More

    ಭಾರತಕ್ಕೆ ಪಾಕಿಸ್ತಾನಕ್ಕಿಂತಲೂ ದೊಡ್ಡ ಗಡಿ ತಂಟೆಕೋರ ಚೀನಾ….!

    ನವದೆಹಲಿ: ಶತ್ರು ರಾಷ್ಟ್ರ ಎಂಬ ಪದ ಬಳಕೆಯಾದಾಗಲೆಲ್ಲ ನಮ್ಮ ಮನಸ್ಸಿನಲ್ಲಿ ಸುಳಿಯುವುದು ಪಾಕಿಸ್ತಾನ. ಜಿಹಾದ್​ ಮುಂದಿಟ್ಟಕೊಂಡು ಭಾರತದ ವಿರುದ್ಧ ರಕ್ತಪಾತಕ್ಕೆ ಉಗ್ರರನ್ನು ಸಜ್ಜುಗೊಳಿಸಿ ಗಡಿಯೊಳಕ್ಕೆ ನುಸುಳಿಸುತ್ತದೆ. ಆದರೆ, ಈ ವಿಚಾರದಲ್ಲಿ ಚೀನಾ ನಮ್ಮ ಮಿತ್ರನೇನಲ್ಲ. ಇತ್ತೀಚಿನ ಅಂಕಿ-ಸಂಖ್ಯೆಗಳನ್ನು ಗಮನಿಸಿದರೆ, ಚೀನಾದ ನಡವಳಿಕೆ ಭಾರಿ ಕಳವಳ ಮೂಡಿಸುತ್ತದೆ.

    ಇದೀಗ ಸಂಘರ್ಷ ನಡೆದು ಭಾರತೀಯ ಯೋಧರ ಹತ್ಯೆಯಾಗಿರುವುದು ಭಾರತದ ನಿಯಂತ್ರಣದಲ್ಲಿರುವ ಪೆನ್​ಗಾಂಗ್​ ತ್ಸೊ ಸರೋವರ, ಗಾಲ್ವನ್​ ಪ್ರದೇಶಗಳಲ್ಲಿನ ಆಧಿಪತ್ಯಕ್ಕೆ. ಭಾರತದ ಗಡಿಯಲ್ಲಿ ನುಗ್ಗಿದ ಚೀನಾ ಪಡೆಗಳಿಗೆ ಭಾರತ ತೀವ್ರ ಪ್ರತಿರೋಧ ಒಡ್ಡುತ್ತಿದೆ.
    ಟೆಂಟ್​ಗಳನ್ನು ಹೂಡಿರುವ ಚೀನಿಯರು, ಭಾರಿ ವಾಹನಗಳೊಂದಿಗೆ ಬೀಡುಬಿಟ್ಟಿದ್ದಲ್ಲದೇ, ಕಣ್ಗಾವಲು ಸಾಧನಗಳನ್ನು ಹೊಂದಿ ನಿಗಾ ವಹಿಸಿದ್ದರು. ಈ ಕಾರಣಕ್ಕಾಗಿಯೇ ಭಾರತೀಯ ಭೂಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಉತ್ತರ ಲಡಾಖ್​ನಲ್ಲಿರುವ ಸೇನಾ ಕಚೇರಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದರು. ಚೀನಾ ಪಡೆಗಳನ್ನು ಹಿಮ್ಮೆಟ್ಟಿಸಲು ತಂತ್ರ ರೂಪಿಸಿ ಯೋಧರನ್ನು ಸಜ್ಜುಗೊಳಿಸಿದ್ದರು. ಚೀನಾದ ತಂತ್ರ ವಿಫಲವಾದ ಕಾರಣದಿಂದಾಗಿಯೇ ಈ ದುಷ್ಕೃತ್ಯ ನಡೆಸಿದೆ ಎಂದು ವಿಶ್ಲೇಷಿಸಲಾಗಿದೆ.

    ಇದನ್ನೂ ಓದಿ; ಮೌಂಟ್​ ಎವರೆಸ್ಟ್​ ಬುಡಕ್ಕೂ ಬಂತು ಚೀನಾ ಗಡಿ ತಂಟೆ ವಿವಾದ 

    ಮೇ 5 ಹಾಗೂ 6ರಂದು ನಡೆದಿದ್ದ ಮುಖಾಮುಖಿಯಲ್ಲಿ ಎರಡೂ ಕಡೆಯ ಕೆಲ ಯೋಧರು ಗಾಯಗೊಂಡಿದ್ದ ಕಾರಣ, ಅನಗತ್ಯ ಯುದ್ದೋನ್ಮಾದವನ್ನು ತಡೆಗಟ್ಟುವ ಉದ್ದೇಶದಿಂದ ಮುಖಾಮುಖಿಯಾಗದೇ ದೂರ ಉಳಿದಿದ್ದರು. ಆದರೆ, ಯಾವುದೇ ಪರಿಸ್ಥಿತಿಯನ್ನಾದರೂ ಎದುರಿಸಲು ಭಾರತೀಯ ಸೇನೆಯೂ ಸಜ್ಜಾಗಿದ್ದ ಕಾರಂ ಚೀನಿ ಯೋಧರನ್ನು ಒಳ ಬಿಟ್ಟುಕೊಂಡಿಲ್ಲ.

    ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಕೆಲ ದಿನಗಳಲ್ಲಿ ಎರಡು ಕಡೆಯ ಕಮಾಂಡರ್​ಗಳು ಐದು ಸುತ್ತಿನ ಮಾತುಕತೆ ನಡೆಸಿದ್ದರು. 80 ಕಿ.ಮೀ. ಗಡಿಯುದ್ದಕ್ಕೂ ಪರಿಸ್ಥಿತಿ ಸಹಜವಾಗಿಸಲು ಯತ್ನ ನಡೆಸಿದ್ದರು. ಆದರೂ ಚೀನಾ ತನ್ನ ಬುದ್ಧಿ ಬಿಟ್ಟಿಲ್ಲ.

    ಇದನ್ನೂ ಓದಿ; ಚೀನಾ ಕರಾವಳಿಯಲ್ಲಿ ಕಳವಳಕಾರಿ ವಿದ್ಯಮಾನ, ತೀರ ಸಮೀಪಿಸುತ್ತಿದ್ದಂತೆ ದಿಕ್ಕು ತಪ್ಪಿದ ಹಡಗುಗಳು…!

    ಕಳೆದ ನಾಲ್ಕು ತಿಂಗಳಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾ ಕನಿಷ್ಠ 170 ಬಾರಿ ಭಾರತದ ಗಡಿಯೊಳಗೆ ಅಕ್ರಮ ಪ್ರವೇಶ ಮಾಡಿದೆ. ಅದರಲ್ಲೂ ಲಡಾಖ್​ನಲ್ಲಿಯೇ 130 ಬಾರಿ ಈ ಕೃತ್ಯ ನಡೆಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 110 ಬಾರಿ ಇಂಥ ದುಸ್ಸಾಹಸ ನಡೆಸಿತ್ತು.

    ಚೀನಾ 2019ರಲ್ಲಿ 663 ಬಾರಿ ಅತಿಕ್ರಮಣ ನಡೆಸಿತ್ತು. 2018ಕ್ಕೆ ಹೋಲಿಸಿದಲ್ಲಿ ಭಾರಿ ಹೆಚ್ಚಾಗಿತ್ತು. ಆ ವರ್ಷ 404 ಬಾರಿ ಗಡಿಯೊಳಕ್ಕೆ ನುಸುಳಿತ್ತು. 2015ರಿಂದ ಈಚೆಗೆ ಗಮನಿಸಿದರೆ, ಲಡಾಖ್​ ಪ್ರದೇಶದಲ್ಲಿ ಚೀನಿಯರು ಹೆಚ್ಚು ದುಷ್ಕೃತ್ಯಕ್ಕೆ ಇಳಿದಿರುವುದು ಗೊತ್ತಾಗುತ್ತದೆ.
    ಇದೀಗ ಯೋಧರ ಹತ್ಯೆಯಂಥ ದುಷ್ಕೃತ್ಯಕ್ಕೆ ಇಳಿದಿರುವುದು ಭಾರತವನ್ನು ಕೆರಳಿಸಿದೆ.

    ಅಂತಿಮ ವರ್ಷ, ಸೆಮಿಸ್ಟರ್​ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲವೆಂದ ವಿಶ್ವವಿದ್ಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts