More

    ವಾರಾಂತ್ಯದೊಳಗೆ ಐಪಿಎಲ್ ವೇಳಾಪಟ್ಟಿ ಪ್ರಕಟ ನಿರೀಕ್ಷೆ

    ನವದೆಹಲಿ/ದುಬೈ: ಐಪಿಎಲ್ 13ನೇ ಆವೃತ್ತಿಗೆ ಇನ್ನು 4 ವಾರಗಳಷ್ಟೇ ಬಾಕಿ ಉಳಿದಿದ್ದು, ಎಲ್ಲ ತಂಡಗಳು ಈಗಾಗಲೆ ಯುಎಇ ತಲುಪಿವೆ. ಸೆಪ್ಟೆಂಬರ್ 19ರಂದು ಆರಂಭಗೊಳ್ಳಲಿರುವ ಟೂರ್ನಿಯ ವೇಳಾಪಟ್ಟಿಯನ್ನು ಮಾತ್ರ ಬಿಸಿಸಿಐ ಇನ್ನೂ ಬಿಡುಗಡೆ ಮಾಡಿಲ್ಲ. ಬಯೋ-ಬಬಲ್ ಕಾಪಾಡಿಕೊಳ್ಳುವುದನ್ನು ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುತ್ತಿದ್ದು, ವಾರಾಂತ್ಯದೊಳಗೆ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

    ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಈಗಾಗಲೆ ಯುಎಇ ತಲುಪಿದ್ದು, ತಮ್ಮ ತಂಡದ ಜತೆಗೂಡಿ ಇವೆಂಟ್ ಮ್ಯಾನೇಜರ್ ಐಎಂಜಿ ಜತೆ ಚರ್ಚಿಸುತ್ತಿದ್ದಾರೆ. ಬಳಿಕ ಸ್ಥಳೀಯ ಅಧಿಕಾರಿಗಳ ಜತೆಗೆ ಚರ್ಚಿ ವೇಳಾಪಟ್ಟಿ ಅಂತಿಮಗೊಳಿಸಲಿದ್ದಾರೆ. ವೇಳಾಪಟ್ಟಿ ರೂಪಿಸುವ ಪ್ರಕ್ರಿಯೆ ಸ್ವಲ್ಪ ತಡವಾಗಿದ್ದರೂ, ಈ ವಾರದ ಅಂತ್ಯದೊಳಗೆ ಪ್ರಕಟ ಮಾಡಲಾಗುವುದು ಎಂದು ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

    53 ದಿನಗಳ ಅಂತರದಲ್ಲಿ 3 ತಾಣಗಳಲ್ಲಿ ನಡೆಯಲಿರುವ 8 ತಂಡಗಳ ಟೂರ್ನಿಯಲ್ಲಿ ಕರೊನಾ ವೈರಸ್ ಭೀತಿಯಿಂದಾಗಿ ಬಯೋ-ಬಬಲ್ ಕಾಪಾಡಿಕೊಳ್ಳುವುದು ಪ್ರಮುಖ ಸವಾಲಾಗಿದೆ. ವೇಳಾಪಟ್ಟಿ ಅಂತಿಮಗೊಂಡ ಬೆನ್ನಲ್ಲೇ ತಂಡಗಳು, ಪಂದ್ಯ ಅಧಿಕಾರಿಗಳು, ಟಿವಿ ಸಿಬ್ಬಂದಿ ಮತ್ತು ವೀಕ್ಷಕವಿವರಣೆಕಾರರು ತಮ್ಮ ಪ್ರಯಾಣ ಯೋಜನೆ ರೂಪಿಸಲಿದ್ದಾರೆ.

    ಇದನ್ನೂ ಓದಿ: ದಿನದ ಒಂದೇ ಹೊತ್ತು ಊಟ ಮಾಡುತ್ತಿದ್ದ ಖೋಖೋ ಆಟಗಾರ್ತಿಗೆ ಅರ್ಜುನ ಪ್ರಶಸ್ತಿ ಸಂಭ್ರಮ

    ಉದ್ಘಾಟನಾ ಪಂದ್ಯ ಬದಲಿಲ್ಲ
    ಈ ಮುನ್ನ ಮಾರ್ಚ್ 29ರಿಂದ ಮೇ 17ರವರೆಗೆ ನಿಗದಿಯಾಗಿದ್ದ ಐಪಿಎಲ್ ವೇಳಾಪಟ್ಟಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್‌ಅಪ್ ಚೆನ್ನೈ ಸೂಪರ್‌ಕಿಂಗ್ಸ್ ನಡುವೆ ಉದ್ಘಾಟನಾ ಪಂದ್ಯ ನಿಗದಿಯಾಗಿತ್ತು. ಹೊಸ ವೇಳಾಪಟ್ಟಿಯಲ್ಲೂ ಉದ್ಘಾಟನಾ ಪಂದ್ಯ ಅದೇ ಆಗಿರಲಿದೆ ಎನ್ನಲಾಗಿದೆ. ಧೋನಿ ನಿವೃತ್ತಿಯ ಬೆನ್ನಲ್ಲೇ ರೋಹಿತ್ ಶರ್ಮ, ಸೆ. 19ರಂದು ಟಾಸ್ ವೇಳೆ ಭೇಟಿಯಾಗೋಣ ಎಂದು ಟ್ವೀಟಿಸಿದ್ದು ಕೂಡ ಇದೇ ಸೂಚನೆ ರವಾನಿಸಿದೆ. ಆದರೆ ಪಂದ್ಯ ದುಬೈನಲ್ಲಿ ನಡೆಯುವುದೋ ಅಥವಾ ಅಬುಧಾಬಿಯಲ್ಲಿ ನಡೆಯುವುದೋ ಎಂಬುದು ತೀರ್ಮಾನವಾಗಬೇಕಾಗಿದೆ.

    ಸುನೀಲ್ ಶೆಟ್ಟಿ ಪುತ್ರಿ ಪೋಸ್ಟ್‌ಗೆ ಮತ್ತೆ ಕಮೆಂಟ್ ಹಾಕಿ ಸುದ್ದಿಯಾದ ಕ್ರಿಕೆಟಿಗ ಕೆಎಲ್ ರಾಹುಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts