More

    ಎನ್​ಕೌಂಟರ್​ಗೆ ಬಲಿಯಾದ ವಿಕಾಸ್​ ದುಬೆ ಸಹಚರನ ವಯಸ್ಸು ಕೇವಲ ಹದಿನಾರು; ಪಿಯುಸಿನಲ್ಲಿ ಫಸ್ಟ್ ಕ್ಲಾಸ್…!

    ಕಾನ್ಪುರ: ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಗುಂಪಿನಲ್ಲಿದ್ದ ಆತನ ಸಹಚರ ಪ್ರಭಾತ್​ ಮಿಶ್ರಾ ಪೊಲೀಸರ ಗುಂಡಿಗೆ ಬಲಿಯಾಗುವ 10 ದಿನಗಳ ಹಿಂದಷ್ಟೇ 12ನೇ ತರಗತಿ ಫಲಿತಾಂಶ ಪಡೆದಿದ್ದ. ಶೇ.61 ಅಂಕಗಳೊಂದಿಗೆ ಪಾಸಾಗಿದ್ದ ಎಂಬುದು ಬಯಲಾಗಿದೆ.

    ಇನ್ನೂ ಅಚ್ಚರಿಯ ಸಂಗತಿ ಎಂದರೆ, ದಾಖಲೆಗಳ ಪ್ರಕಾರ ಆತನ ವಯಸ್ಸು ಕೇವಲ 16. ಆತನ ಎಸ್​ಎಸ್​ಎಲ್​ಸಿ ಅಂಕಪಟ್ಟಿ ಹಾಗೂ ಆಧಾರ್​ ದಾಖಲೆಗಳ ಪ್ರಕಾರ ಆತನ ಜನ್ಮ ದಿನಾಂಕ 2004ರ ಮೇ 17.

    ಇದನ್ನೂ ಓದಿ; ಆತ ಬ್ರಾಹ್ಮಣನಾಗಿದ್ದರಿಂದಲೇ ಇಷ್ಟೆಲ್ಲ ಚರ್ಚೆ; ವಿಕಾಸ್​ ದುಬೆ ಎನ್​ಕೌಂಟರ್​ಗೆ ಕಾಂಗ್ರೆಸ್​ ಹೊಸ ವ್ಯಾಖ್ಯಾನ 

    ಆದರೆ, ಕಾನ್ಪುರ್​ ಪೊಲೀಸರಿಗೆ ಆತನ ವಯಸ್ಸಿನ ಬಗ್ಗೆ ಯಾವುದೇ ಮಾಹಿತಿ ಇಲ್ಲವಂತೆ..! ಪ್ರಭಾತ್​ನನ್ನು ಪೊಲೀಸರು ಹರಿಯಾಣದ ಫರೀದಾಬಾದ್​ನಲ್ಲಿ ಬಂಧಿಸಿ ಕಾನ್ಪುರಕ್ಕೆ ಕರೆ ತರುತ್ತಿದ್ದರು. ಎಸ್​ಐ ಬಳಿಯಿದ್ದ ಪಿಸ್ತೂಲ್​ ಕಸಿದ ಪ್ರಭಾತ್​ ಪರಾರಿಯಾಗಲು ಯತ್ನಿಸಿದ್ದ. ಆಗ ಪೊಲೀಸರು ನಡೆಸಿದ ಎನ್​ಕೌಂಟರ್​ಗೆ ಬಲಿಯಾಗಿದ್ದ.

    ಪ್ರಭಾತ್​ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಎಸ್​ಎಸ್​ಎಲ್​ಸಿಯಲ್ಲಿ ಶೇ.78 ಅಂಕ ಪಡೆದಿದ್ದ ಎಂದು ಆಕೆಯ ತಾಯಿ ಗೀತಾ ಅಂಕಪಟ್ಟಿಯನ್ನು ನೀಡುತ್ತಾಳೆ. ಅಂದು ಪೊಲೀಸರ ಮೇಲೆ ಭಿಕ್ರು ಗ್ರಾಮದ ನನ್ನ ಮನೆ ಮೇಲಿನಿಂದ ಗುಂಡಿನ ದಾಳಿ ನಡೆಸಲಾಗಿದೆ ಎನ್ನುವುದು ಪೊಲೀಸರ ವಾದ. ಆದರೆ, ಅದು ಸುಳ್ಳು. ಯಾರನ್ನೂ ನಾನು ಮನೆಯೊಳಕ್ಕೆ ಬಿಟ್ಟುಕೊಂಡಿಲ್ಲ ಎಂದು ಗೀತಾ ಹೇಳುತ್ತಾಳೆ.

    ಇದನ್ನೂ ಓದಿ; ಎಂಟು ಪೊಲೀಸರನ್ನು ಕೊಂದ ವಿಕಾಸ್​ ದುಬೆಯದ್ದು ಮನೆಯಲ್ಲ, ಮದ್ದುಗುಂಡಿನ ಕಾರ್ಖಾನೆ; ಇಡೀ ಪ್ರದೇಶ ಸ್ಫೋಟಕ್ಕೆ ಸಂಚು 

    ನನ್ನ ಮಗನನ್ನು ಕೊಂದಿದ್ದಾರೆ. ಈಗ ನನ್ನ ಗಂಡ ಕೂಡ ಬದುಕುಳಿಯುತ್ತಾನೋ ಇಲ್ಲವೋ ಗೊತ್ತಿಲ್ಲ. ಪೊಲೀಸರ ಹತ್ಯೆ ನಡೆದ ಜುಲೈ 3ರಿಂದ ಆತ ಮನೆಗೆ ಬಂದಿಲ್ಲ ಎಂದು ಗೀತಾ ಹೇಳುತ್ತಾಳೆ. ಪ್ರಭಾತ್​ ವಯಸ್ಸು ಬಹಿರಂಗವಾಗುವ ಮೂಲಕ ವಿಕಾಸ್​ ದುಬೆ ಅಪ್ರಾಪ್ತರನ್ನೇ ತನ್ನ ಕುಕೃತ್ಯ ಹಾಗೂ ಅಪರಾಧಿಕ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದ್ದ ಎಂಬುದು ಸಾಬೀತಾಗಿದೆ ಎಂದು ಪೊಲೀಸರು ಹೇಳುತ್ತಾರೆ.

    ಪೊಲೀಸರೇ ನನ್ನ ಎನ್​ಕೌಂಟರ್​ ಮಾಡ್ತಾರೆ…! ರಕ್ಷಣೆಗೆ ಸುಪ್ರೀಂಕೋರ್ಟ್​ ಮೊರೆ ಹೋದ ಸಬ್​ ಇನ್​ಸ್ಪೆಕ್ಟರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts