More

    ‘ನೀವು ಈ ದೇಶಗಳ ಮಹಿಳಾ ಟೀಮ್​ ವಿರುದ್ಧ ಆಡುವುದಕ್ಕಷ್ಟೇ ಯೋಗ್ಯರು’; ಬಾಬರ್​ ಪಡೆಗೆ ತಪ್ಪಲಿಲ್ಲ ಅವಮಾನ

    ನ್ಯೂಯಾರ್ಕ್​: ಜೂನ್​ 09ರಂದು ಇಲ್ಲಿನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ 6 ರನ್​ಗಳ ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾಗೆ ಎಲ್ಲಿಲ್ಲದ ಮೆಚ್ಚುಗೆ, ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಅದರಲ್ಲೂ ಭಾರತ ಕೊಟ್ಟ 119 ರನ್​ಗಳ ಸಾಧಾರಣ ಗುರಿಯನ್ನು ತಲುಪುವಲ್ಲಿ ಮುಗ್ಗರಿಸಿದ ಪಾಕಿಸ್ತಾನ ತಂಡಕ್ಕೆ ಮತ್ತೊಮ್ಮೆ ಟೀಕೆಗಳು ವ್ಯಕ್ತವಾಗಿವೆ.

    ಇದನ್ನೂ ಓದಿ: ಅಂದು ದರ್ಶನ್ ಜತೆಗೆ ಪವಿತ್ರಾ ಗೌಡ ಕೂಡ ಇದ್ದರಂತೆ? ಬಯಲಾಯ್ತು ಸ್ಫೋಟಕ ಸಂಗತಿ!

    ಮೊದಲ ಪಂದ್ಯದಲ್ಲಿ ಯುಎಸ್​​ಎ ವಿರುದ್ಧ ಸೂಪರ್ ಓವರ್​ ಮ್ಯಾಚ್​ನಲ್ಲಿ ಸೋಲುಂಡ ಪಾಕಿಸ್ತಾನ ತಂಡಕ್ಕೆ ವ್ಯಾಪಕ ಟ್ರೋಲ್​ಗಳು ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಟೀಂ ಇಂಡಿಯಾದ ವಿರುದ್ಧವೂ ಹೀನಾಯವಾಗಿ ಸೋತ ಬಾಬರ್​ ಪಡೆಗೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಫ್ಯಾನ್ಸ್​ ಭಾರೀ ಆಕ್ರೋಶ ಹೊರಹಾಕಿದ್ದರು. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಪಾಕ್​ನ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್​, ವಿಶ್ವಕಪ್​ ತಂಡಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾರು ಬೇಡ ಎಂಬ ನಿರ್ಧಾರ ಕೈಗೊಳ್ಳುವಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ ಎಡವಿದೆ ಎಂದರು.

    “ಆಟಗಾರರ ನಡುವೆ ಮನಸ್ತಾಪ ತರುತ್ತಿರುವ ಕ್ಯಾಪ್ಟನ್ ಬಾಬರ್​ ಆಜಂರನ್ನು ಮೊದಲು ನಾಯಕತ್ವದಿಂದ ವಜಾಗೊಳಿಸಬೇಕು. ಇಂದಿನಿಂದ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ನ ಮಹಿಳಾ ಟೀಮ್​ಗಳ ವಿರುದ್ಧ ಆಡುವುದನ್ನು ಪ್ರಾರಂಭಿಸಲಿ. ಪುರುಷರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಆಟವಾಡಿದ್ದು ಸಾಕು. ಯಾವ ಹಂತದಿಂದ ಎಲ್ಲಿಗೆ ಬಂತು ನಿಂತಿದ್ದಾರೆ ಎಂಬುದನ್ನು ಒಮ್ಮೆ ಇವರು ತಿಳಿದುಕೊಳ್ಳುವುದು ಸೂಕ್ತ. ಕೆಲವರಂತು ಟಿ20 ವಿಶ್ವಕಪ್​ ತಂಡದಲ್ಲಿರಲು ಅನರ್ಹರು. ಆದರೂ ಸಹ ತಂಡದಲ್ಲಿದ್ದಾರೆ ಅನ್ನೋದು ಬೇಸರದ ಸಂಗತಿ” ಎಂದು ಹೇಳಿದ್ದಾರೆ.

    ಇದನ್ನೂ ಓದಿ: NEET-UG 2024 ಪರೀಕ್ಷೆ; ಪ್ರೆಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಉತ್ತರಿಸುವಂತೆ ಎನ್​​ಟಿಎಗೆ ಸುಪ್ರೀಂಕೋರ್ಟ್​​ ನೋಟಿಸ್​

    “ಇವರಾರು ಫಿಟ್ ಇಲ್ಲ ಮತ್ತು ಸರಿಯಾಗಿ ಫೀಲ್ಡಿಂಗ್ ಮಾಡಲು ಸಾಧ್ಯವಿಲ್ಲ. ಆದರೂ ಸಹ ಪಾಕಿಸ್ತಾನದ ರಾಷ್ಟ್ರೀಯ ತಂಡದ ಭಾಗವಾಗಿ ಮುಂದುವರಿಯುತ್ತಿದ್ದಾರೆ. ಇಂಥವರಿಗೆ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ ಅಧ್ಯಕ್ಷರು ಅವಕಾಶ ನೀಡಬಾರದು. ಆಯ್ಕೆ ಪ್ರಕ್ರಿಯೆಯಲ್ಲಿ ತನಗೆ ತಪ್ಪು ಸಲಹೆಗಳನ್ನು ನೀಡಿದ ವ್ಯಕ್ತಿಯ ಬಾಯಿಯನ್ನು ಅಂದೇ ಮುಚ್ಚಬೇಕಿತ್ತು” ಎಂದು ಕಮ್ರಾನ್ ಅಕ್ಮಲ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

    ನನ್ನ ಕರಿಯರ್​ ಇಲ್ಲಿಗೆ ಮುಗಿತು… ಪಾಕಿಸ್ತಾನ ವಿರುದ್ಧ ಗೆಲ್ಲುತ್ತಿದ್ದಂತೆ ಭಾವುಕರಾದ ಟೀಂ ಇಂಡಿಯಾದ ಸ್ಟಾರ್​ ಆಟಗಾರ

    ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೂ.08ರ ರಾತ್ರಿ ನಡೆದಿದ್ದೇನು? ವರದಿ ಹೇಳುವುದಿಷ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts