More

    ಲಾಕ್​ಡೌನ್​ ಸಂಕಷ್ಟದಿಂದಾಗಿ ದಿನಗೂಲಿಯಾದ ಅಂತಾರಾಷ್ಟ್ರೀಯ ಫುಟ್‌ಬಾಲ್ ಆಟಗಾರ್ತಿ!

    ನವದೆಹಲಿ: ಕರೊನಾ ವೈರಸ್ ಹಾವಳಿಯಿಂದಾಗಿ ದೇಶದೆಲ್ಲೆಡೆ ಹಲವು ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತ ಫುಟ್‌ಬಾಲ್ ತಂಡದ ಆಟಗಾರ್ತಿ ಸಂಗೀತಾ ಸೊರೆನ್ ಕೂಡ ಇದರಲ್ಲಿ ಸೇರಿದ್ದಾರೆ. ಕರೊನಾ ಕಾಲದಲ್ಲಿ ತಮ್ಮಕುಟುಂಬ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟಕ್ಕೆ ನೆರವಾಗುವ ಸಲುವಾಗಿ 20 ವರ್ಷದ ಸಂಗೀತಾ ದಿನಗೂಲಿಯಾಗಿದ್ದಾರೆ!

    ಕಳೆದ ವರ್ಷ ಭಾರತ ತಂಡದ ಪರ ಆಡಲು ಕರೆ ಪಡೆದಿದ್ದ ಸಂಗೀತಾ, ಅದಕ್ಕೆ ಮುನ್ನ ಭೂತಾನ್ ಮತ್ತು ಥಾಯ್ಲೆಂಡ್‌ನ್ಲಲಿ ನಡೆದ 18 ಮತ್ತು 19 ವಯೋಮಿತಿ ಫುಟ್‌ಬಾಲ್ ಟೂರ್ನಿಗಳಲ್ಲಿ ಭಾರತ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದರು. ಜಾರ್ಖಂಡ್‌ನ ಧನ್ಬಾದ್‌ನ ಬಸುಮುಂಡಿ ಗ್ರಾಮದಲ್ಲಿ ಇಟ್ಟಿಗೆಗೂಡು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಸಂಗೀತಾ ಅವರ ತಂದೆ ಅಂಧರಾಗಿದ್ದಾರೆ. ಅಣ್ಣ ನಿರುದ್ಯೋಗಿಯಾಗಿದ್ದು, ಇತ್ತೀಚೆಗೆ ತಂಗಿಯ ಜತೆಗೆ ದಿನಗೂಲಿಯಾಗಿದ್ದಾರೆ.

    ಇದನ್ನೂ ಓದಿ: ಭಾರತ ಪರ ದೀರ್ಘಕಾಲ ಆಡಲು ಸಾಧ್ಯವಾಗದ ಬಗ್ಗೆ ಕಾರಣ ವಿವರಿಸಿದ ರಾಬಿನ್ ಉತ್ತಪ್ಪ

    ಸಂಗೀತಾ ಸೊರೆನ್ ಸಂಕಷ್ಟಕ್ಕೆ ಇದೀಗ ಕ್ರೀಡಾ ಸಚಿವ ಕಿರಣ್ ರಿಜಿಜು ಸಹಾಯಹಸ್ತ ಚಾಚಿದ್ದು, ಕ್ರೀಡಾ ಸಚಿವಾಲಯದಿಂದ ಶೀಘ್ರವೇ ಆರ್ಥಿಕ ನೆರವು ಒದಗಿಸುವುದಾಗಿ ತಿಳಿಸಿದ್ದಾರೆ. ‘ನನ್ನ ಕಚೇರಿಯ ಅಧಿಕಾರಿಗಳು ಶೀಘ್ರವೇ ಸಂಗೀತಾ ಜತೆಗೆ ಮಾತನಾಡಿ ನೆರವು ನೀಡಲಿದ್ದಾರೆ. ಆಕೆ ಕ್ರೀಡಾ ಜೀವನದಲ್ಲಿ ಮುಂದುವರಿಯುವಂತೆ ಮಾಡುವುದೇ ನಮ್ಮ ಪ್ರಮುಖ ಆದ್ಯತೆಯಾಗಿರುತ್ತದೆ. ಇದಕ್ಕಾಗಿ ಆಕೆ ಗೌರವಯುತ ಬದುಕು ನಡೆಸುವಂತಾಗಬೇಕು’ ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ. ಸಂಗೀತಾಗೆ ಶೀಘ್ರದಲ್ಲೇ ಸೂಕ್ತ ಸರ್ಕಾರಿ ಉದ್ಯೋಗ ಲಭಿಸುವ ನಿರೀಕ್ಷೆಯೂ ಇದೆ.

    ಗ್ರಾಮದ ಹುಡುಗರ ಜತೆಗೆ ಆಡುತ್ತ ಫುಟ್‌ಬಾಲ್ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದ ಸಂಗೀತಾ, 2016ರಲ್ಲಿ ಇಲ್ಲಿನ ಪ್ರತಿಷ್ಠಿತ ಮಹಿಳಾ ಫುಟ್‌ಬಾಲ್ ಕ್ಲಬ್ ಪರ ಆಡುವ ಅವಕಾಶ ಒಲಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಜಾರ್ಖಂಡ್ ರಾಜ್ಯ ತಂಡಕ್ಕೆ ಆಯ್ಕೆಯಾದ ಅವರು, ಇನ್ನೊಂದು ವರ್ಷದಲ್ಲಿ ಭಾರತ ಪರ ಆಡುವ ಅವಕಾಶವನ್ನೂ ಪಡೆದಿದ್ದರು. ಆದರೆ ಲಾಕ್‌ಡೌನ್ ಸಮಯದಲ್ಲಿ ಅಣ್ಣ ಇದ್ದ ಕೆಲಸವನ್ನೂ ಕಳೆದುಕೊಂಡ ಕಾರಣ ಸಂಗೀತಾ ಕುಟುಂಬದ ಹಸಿವು ನೀಗಿಸಲು ತಾವೂ ದಿನಗೂಲಿ ಕಾರ್ಮಿಕರಾಗಿದ್ದರು.

    ಪೈಲ್ವಾನ್ ಸುಶೀಲ್ ಕುಮಾರ್ 12 ದಿನ ಪೊಲೀಸ್ ಕಸ್ಟಡಿಗೆ, ಕೋರ್ಟ್‌ಗೆ ಕೋರಿಕೆ

    2019ರಲ್ಲಿ ನಿಷೇಧಕ್ಕೊಳಗಾದ ಕಥೆ ಬಿಚ್ಚಿಟ್ಟ ಮುಂಬೈ ಬ್ಯಾಟ್ಸ್​ಮನ್​ ಪೃಥ್ವಿ ಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts