ಮುಂಬೈ: ಇಡೀ ಜಗತ್ತನ್ನೇ ಕಾಡಿದ ಮಹಾಮಾರಿ ಕರೊನಾ ಸಾಂಕ್ರಮಿಕ ಭೀತಿಯ ನಡುವೆಯೂ ಇಂಡಿಯನ್ ಸೂಪರ್ ಲೀಗ್ ಯಾವುದೇ ತಡೆಯಿಲ್ಲದೆ ಯಶಸ್ವಿಯಾಗಿರುವುದಕ್ಕೆ ಫುಟ್ಬಾಲ್ ಸ್ಪೋರ್ಟ್ಸ್ ಡೆವೆಲಪ್ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್) ಮುಖ್ಯಸ್ಥೆ ನೀತಾ ಅಂಬಾನಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಫರ್ಟೋಡ ಸ್ಟೇಡಿಯಂನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ತಂಡ 2-1 ಗೋಲುಗಳಿಂದ ಎಟಿಕೆ ಮೋಹನ್ ಬಾಗನ್ ತಂಡವನ್ನು ಸೋಲಿಸಿತು. ಈ ಮೂಲಕ ಮೊದಲ ಬಾರಿಗೆ ಮುಂಬೈ ಸಿಟಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವುದರೊಂದಿಗೆ ಏಳನೇ ಆವೃತ್ತಿ ಐಎಸ್ಎಲ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಕ್ರೀಡೆಯ ನಿಜವಾದ ಶಕ್ತಿ ಮತ್ತು ಫುಟ್ಬಾಲ್ನ ನೈಜ ವೈಭವಕ್ಕೆ ಸೀಸನ್ 7 ಗೌರವವಾಗಿದೆ. ಕರೊನಾ ಕಾಲದಲ್ಲಿ ಭಾರತದಲ್ಲಿ ನಡೆದ ಮೊದಲ, ದೀರ್ಘ ಮತ್ತು ಅತ್ಯಂತ ಯಶಸ್ವಿ ಕ್ರೀಡಾಕೂಟ ನಮ್ಮದು ಎಂಬ ಹೆಮ್ಮೆ ನನಗಿದೆ ಎಂದು ಸೀಸನ್ನ ಫಿನಾಲೆಗೂ ಮುನ್ನ ನೀತಾ ಅವರು ವಿಡಿಯೋ ಸಂದೇಶದಲ್ಲಿ ಮಾತನಾಡಿದರು.
ಇದನ್ನೂ ಓದಿರಿ: ಯಾರೀ ಸುಂದರಿ? ಟಿ20 ಪಂದ್ಯದ ಸೋಲಿನ ನೋವು ಮರೆಸಿದ ಬ್ಯೂಟಿ ಹಿಂದೆ ಬಿದ್ದ ನೆಟ್ಟಿಗರು!
ಫುಟ್ಬಾಲ್ ಆಟಗಾರರು, ಬೆಂಬಲ ಸಿಬ್ಬಂದಿ, ಕ್ಲಬ್ ಮತ್ತು ಲೀಗ್ ನಿರ್ವಹಣೆ ಮತ್ತು ಪ್ರಸಾರ ಸಿಬ್ಬಂದಿ ಸೇರಿದಂತೆ ಸುಮಾರು 1600 ಜನರನ್ನು 6 ತಿಂಗಳ ಅವಧಿಯಲ್ಲಿ ಕಟ್ಟುನಿಟ್ಟಾದ ಬಯೋ ಬಬಲ್ನಲ್ಲಿ ಇರಿಸಲಾಗಿದೆ. ಇದರ ಜತೆಗೆ ಲೀಗ್ನಲ್ಲಿ 70,000 ಆರ್‌ಟಿಪಿಸಿಆರ್ ಪರೀಕ್ಷೆಗಳು ನಡೆಸಲಾಗಿದೆ. 2020ರ ನವೆಂಬರ್ 20 ರಂದು ಪ್ರಾರಂಭವಾದ ಐಎಸ್ಎಲ್ ಸೀಸನ್ 7, 11 ಕ್ಲಬ್ಗಳೊಂದಿಗೆ ನಾಲ್ಕು ತಿಂಗಳು ನಿರಂತರವಾಗಿ ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ ಎಂದರು.
https://twitter.com/VVani4U/status/1370935052293443584?s=20
ಸಂಪೂರ್ಣ ಸೀಸನ್ ಅನ್ನು ಕಟ್ಟುನಿಟ್ಟಾದ ಬಯೋ ಬಬಲ್ ಸುರಕ್ಷತಾ ಪ್ರೋಟೋಕಾಲ್‌ಗಳ ಅಡಿಯಲ್ಲಿ ಗೋವಾದ ಮೂರು ಕ್ರೀಡಾಂಗಣಗಳಲ್ಲಿ ಮುಚ್ಚಿದ ಬಾಗಿಲುಗಳ ಹಿಂದೆ ಐಎಸ್ಎಲ್ ನಡೆಯಿತು.
ರಿಲಯನ್ಸ್ ಗುಂಪಿನ ಅಂಗಸಂಸ್ಥೆಯಾದ ಎಫ್‌ಎಸ್‌ಡಿಎಲ್ ಐಎಸ್‌ಎಲ್ ಅನ್ನು ನಿರ್ವಹಿಸುತ್ತದೆ ಮತ್ತು ನಡೆಸುತ್ತದೆ. (ಏಜೆನ್ಸೀಸ್)