More

    ಫೋಟೋ ಮೂಲಕ ಚೀನಾ ಅಧ್ಯಕ್ಷರಿಗೆ ಅವಮಾನ; ಅಂಥಾದ್ದೇನಿದೆ ಕಂಡು ಹಿಡಿಯಬಲ್ಲಿರಾ..?

    ನವದೆಹಲಿ: ಅಮೆರಿಕದ ಗೃಹ ಕಾರ್ಯದರ್ಶಿ ಮೈಕ್​ ಪಾಂಪಿಯೋ ತಮ್ಮ ಖಾಸಗಿ ಟ್ವೀಟರ್​ ಖಾತೆಯಲ್ಲಿ ಮೇಲಿನ ಫೋಟೋ ಶೇರ್​ ಮಾಡಿದ್ದಾರೆ.

    ಮನೆಯ ನೆಚ್ಚಿನ ಶ್ವಾನ ಮರ್ಸರ್​ ಆಟಿಕೆಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಅವುಗಳನ್ನೆಲ್ಲ ಕಚ್ಚಿ ಹಾಳು ಮಾಡುತ್ತಿದೆ. ನಾಯಿಯ ಚೇಷ್ಟೆಯನ್ನು ಫೋಟೋದಲ್ಲಿ ಸೆರೆ ಹಿಡಿದಿದ್ದಾರೆ ಎಂಬುದಷ್ಟೇ ಇದರ ಅರ್ಥವಲ್ಲ. ಚೀನಾ ಸರ್ಕಾರಕ್ಕೊಂದು ಸಂದೇಶವೂ ಇದರಲ್ಲಿದೆ.

    ಇದನ್ನೂ ಓದಿ; ಕರೊನಾ ಲಸಿಕೆ ಸಂಶೋಧನೆಯಲ್ಲಿ ರಷ್ಯಾ ಮುಂಚೂಣಿಗೆ ಬಂದಿದ್ದಕ್ಕೆ ಇದೇ ಕಾರಣವೇ?

    ಚಿತ್ರದಲ್ಲಿ ಗೂಡಾರ್ಥವೂ ಅಡಗಿದೆ. ಇದು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ಗೆ ಮಾಡಿದ ಅವಮಾನ ಎಂದು ನೆಟ್ಟಿಗರು ಪಾಂಪಿಯೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಳ್ಳುಗಳ ರಾಜ ಪಾಂಪಿಯೋ ಎಂದು ಜರಿದಿದ್ದಾರೆ.

    ಇಷ್ಟಕ್ಕೂ ಚೀನಾ ಅಧ್ಯಕ್ಷರಿಗೆ ಅವಮಾನ ಆಗುವಂಥಾದ್ದು ಈ ಫೋಟೋದಲ್ಲಿ ಏನಿದೆ ಎನ್ನುತ್ತೀರಾ…
    ನಾಯಿ ಕಚ್ಚಿ ಬಿಸಾಕಿರುವ ಆಟಿಕೆಗಳಲ್ಲಿ ‘ವಿನ್ನಿ ದಿ ಫೂ’ ಎಂಬ ಕಾರ್ಟೂನ್​ ಪಾತ್ರದ ಆಟಿಕೆಯೂ ಇದೆ. ಚೀನಾ ಅಧ್ಯಕ್ಷರಿಗೆ ಅಮೆರಿಕದಲ್ಲಿ ಇದೇ ಹೆಸರಿನಿಂದ ಲೇವಡಿ ಮಾಡಲಾಗುತ್ತದೆ. ಅದೇ ಆಟಿಕೆ ಪಾಂಪಿಯೋ ನಾಯಿ ಮುಂದೆ ಬಿದ್ದಿದೆ.

    ಇದನ್ನೂ ಓದಿ; ಎನ್​ಕೌಂಟರ್​ಗೆ ಬಲಿಯಾದ ವಿಕಾಸ್​ ದುಬೆ ಸಹಚರನ ವಯಸ್ಸು ಕೇವಲ ಹದಿನಾರು; ಪಿಯುಸಿನಲ್ಲಿ ಫಸ್ಟ್ ಕ್ಲಾಸ್…!

    ಇದನ್ನು ಅರ್ಥೈಸಿಕೊಂಡೇ ಚೀನಿಯರು ಪಾಂಪಿಯೋ ವಿರುದ್ಧ ಸಿಡಿದೆದಿದ್ದಾರೆ. ಹಲವು ಮೀಮ್​ಗಳ ಮೂಲಕ ಅವರನ್ನು ವ್ಯಂಗ್ಯ ಮಾಡುತ್ತಿದ್ದಾರೆ. ಈ ಹಿಂದೆಯೂ ಚೀನಾ ಅಧ್ಯಕ್ಷರನ್ನು ವಿವಿಧ ಹೆಸರುಗಳಿಂದ ಲೇವಡಿ ಮಾಡಲಾಗುತ್ತಿತ್ತು.

    ಫೋಟೋ ಮೂಲಕ ಚೀನಾ ಅಧ್ಯಕ್ಷರಿಗೆ ಅವಮಾನ; ಅಂಥಾದ್ದೇನಿದೆ ಕಂಡು ಹಿಡಿಯಬಲ್ಲಿರಾ..?

    ವರ್ಷಾನುಗಟ್ಟಲೇ ಸಿಗಲಿದೆ ಕೋವಿಡ್​ನಿಂದ ರಕ್ಷಣೆ; ಆಕ್ಸ್​ಫರ್ಡ್​ ಲಸಿಕೆ ಹುಟ್ಟಿಸಿದೆ ಹೊಸ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts