More

  ಬಿಯರ್​ ಕುಡಿದ್ರೆ ಕಿಡ್ನಿ ಸ್ಟೋನ್​ ನಿವಾರಣೆಯಾಗುತ್ತಾ? ಆರೋಗ್ಯ ತಜ್ಞರು ಹೇಳುವುದೇನು? ಇಲ್ಲಿದೆ ಮಹತ್ವದ ಮಾಹಿತಿ…

  ಮೂತ್ರಪಿಂಡದ ಕಲ್ಲುಗಳು ಅಥವಾ ಕಿಡ್ನಿ ಸ್ಟೋನ್ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುತ್ತಿರುವ ಸಮಸ್ಯೆಯಾಗಿದೆ. ಕೆಲವರು ಇದರಿಂದ ತೀವ್ರ ನೋವಿನಿಂದ ಬಳಲುತ್ತಿದ್ದಾರೆ. ತಕ್ಷಣ ಪರಿಹಾರಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ನೋವು ನಿವಾರಕಗಳನ್ನೂ ಆಶ್ರಯಿಸಿದ್ದಾರೆ. ಆದರೆ, ಈ ನೋವು ನಿವಾರಕಗಳ ಪರಿಹಾರ ತಾತ್ಕಾಲಿಕ ಮತ್ತು ಕೆಲವೇ ಸಮಯದಲ್ಲಿ ಮತ್ತೆ ನೋವು ಕಾಣಿಕೊಳ್ಳುತ್ತದೆ. ಹೀಗಾಗಿ ಕೆಲವರು ನೋವು ಕಡಿಮೆ ಮಾಡಿಕೊಳ್ಳಲು ಆಲ್ಕೋಹಾಲ್ ಅಥವಾ ಬಿಯರ್ ಸಹ ಸೇವಿಸುತ್ತಾರೆ. ಕೆಲವರು ಬಿಯರ್​ ಒಳ್ಳೆಯದು ಎಂದು ನಂಬಿದ್ದಾರೆ. ಹಾಗಾದರೆ, ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳು ಕಡಿಮೆಯಾಗುತ್ತವೆಯೇ? ಇದರ ಪರಿಣಾಮಗಳೇನು ಎಂಬುದನ್ನು ನಾವೀಗ ತಿಳಿಯೋಣ.

  ಪ್ರತಿದಿನ ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಸಹಾಯವಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ, ಪ್ರತಿದಿನ ಕುಡಿದರೆ ಕುಡಿತದ ಚಟಕ್ಕೆ ಬೀಳುವ ಸಂಭವವಿದೆ. ಅಲ್ಲದೆ, ಕಿಡ್ನಿ ಹಾನಿ, ಕಿಡ್ನಿ ವೈಫಲ್ಯ, ರಕ್ತದೊತ್ತಡ ಮತ್ತು ಕ್ಯಾನ್ಸರ್​ನಂತಹ ದೀರ್ಘಕಾಲದ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ಹಾಗಾಗಿ ಕಿಡ್ನಿ ಸ್ಟೋನ್​ ಸಮಸ್ಯೆಯಿಂದ ಬಳಲುತ್ತಿರುವವರು ಬಿಯರ್ ಕುಡಿಯಬಾರದು ಎನ್ನುತ್ತಾರೆ ಆರೋಗ್ಯ ತಜ್ಞರು.

  ಇದನ್ನೂ ಓದಿ: ಹಿಂದೆಂದೂ ಕೇಳಿರದ ಘಟನೆಗೆ ಮೆಕ್ಸಿಕೋ ಕಾಂಗ್ರೆಸ್​ ಸಾಕ್ಷಿ: ಏಲಿಯನ್​ ಶವಗಳ ಪ್ರದರ್ಶನ, ವಿಡಿಯೋ ವೈರಲ್

  ಕಿಡ್ನಿ ಸ್ಟೋನ್​ ನೋವು ತಾಳಲಾರದವರು ಬಿಯರ್ ಕುಡಿಯುತ್ತಾರೆ. ಈ ರೀತಿ ಮಾಡುವುದರಿಂದ ಜೀವಕ್ಕೆ ಅಪಾಯವಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದಲ್ಲದೆ, ಕಿಡ್ನಿ ಸ್ಟೋನ್​ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಆದರೆ ಕೆಲವರಲ್ಲಿ ಬಿಯರ್ ಕುಡಿಯುವುದರಿಂದ ಕಿಡ್ನಿ ಕಲ್ಲುಗಳು ನಿವಾರಣೆಯಾಗುವ ಸಾಧ್ಯತೆಗಳು ಇರುತ್ತವೆ. ಆದರೆ ಈ ಫಲಿತಾಂಶ ಎಲ್ಲರಿಗೂ ಅಲ್ಲ ಎಂದು ತಜ್ಞರು ಹೇಳುತ್ತಾರೆ. ಕಿಡ್ನಿ ಕಲ್ಲುಗಳು ಹೊರಬರುತ್ತವೆ ಎಂಬ ಕಲ್ಪನೆಯಿಂದ ಕೆಲವರು ಮದ್ಯ ಸೇವನೆ ಮಾಡುತ್ತಿದ್ದಾರೆ. ಹೀಗೆ ಕುಡಿಯುವುದು ದೇಹಕ್ಕೆ ತುಂಬಾ ಹಾನಿಕಾರಕ ಎನ್ನುತ್ತಾರೆ ತಜ್ಞರು.

  ಅಂದಹಾಗೆ ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದೊಳಗೆ ರೂಪುಗೊಳ್ಳುವ ಖನಿಜಗಳು ಮತ್ತು ಲವಣಗಳಿಂದ ಮಾಡಿದ ಗಟ್ಟಿಯಾದ ನಿಕ್ಷೇಪಗಳಾಗಿವೆ. ಮೂತ್ರನಾಳದ ಮೂಲಕ ಹಾದುಹೋಗುವಾಗ ಅವು ನೋವುಂಟುಮಾಡುತ್ತವೆ. ಆದರೆ ಸಾಮಾನ್ಯವಾಗಿ ಶಾಶ್ವತ ಹಾನಿಯನ್ನು ಉಂಟುಮಾಡುವುದಿಲ್ಲ. ಕಿಡ್ನಿ ಸ್ಟೋನ್​ನ ಸಾಮಾನ್ಯ ಲಕ್ಷಣವೆಂದರೆ ಹೊಟ್ಟೆಯ ಭಾಗದಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುವುದು. ಕೆಲವೊಮ್ಮೆ ವಾಕರಿಕೆಯೂ ಆಗುತ್ತದೆ. ಇದರ ಚಿಕಿತ್ಸಾ ವಿಧಾನ ಏನೆಂದರೆ, ನೋವು ನಿವಾರಕಗಳನ್ನು ಬಳಸುವುದು ಮತ್ತು ಕಲ್ಲು ಹಾದುಹೋಗಲು ನೆರವಾಗುವಷ್ಟು ನೀರು ಕುಡಿಯುವುದು. ಆದರೆ, ದೊಡ್ಡ ಕಲ್ಲುಗಳನ್ನು ತೆಗೆದುಹಾಕಲು ಅಥವಾ ಒಡೆಯಲು ವೈದ್ಯಕೀಯ ವಿಧಾನಗಳನ್ನು ಅನುಸರಿಸಬೇಕಾಗಿದೆ. (ಏಜೆನ್ಸೀಸ್​)

  ಅನ್ನಭಾಗ್ಯ ಗ್ಯಾರಂಟಿ ಫಲಾನುಭವಿಗಳಿಗೆ ಸರ್ವರ್ ಅಡ್ಡಿ!; ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸ್ವೀಕಾರ ಕೇಂದ್ರದಲ್ಲಿ ಮಾರುದ್ದ ಸಾಲು

  ದೇವಾಲಯಗಳ ಸುತ್ತ ತಂಬಾಕು ನಿಷೇಧ: ಗುಟ್ಖಾ, ಸಿಗರೇಟ್, ಪಾನ್ ಮಸಾಲಾ ಮಾರಾಟ ಮಾಡುವಂತಿಲ್ಲ; ರಾಜ್ಯ ಸರ್ಕಾರ ಚಿಂತನೆ

  ಕೇಂದ್ರದ ಮಧ್ಯಪ್ರವೇಶ ಅಗತ್ಯ: ಕರ್ನಾಟಕದ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts