More

    ಐಪಿಎಲ್​ 2024: ಮುಂಬೈ ಇಂಡಿಯನ್ಸ್​ ಸೇರಿಕೊಳ್ಳಲಿದ್ದಾರೆ ರಶೀದ್​ ಖಾನ್​! ಆಕಾಶ್​ ಅಂಬಾನಿಯಿಂದ ಡೀಲ್​ ಫಿಕ್ಸ್​?

    ಮುಂಬೈ: ಪ್ರಸಕ್ತ ಐಪಿಎಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡ ಹೀನಾಯ ಸೋಲನ್ನು ಅನುಭವಿಸಿದೆ. ಪಂದ್ಯ ಶೇ. 75ರಷ್ಟು ಮುಗಿಯುವವರೆಗೂ ಮುಂಬೈ ತಂಡ ಸುಲಭವಾಗಿ ಗೆಲ್ಲುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಗುಜರಾತ್​ ಟೈಟಾನ್ಸ್​ ಬಿಗಿಯಾಗಿ ಬೌಲಿಂಗ್ ಮಾಡಿದ್ದರಿಂದ ಮುಂಬೈ ತಂಡದ ಬ್ಯಾಟ್ಸ್​ಮನ್​ಗಳು ತರಗೆಲೆಗಳಂತೆ ಉದುರಿದರು. ಅಂತಿಮವಾಗಿ ಕೊನೆಯ ಓವರ್​ನಲ್ಲಿ 6 ರನ್‌ಗಳಿಂದ ಮುಂಬೈ ಸೋಲುಂಡಿತು.

    ಇನ್ನೂ ಈ ಪಂದ್ಯದ ನಂತರ ಕೆಲವು ಸ್ವಾರಸ್ಯಕರ ಘಟನೆಗಳು ಕ್ರೀಡಾಂಗಣದಲ್ಲಿ ನಡೆದವು. ಆ ಘಟನೆಗಳನ್ನು ಆಧರಿಸಿ ಸದ್ಯ ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ರಶೀದ್ ಖಾನ್ ಮುಂದಿನ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿದೆ.

    ಪ್ರತಿ ಪಂದ್ಯದ ನಂತರ ಎರಡೂ ತಂಡಗಳ ಆಟಗಾರರು ಪರಸ್ಪರ ಮಾತನಾಡಿಕೊಳ್ಳುವುದು ಸಹಜ. ಅಲ್ಲದೆ ಆಯಾ ತಂಡಗಳ ಮಾಲೀಕರು ಕೂಡ ಆಟಗಾರರೊಂದಿಗೆ ಸಂವಹನ ನಡೆಸುತ್ತಾರೆ. ಈ ಕ್ರಮದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಆಕಾಶ್ ಅಂಬಾನಿ, ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್ ಬೌಲರ್ ರಶೀದ್ ಖಾನ್ ಜೊತೆ ಬಹಳ ಹೊತ್ತು ಮಾತುಕತೆ ನಡೆಸಿದರು.

    ಒಂದು ರೀತಿಯಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಗೆಲುವಿಗೆ ರಶೀದ್ ಖಾನ್ ಕೂಡ ಪ್ರಮುಖ ಕಾರಣ. ಇದಲ್ಲದೆ, ರಶೀದ್ ಖಾನ್ ಯುಎಇ ಲೀಗ್‌ನಲ್ಲಿ ಎಂಐ ಎಮಿರೇಟ್ಸ್ ಪರ ಆಡುತ್ತಿದ್ದಾರೆ ಎಂದು ತಿಳಿದಿರುವ ಸಂಗತಿ. ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸರಿಯಾದ ಸ್ಪಿನ್ನರ್ ಇಲ್ಲ. ಹೀಗಾಗಿ ಆಕಾಶ್ ಅಂಬಾನಿ ಅವರು ರಶೀದ್ ಖಾನ್ ಅವರನ್ನು ಮುಂಬೈ ಇಂಡಿಯನ್ಸ್‌ಗೆ ಕರೆತರಲು ಬಯಸಿದ್ದಾರೆಂದು ತೋರುತ್ತದೆ ಮತ್ತು ಅದಕ್ಕಾಗಿಯೇ ರಶೀದ್​ ಖಾನ್​ ಜತೆ ಆಕಾಶ್​ ಅಂಬಾನಿ ದೀರ್ಘಕಾಲ ಮಾತನಾಡಿದ್ದಾರೆ ಎಂದು ಕ್ರೀಡಾವಲಯದಲ್ಲಿ ಚರ್ಚೆಯಾಗುತ್ತಿದೆ.

    ಮುಂದಿನ ವರ್ಷ ಐಪಿಎಲ್​-2025 ಸೀಸನ್‌ಗಾಗಿ ಮೆಗಾ ಹರಾಜು ನಡೆಯಲಿದೆ. ಆ ಹರಾಜಿನಲ್ಲಿ ಅಥವಾ ಹರಾಜಿಗೂ ಮುನ್ನ ರಶೀದ್ ಖಾನ್ ಅವರನ್ನು ಆಂತರಿಕ ನಗದು ವಹಿವಾಟಿನಲ್ಲಿ ಖರೀದಿ ಮಾಡಲು ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಚಿಂತನೆ ನಡೆಸುತ್ತಿದೆ ಎಂದು ಈ ಹಿಂದೆಯೇ ಸಾಕಷ್ಟು ವರದಿಗಳು ಬಂದಿದ್ದವು. ಇದೀಗ ಆಕಾಶ್ ಅಂಬಾನಿ ರಶೀದ್ ಖಾನ್ ಜೊತೆ ಸುದೀರ್ಘ ಮಾತುಕತೆ ನಡೆಸಿರುವುದರಿಂದ ಈ ಸುದ್ದಿಗೆ ಮತ್ತೆ ಜೀವ ಬಂದಿದೆ.

    ಇನ್ನೂ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದ ಹಾರ್ತಿಕ್ ಪಾಂಡ್ಯ ಅವರನ್ನು ಮತ್ತೆ ಮುಂಬೈ ಇಂಡಿಯನ್ಸ್‌ಗೆ ಕರೆತರಲಾಗಿದೆ. ಇದೀಗ ರಶೀದ್ ಖಾನ್ ಜೊತೆಗೂ ಅದೇ ಡೀಲ್ ಫಿಕ್ಸ್ ಆಗಿದೆ ಎಂದು ವರದಿಯಾಗಿದೆ. ಬಹುಶಃ ಮುಂದಿನ ಸೀಸನ್​ ಅಂದರೆ ಐಪಿಎಲ್​ 18ನೇ ಆವೃತ್ತಿಯಲ್ಲಿ ರಶೀದ್​ ಖಾನ್​ ಮುಂಬೈ ಪರ ಆಡಿದರೆ ಅಚ್ಚರಿಪಡಬೇಕಿಲ್ಲ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್​)

    ಆಕಾಶ್​ ಅಂಬಾನಿ ಮುಂದೆಯೇ ಹಾರ್ದಿಕ್​ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರೋಹಿತ್!​ ವಿಡಿಯೋ ವೈರಲ್​

    ಗಂಡನ ವಿರುದ್ಧ ದೂರು ನೀಡಲು ಬಂದ 23ರ ಯುವತಿಯನ್ನು ಬಲೆಗೆ ಬೀಳಿಸಿಕೊಂಡ 53 ವರ್ಷದ ಎಎಸ್​ಐ!

    ಮೊದಲ ಪಂದ್ಯದಲ್ಲೇ ಹಾರ್ದಿಕ್​ ಅಟ್ಟರ್​ಫ್ಲಾಪ್​! ಮುಂಬೈ ಸೋಲಿಗೆ ಪ್ರಮುಖ ಕಾರಣಗಳು ಹೀಗಿವೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts