More

    NCAಯಿಂದ ಸಿಗದ ಗ್ರೀನ್​ ಸಿಗ್ನಲ್; ಐಪಿಎಲ್​ಗೆ ಕೆ.ಎಲ್. ರಾಹುಲ್​ ಡೌಟ್?

    ಬೆಂಗಳೂರು: ಮಾರ್ಚ್​ 22ರಂದು ಆರಂಭವಾಗಲಿರುವ 17ನೇ ಆವೃತ್ತಿಯ ಐಪಿಎಲ್​ ಟೂರ್ನಿಗೆ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ತಂಡಗಳು ಅಭ್ಯಾಸದಲ್ಲಿ ನಿರತವಾಗಿವೆ. ಇನ್ನೂ ಈ ಬಾರಿಯ ಐಪಿಎಲ್​ ಆಟಗಾರರ ಗಾಯದ ಸಮಸ್ಯೆಯಿಂದಲೇ ಹೆಚ್ಚು ಸದ್ದು ಮಾಡಿದ್ದು, ಅನುಭವಿ ಆಟಗಾರರ ಗೈರು ತಂಡಗಳಿಗೆ ದೊಡ್ಡ ಹಿನ್ನಡೆಯಾಗಬಹುದು ಎಂದು ಹೇಳಲಾಗಿದೆ.

    ಈಗಾಗಲೇ ಅಭ್ಯಾಸ್ ಆರಂಭಿಸಿರುವ ಲಖನೌ ಸೂಪರ್​​ಜೈಂಟ್ಸ್​ ತಂಡ ಕಠಿಣ ಅಬ್ಯಾಸ ನಡೆಸುತ್ತಿದ್ದು, ಬಹುತೇಕ ಆಟಗಾರರು ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ, ಅಭ್ಯಾಸ ಶಿಬಿರದಲ್ಲಿ ಲಖನೌ ಸೂಪರ್​ಜೈಂಟ್ಸ್​ ತಂಡದ ನಾಯಕ ಕೆ.ಎಲ್. ರಾಹುಲ್​ ಕಾಣಿಸಿಕೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಈವರೆಗೆ ಯಾವುದೇ ಸ್ಪಷ್ಟನೆ ದೊರೆತ್ತಿಲ್ಲ.

    ಇನ್ನು ಇದಕ್ಕೆ ಪೂರಕವೆಂಬಂತೆ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಟೆಸ್ಟ್​ ಸರಣಿ ವೇಳೆ ತೊಡೆಸಂಧು ನೋವಿಗೆ ತುತ್ತಾಗಿದ್ದ ರಾಹುಲ್ ಪುನಶ್ಚೇತನಕ್ಕಾಗಿ​ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (NCA) ಸೇರಿಕೊಂಢಿದ್ದರು. ಇದಕ್ಕೆ ಕಾರಣ ಫಿಟ್​ನೆಸ್​ ಟೆಸ್ಟ್​. ಅಂದರೆ ಐಪಿಎಲ್​ ಆಡುವ ಮುನ್ನ ಗಾಯಗೊಂಡಿರುವ ಟೀಮ್ ಇಂಡಿಯಾ ಆಟಗಾರರು ಎನ್​ಸಿಎ ಕಡೆಯಿಂದ ಫಿಟ್​ನೆಸ್ ಪ್ರಮಾಣಪತ್ರ ಪಡೆಯಬೇಕೆಂದು ಬಿಸಿಸಿಐ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಿದೆ.

    KL Rahul

    ಇದನ್ನೂ ಓದಿ: ಆರ್​ಸಿಬಿಗೆ ಬಂತು ಆನೆ ಬಲ; ಬದಲಿ ಆಟಗಾರನಾಗಿ ಮಾರಕ ವೇಗಿ ಎಂಟ್ರಿ

    ಈ ನಿಯಮದಂತೆ ಈಗಾಗಲೇ ರಿಷಭ್ ಪಂತ್ ಫಿಟ್​ನೆಸ್ ಸರ್ಟಿಫಿಕೇಟ್ ಪಡೆದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಕೆಎಲ್ ರಾಹುಲ್ ಅವರು ಇನ್ನೂ ಸಹ ಎನ್​ಸಿಎನಲ್ಲೇ ಉಳಿದಿದ್ದು, ಕಠಿಣ ತಾಲೀಮಿನಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇದೀಗ ಐಪಿಎಲ್​ ಆಡಬೇಕಿದ್ದರೆ ಕೆಎಲ್​ಆರ್​ ತಮ್ಮ ಫಿಟ್​ನೆಸ್ ಅನ್ನು ಸಾಬೀತುಪಡಿಸಬೇಕಿದೆ. ಹೀಗಾಗಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿರುವ ರಾಹುಲ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

    ಇನ್ನೆರಡು ದಿನಗಳಲ್ಲಿ ಕೆಎಲ್ ರಾಹುಲ್ ಫಿಟ್​ನೆಸ್ ಟೆಸ್ಟ್​ಗೆ ಒಳಗಾಗುವ ಸಾಧ್ಯತೆಯಿದ್ದು, ಈ ವೇಳೆ ಸಂಪೂರ್ಣ ಫಿಟ್​ ಆಗಿರುವುದು ಸಾಬೀತಾದರೆ ಮಾತ್ರ ಅವರಿಗೆ ಐಪಿಎಲ್​ ಆಡಲು ಗ್ರೀನ್ ಸಿಗ್ನಲ್ ಸಿಗಲಿದೆ. ಹೀಗಾಗಿ ಕೆಎಲ್ ರಾಹುಲ್ ಅವರ ಐಪಿಎಲ್ ಭವಿಷ್ಯ ಮುಂದಿನ ಫಿಟ್​ನೆಸ್ ಟೆಸ್ಟ್​ ಮೇಲೆ ನಿಂತಿದೆ ಎಂದು ಹೇಳಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts