More

    VIDEO|ಆನ್​ಲೈನ್​ನಲ್ಲಿ ಯೋಗದಿನ: ಸಿಎಂ ಶುಭ ಹಾರೈಕೆ, ಪಾಲ್ಗೊಳ್ಳುವಂತೆ ಜನತೆಗೆ ಮನವಿ

    ಬೆಂಗಳೂರು: ಕರೊನಾ ಭೀತಿ ಕಾರಣದಿಂದಾಗಿ ಒಟ್ಟಾಗಿ ಸೇರಲು ಅವಕಾಶವಿಲ್ಲದಿರುವುದರಿಂದ ಜೂ.21ರಂದು ಆನ್​ಲೈನ್​ನಲ್ಲೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ರಾಜ್ಯದ ಪ್ರತಿಷ್ಠಿತ ಯೋಗ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್ ಸಿದ್ಧತೆ ನಡೆಸಿದ್ದು, ‘ವಿಜಯವಾಣಿ ಹಾಗೂ ದಿಗ್ವಿಜಯ 24×7 ನ್ಯೂಸ್’ ಸಹಯೋಗ ವಹಿಸಲಿದೆ. ಈ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನಾಡಿನ ಜನತೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕರೆ ನೀಡಿದ್ದು, ಶುಭವನ್ನೂ ಹಾರೈಸಿದ್ದಾರೆ.

    ರಾಷ್ಟ್ರೋತ್ಥಾನ ಪರಿಷತ್​ನಿಂದ ಈವರೆಗೆ ಲಕ್ಷಕ್ಕೂ ಅಧಿಕ ಮಂದಿಗೆ ಯೋಗ ತರಬೇತಿ ನೀಡಲಾಗಿದ್ದು, ಪ್ರತಿ ವರ್ಷ ಯೋಗ ದಿನವನ್ನು ವಿವಿಧ ಜಿಲ್ಲೆಗಳಲ್ಲಿ 15 ಸಾವಿರಕ್ಕೂ ಹೆಚ್ಚು ಜನರ ಜತೆಗೆ ಆಚರಿಸಲಾಗುತ್ತಿತ್ತು. ಆದರೆ ಕರೊನಾ ಆರ್ಭಟ ವ್ಯಾಪಕವಾಗುತ್ತಿರುವ ಈ ವರ್ಷದ ಯೋಗ ದಿನದ ಘೋಷವಾಕ್ಯ, ‘ಮನೆಮನೆಯಲ್ಲಿ ಯೋಗ – ಕುಟುಂಬ ಸದಸ್ಯರೊಂದಿಗೆ ಯೋಗ’ ಇದಕ್ಕೆ ಅನುಗುಣವಾಗಿ ಈ ಕಾರ್ಯಕ್ರಮ ರೂಪಿಸಲಾಗಿದ್ದು, ಈಗಾಗಲೆ ಗೂಗಲ್ ಫಾಮ್ರ್ ಹಾಗೂ ವಾಟ್ಸ್ ಆಪ್ ಮೂಲಕ ಜನರು ನೋಂದಾಯಿಸಿಕೊಂಡಿದ್ದಾರೆ. ಜೂ. 21ರಂದು ಬೆಳಗ್ಗೆ 6.30ರಿಂದ 7.30ರ ವರೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೋತ್ಥಾನ ಪರಿಷತ್ ಆನ್​ಲೈನ್ ಮೂಲಕ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ.

    1.5 ಲಕ್ಷಕ್ಕೂ ನೋಂದಣಿ: ರಾಜ್ಯದ 13 ಜಿಲ್ಲೆಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ. 30ಕ್ಕೂ ಅಧಿಕ ಶಾಲೆಗಳು, ಯೋಗಕೇಂದ್ರಗಳು, ಜಾಗರಣ, ತಪಸ್-ಸಾಧನಾ ಮುಂತಾದ ಚಟುವಟಿಕೆಗಳ ವಿದ್ಯಾರ್ಥಿಗಳು, ಪೋಷಕರು, ಯೋಗಾಭ್ಯಾಸಿಗಳು ಸೇರಿ 1.5 ಲಕ್ಷ ಮಂದಿ ಈಗಾಗಲೇ ಆನ್​ಲೈನ್ ಮೂಲಕ ಈ ಕಾರ್ಯಕ್ರಮಕ್ಕೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

    ಸಾರ್ವಜನಿಕರು, ಯೋಗಾಸಕ್ತರು, ಕುಟುಂಬಗಳು, ಶಾಲಾಕಾಲೇಜುಗಳು, ಯೋಗಸಂಸ್ಥೆಗಳು ಮತ್ತು ಇನ್ನಿತರ ಸಂಘ-ಸಂಸ್ಥೆಗಳು ಗೂಗಲ್ ಫಾಮ್ರ್ ಹಾಗೂ ವಾಟ್ಸ್​ಆ್ಯಪ್ ಸಂಖ್ಯೆಗೆ (9481170206) ಹೆಸರು, ದೂರವಾಣಿ ಸಂಖ್ಯೆ, ಸ್ಥಳ, ಪಿನ್​ಕೋಡ್, ಭಾಗವಹಿಸುವವರ ಸಂಖ್ಯೆಯನ್ನು ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ರಾಷ್ಟ್ರೋತ್ಥಾನ ಪರಿಷತ್​ನ ಅಧಿಕೃತ ಫೇಸ್​ಬುಕ್ ಪುಟ https://www.facebook.com/rashtrotthanaparishath ದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.

    ಉದ್ವೇಗ ನಿಯಂತ್ರಿಸುವ ಯೋಗಾಭ್ಯಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts