More

    ಪಾಕಿಸ್ತಾನಕ್ಕೆ ಸೇನೆಯ ಮಾಹಿತಿ ನೀಡುತ್ತಿದ್ದ ಐಎಸ್​ಐ ಏಜೆಂಟ್​ ಬಂಧನ

    ಪೋಖ್ರನ್​ : ಭಾರತದ ರಕ್ಷಣಾ ಸಂಸ್ಥೆಗಳ ಮೇಲೆ ಗೂಢಚಾರಿಕೆ ನಡೆಸುತ್ತಾ ಪಾಕಿಸ್ತಾನಕ್ಕೆ ಮತ್ತು ಐಎಸ್​ಐಗೆ ಮಹತ್ವದ ಮಾಹಿತಿ ಮತ್ತು ದಾಖಲಾತಿಗಳನ್ನು ಒದಗಿಸುತ್ತಿದ್ದ ಐಎಸ್​ಐ ಏಜೆಂಟ್​ ಒಬ್ಬನನ್ನು ರಾಜಸ್ತಾನದ ಪೋಖ್ರನ್​ನಲ್ಲಿ ಬಂಧಿಸಲಾಗಿದೆ. ಹಬೀಬುರ್ ರೆಹಮಾನ್ ಎಂಬ ಈ ಏಜೆಂಟು ನೀಡಿದ ಮಾಹಿತಿಯ ಮೇರೆಗೆ ಸೇನಾ ಸಿಬ್ಬಂದಿಯೊಬ್ಬರು ಅಪರಾಧದಲ್ಲಿ ಭಾಗಿಯಾಗಿರುವ ಅನುಮಾನ ಎದ್ದಿದೆ ಎನ್ನಲಾಗಿದೆ.

    ಪಾಕಿಸ್ತಾನದ ಐಎಸ್​ಐಗಾಗಿ ಕೆಲಸ ಮಾಡುತ್ತಿದ್ದು, ಆ ದೇಶಕ್ಕೂ ಭೇಟಿ ನೀಡಿದ್ದಾನೆ ಎನ್ನಲಾದ ರೆಹಮಾನ್​ನನ್ನು, ದೆಹಲಿ ಅಪರಾಧ ವಿಭಾಗದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆತನ ಮೇಲೆ ಅಫಿಶಿಯಲ್ ಸೀಕ್ರೆಟ್ಸ್ ಆ್ಯಕ್ಟ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಅಕ್ರಮ ವಿದೇಶಿ ಪ್ರಜೆಗಳಿಗೆ ಸಿಸಿಬಿ ಶಾಕ್! ನಗರದಲ್ಲಿ ಭಾರೀ ರೇಯ್ಡ್​!

    ರೆಹಮಾನ್​ ಬಳಿಯಿಂದ ಸೇನಾ ಪ್ರದೇಶಗಳ ವಿಶ್ವಸನೀಯ ದಾಖಲಾತಿಗಳು ಮತ್ತು ನಕ್ಷೆಗಳು ಲಭ್ಯವಾಗಿವೆ. ಇವುಗಳನ್ನು ಆಗ್ರಾದಲ್ಲಿ ಪೋಸ್ಟಿಂಗ್ ಇರುವ ಸೇನಾ ಸಿಬ್ಬಂದಿ ಪರಂಜೀತ್​ ಕೌರ್ ಎಂಬುವರು ತನಗೆ ನೀಡಿದರು ಎಂದು ಆತ ಹೇಳಿದ್ದಾನೆ ಎನ್ನಲಾಗಿದೆ. ಪ್ರಸ್ತುತ, ಸೇನಾ ಅಧಿಕಾರಿಗಳು ಕೌರ್​ ಅವರನ್ನು ವಿಚಾರಣೆ ಮಾಡುತ್ತಿದ್ದು, ಸದ್ಯದಲ್ಲೇ ಮುಂದಿನ ತನಿಖೆಗಾಗಿ ದೆಹಲಿ ಪೊಲೀಸರಿಗೆ ಒಪ್ಪಿಸಲಾಗುವುದು ಎನ್ನಲಾಗಿದೆ.

    ಕಳೆದ ಕೆಲವು ವರ್ಷಗಳಿಂದ ಪೋಖ್ರನ್​ ಆರ್ಮಿ ಬೇಸ್​ ಕ್ಯಾಂಪಿಗೆ ತರಕಾರಿಗಳನ್ನು ಸರಬರಾಜು ಮಾಡುತ್ತಿದ್ದ ರೆಹಮಾನ್​, ಈ ಸೇನಾ ದಾಖಲಾತಿಗಳನ್ನು ಕಮಲ್​ ಎಂಬುವವನಿಗೆ ಕೊಡುವವನಿದ್ದ. ಈ ನಿಟ್ಟಿನಲ್ಲಿ ದೊಡ್ಡ ರಾಕೆಟ್​ ಇರುವ ಶಂಕೆಯಿದ್ದು, ಇತರ ಕೆಲವು ಜನರನ್ನೂ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)

    ಡಿಕೆಶಿ ಮುಂದೆಯೇ ‘ಮುಂದಿನ ಸಿಎಂ ಸಿದ್ದರಾಮಯ್ಯ’ ಎಂಬ ಕೂಗು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts