More

    ಈಶ ಫೌಂಡೇಶನ್​ನ “ಕಾವೇರಿ ಕೂಗು” ಯೋಜನೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್​

    ಬೆಂಗಳೂರು: ಈಶ ಫೌಂಡೇಶನ್​ನ “ಕಾವೇರಿ ಕೂಗು” ಯೋಜನೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್ ಅನ್ನು ಹೈಕೋರ್ಟ್​ ವಜಾಗೊಳಿಸಿದೆ.

    ಅರಣ್ಯೀಕರಣದ ಉದ್ದೇಶ ಹೊಂದಿರುವ “ಕಾವೇರಿ ಕೂಗು” ಒಂದು ಶ್ರೇಷ್ಠ ಯೋಜನೆಯಾಗಿದೆ. ಮೇಲಾಗಿ ಸರ್ಕಾರಿ ಜಾದಗಲ್ಲಿ ಸಸಿಗಳನ್ನು ನೆಡುತ್ತಿಲ್ಲ.‌ ಇದರಿಂದ, ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವ ಅಗತ್ಯ ಕಂಡು ಬರುತ್ತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

    ಅರಣ್ಯ ನಾಶದಿಂದ ಉಂಟಾಗುತ್ತಿರುವ ವಿಪತ್ತುಗಳಿಗೆ ಅರಣ್ಯ ಬೆಳೆಸುವುದೇ ಪರಿಹಾರವಾಗಿದೆ. ಅರಣ್ಯೀಕರಣದ ಯೋಜನೆ ಕೈಗೊಂಡಿರುವ ಇಶಾ ಔಟ್‌ರೀಚ್ ಕ್ರಮ ಶ್ಲಾಘನೀಯ. ಯೋಜನೆ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ದಂಡ ವಿಧಿಸಬಹುದಾಗಿದೆ. ಆದರೆ, ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ ನ್ಯಾಯಾಲಯ ಸ್ವಯಂ ಪ್ರೇರಿತ ಪಿಐಎಲ್ ಆಗಿ ಪರಿವರ್ತಿಸಿಕೊಂಡಿರುವ ಹಿನ್ನೆಲೆಯಲ್ಲಿ ದಂಡ ವಿಧಿಸುವ ನಿರ್ಧಾರ ಕೈಬಿಡಲಾಗುತ್ತಿದೆ ಎಂದು ಪೀಠ ಹೇಳಿತು.

    ಆರೋಗ್ಯ ಕಣಜ ಈ ಸಿರಿಧಾನ್ಯ! ಬಿಪಿ, ಷುಗರ್ ನಿಯಂತ್ರಣಕ್ಕೆ ಸಿರಿಧಾನ್ಯಗಳೆಷ್ಟು ಸಹಕಾರಿ?

    ನಮ್ಮ ದೇಹದಲ್ಲಿ ರಕ್ತದ ಕೊನೇ ಹನಿ ಇರುವವರೆಗೂ ತಾಲಿಬಾನ್​ ವಿರುದ್ಧ ಹೋರಾಡ್ತೇವೆ: ಅಹ್ಮದ್​ ಮಸೂದ್​

    ಮತ್ತೊಂದು ಅವಿಸ್ಮರಣೀಯ ದಿನ; ಲೀಲಾವತಿ ಮನೆಯಲ್ಲಿ ನಟಿಯರ ಸಮಾಗಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts