವಿಶ್ವಾದ್ಯಂತ ವೈರಲ್​ ಆಗಿದ್ದು, ಅಪ್ಪ- ಮಗಳ ಈ ಸ್ಫೂರ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಇಷ್ಟು ದಿನಗಳ ದುಃಖ ಮರೆತೇ ಹೋಗಿದೆ ಎಂದು ಕೆಲವರು ಹೇಳಿದರೆ, ದಯವಿಟ್ಟು ದಿನವು ನಮಗೆ ವೀಡಿಯೋ ಮಾಡಿ ಕಳುಹಿಸಿ ಎಂದು ಬೇರೆ ಬೇರೆ ದೇಶಗಳ ವಾಸಿಗಳು ಅದರಲ್ಲಿ ಕೋರಿಕೊಂಡಿದ್ದಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts