More

    ಚೀನಾ ಕರಾವಳಿಯಲ್ಲಿ ಕಳವಳಕಾರಿ ವಿದ್ಯಮಾನ, ತೀರ ಸಮೀಪಿಸುತ್ತಿದ್ದಂತೆ ದಿಕ್ಕು ತಪ್ಪಿದ ಹಡಗುಗಳು…!

    ಬೀಜಿಂಗ್​: ಚೀನಾ ಕರಾವಳಿಯ ಹಲವು ಬಂದರುಗಳ ಸಮೀಪ ಹಲವು ಹಡಗುಗಳು ದಿಕ್ಕು ತಪ್ಪಿ ವೃತ್ತಾಕಾರವಾಗಿ ಸುತ್ತಿದ ವಿದ್ಯಮಾನ ವರದಿಯಾಗಿದೆ.

    ದಕ್ಷಿಣ ಅಟ್ಲಾಂಟಿಕ್​ ಹಾಗೂ ಕೇಪ್​ ಆಫ್​ ವೆಸ್ಟ್​ ಸಾಗರದಲ್ಲಿ ಸಂಚರಿಸುತ್ತಿದ್ದ ಹಡಗುಗಳು ಚೀನಾದ ಬಂದರುಗಳಿಗೆ ಆಗಮಿಸುತ್ತಿರುವಾಗ ಇಂಥದ್ದೊಂದು ಘಟನೆ ನಡೆದಿರುವುದನ್ನು ಗಮನಿಸಲಾಗಿದೆ.

    ವಿಲ್ಲೋವಿ ಎಂಬ ಹಡಗಿನ ಕ್ಯಾಪ್ಟನ್​ನನ್ನು ತೀರಕ್ಕೆ ಕರೆಯಿಸಿದ ಅಧಿಕಾರಿಗಳು ಹಡಗಿನ ವಿಲಕ್ಷಣ ಚಲನೆ ಬಗ್ಗೆ ವಿಚಾರಣೆ ನಡೆಸಿ, ಮುನ್ನಡೆಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಕೇಳಿದ್ದಾರೆ. ಈ ಹಡಗು ಇದ್ದ ಪ್ರದೇಶದಲ್ಲಿಯೇ ಇನ್ನೂ ನಾಲ್ಕು ಹಡಗುಗಳು ಕೂಡ ವೃತ್ತಾಕಾರವಾಗಿ ಸಂಚರಿಸುತ್ತಿದ್ದವು. ಇದೇಕೆ ಎನ್ನುವುದು ಅಧಿಕಾರಿಗಳಿಗೂ ಗೊತ್ತಾಗಿಲ್ಲ.

    ಇದನ್ನೂ ಓದಿ; ಈ ಬ್ಯಾಟರಿ ಬಳಸಿದ್ರೆ 20 ಲಕ್ಷ ಕಿ.ಮೀ. ಸಂಚರಿಸುತ್ತೆ ಕಾರು…! ಎಲೆಕ್ಟ್ರಿಕ್​ ವಾಹನ ಕ್ಷೇತ್ರದಲ್ಲಿ ಮಿಂಚಿನ ಸಂಚಾರ 

    ತಜ್ಞರ ಅಭಿಪ್ರಾಯದಂತೆ ಆ ಪ್ರದೇಶದಲ್ಲಿ ಆ ವೇಳೆ ಭಾರಿ ಪ್ರವಾಹ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ಆದರೆ, ಸಾಗರ ಹವಾಮಾನ ಮಾಹಿತಿ ಪ್ರಕಾರ ಅಂಥ ಪ್ರವಾಹಗಳು ಉಂಟಾಗಿರಲಿಲ್ಲ.

    ಸಾಮಾನ್ಯವಾಗಿ ಹಡಗುಗಳು ಅದರಲ್ಲೂ ಸರಕು ಸಾಗಣೆಯ ವಾಣಿಜ್ಯ ಹಡಗುಗಳು ಸ್ವಯಂಚಾಲಿತ ಪಥದರ್ಶಕ ವ್ಯವಸ್ಥೆಯನ್ನು ಬಳಸುತ್ತವೆ. ಇದಕ್ಕೆ ಬಳಸಲಾಗುವ ಜಿಪಿಎಸ್​ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದಲ್ಲಿ ಅಥವಾ ಹ್ಯಾಕ್​ ಆದಲ್ಲಿ ಇಂಥ ದಿಕ್ಕು ತಪ್ಪುವಿಕೆ ಸಂಭವಿಸಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

    ಇದನ್ನೂ ಓದಿ; ಬೆಂಜ್​, ಬಿಎಂಡಬ್ಲ್ಯು, ಆಡಿ ಕಾರು ಬಿಟ್ಟು ಎತ್ತಿನ ಗಾಡಿಯಲ್ಲಿ ಹೊರಟ ಉದ್ಯಮಿಗಳು; ಸರ್ಕಾರಕ್ಕೆ ಕೊಟ್ಟರು ಸಂದೇಶ 

    ಹಡಗುಗಳು ವೃತ್ತಾಕಾರವಾಗಿ ಸುತ್ತುವ ಘಟನೆ ಹೆಚ್ಚಾಗಿ ಕರಾವಳಿ ತೀರದಲ್ಲಿರುವ ತೈಲಾಗಾರಗಳ ಬಳಿ ಅಥವಾ ಸರ್ಕಾರಿ ಸೌಲಭ್ಯಗಳಿರುವ ಸ್ಥಳಗಳ ಬಳಿ ಸಂಭವಿಸಿರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ. ಆದರೆ, ವಿಲ್ಲೋವಿ ಹಡಗು ಸುತ್ತಿದ್ದ ಪ್ರದೇಶದಲ್ಲಿ ಇಂಥ ತಾಣಗಳಿರಲಿಲ್ಲ. ಇದಲ್ಲದೇ, ತೀರದಿಂದ ಬಹುದೂರದಲ್ಲೂ ಇಂಥದ್ದೇ ವಿದ್ಯಮಾನ ಜರುಗಿದೆ ಎಂದು ಹೇಳಲಾಗಿದೆ.

    ವಿಲ್ಲೋವಿ ಹಡಗಿನಲ್ಲಿದ್ದ ಗೈರೋ ಕಂಪಾಸ್​ನಲ್ಲಿ ನ್ಯೂನತೆ ಕಂಡು ಬಂದಿದ್ದರಿಂದ ಹಡಗಿನ ಚಲನೆಯಲ್ಲಿ ವ್ಯತ್ಯಾಸವಾಗಿತ್ತು. ಇದನ್ನು ಸರಿಪಡಿಸಿದ ಬಳಿಕ ಸಮಸ್ಯೆ ಪರಿಹಾರವಾಗಿದೆ. ಆದರೆ, ಇತರ ಹಲವು ಹಡಗುಗಳ ಚಲನೆಯಲ್ಲಿ ವ್ಯತ್ಯಾಸವಾಗಿದ್ದೇಕೆ ಎಂಬುದು ನಿಗೂಢವಾಗಿಯೇ ಉಳಿದಿದೆ ಎಮದು ಸ್ಕೈನ್ಯೂಸ್​ ವರದಿ ಮಾಡಿದೆ.

    ‘ಪಾಳೇಗಾರ’ ಚೀನಾ ಪಳಗಿಸಲು ಒಂದಾದ ಎಂಟು ಪ್ರಜಾಪ್ರಭುತ್ವ ರಾಷ್ಟ್ರಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts