More

    ಪೈಲ್ವಾನ್ ಸುಶೀಲ್ ಕುಮಾರ್ 6 ದಿನಗಳ ಕಾಲ ದೆಹಲಿ ಪೊಲೀಸರ ಕಸ್ಟಡಿಗೆ

    ನವದೆಹಲಿ: ಯುವ ಪೈಲ್ವಾನ್ ಕೊಲೆ ಪ್ರಕರಣದಲ್ಲಿ ಶನಿವಾರ ಬಂಧನಕ್ಕೊಳಗಾಗಿರುವ ಅವಳಿ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ನ್ಯಾಯಾಲಯ ಭಾನುವಾರ 6 ದಿನಗಳ ಕಾಲ ದೆಹಲಿ ಪೊಲೀಸರ ಕಸ್ಟಡಿಗೆ ಒಪ್ಪಿಸಿದೆ.

    ದೆಹಲಿ ಪೊಲೀಸರು ಭಾನುವಾರ ರೋಹಿಣಿ ಕೋರ್ಟ್ ಎದುರು 37 ವರ್ಷದ ಸುಶೀಲ್‌ರನ್ನು ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗಾಗಿ 12 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಸುಶೀಲ್ ಪರ ವಕೀಲರು ವಿರೋಧವನ್ನೂ ವ್ಯಕ್ತಪಡಿಸಿದರು. ಬಳಿಕ ನ್ಯಾಯಾಧೀಶರು, ಸುಶೀಲ್ ಜತೆಗೆ ಪ್ರಕರಣದ ಮತ್ತೋರ್ವ ಆರೋಪಿ ಅಜಯ್ ಕುಮಾರ್​ನನ್ನು 6 ದಿನಗಳ ಕಾಲ ಪೊಲೀಸ್​ ವಶಕ್ಕೆ ನೀಡಿದರು. ಮೇ 4ರಂದು ಛತ್ರಶಾಲಾ ಸ್ಟೇಡಿಯಂ ಹೊರಗೆ 23 ವರ್ಷದ ಪೈಲ್ವಾನ್ ಸಾಗರ್ ಕೊಲೆಯಾಗಿದ್ದರು. ಇದರ ಬೆನ್ನಲ್ಲೇ ಪ್ರಕರಣದ ಪ್ರಮುಖ ಆರೋಪಿ ಸುಶೀಲ್ ತಲೆಮರೆಸಿಕೊಂಡಿದ್ದರು.

    ಇದನ್ನೂ ಓದಿ: ಕರೊನಾಗೆ ಹೆದರಲ್ಲ ಒಲಿಂಪಿಕ್ಸ್, ಆರೋಗ್ಯ ತುರ್ತು ಪರಿಸ್ಥಿತಿಯಲ್ಲಾದರೂ ನಡೆದೇ ನಡೆಯುತ್ತೆ!

    ಇದಕ್ಕೂ ಮುನ್ನ ಭಾನುವಾರ ಕೋರ್ಟ್ ರೂಂನಲ್ಲೇ 30 ನಿಮಿಷಗಳ ಕಾಲ ನಡೆದ ಪೊಲೀಸರ ವಿಚಾರಣೆಯಲ್ಲಿ ಸುಶೀಲ್, ಕುಸ್ತಿಪಟುಗಳ ಗಲಾಟೆಯ ವೇಳೆ ಸ್ಥಳದಲ್ಲಿ ತಾವು ಇದ್ದುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸುಶೀಲ್​ 2008ರ ಬೀಜಿಂಗ್​ ಮತ್ತು 2012ರ ಲಂಡನ್​ ಒಲಿಂಪಿಕ್ಸ್​ನಲ್ಲಿ ಕ್ರಮವಾಗಿ ಕಂಚು ಮತ್ತು ಬೆಳ್ಳಿ ಪದಕ ಜಯಿಸಿದ್ದರು. ಅವರು ವೈಯಕ್ತಿಕ ವಿಭಾಗದಲ್ಲಿ 2 ಪದಕ ಜಯಿಸಿದ ಭಾರತದ ಏಕಮಾತ್ರ ಕ್ರೀಡಾಪಟುವಾಗಿದ್ದಾರೆ.

    ಕೊಲೆ ಪ್ರಕರಣದಲ್ಲಿ ಪೊಲೀಸ್ ಬಲೆಗೆ ಬಿದ್ದ ಎರಡು ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್

    ಭಾರತ ಪರ ದೀರ್ಘಕಾಲ ಆಡಲು ಸಾಧ್ಯವಾಗದ ಬಗ್ಗೆ ಕಾರಣ ವಿವರಿಸಿದ ರಾಬಿನ್ ಉತ್ತಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts