More

    ಹಿರಿಮಗನಿಂದಲೇ ಕೊಲೆಗೆ ಸುಪಾರಿ, 65 ಲಕ್ಷಕ್ಕೆ ಕೊಲೆ ಡೀಲ್​,

    ಶಿವಾನಂದ ಹಿರೇಮಠ ಗದಗ
    ರಾಜ್ಯವನ್ನು ತಲ್ಲಣಗೊಳಿಸಿದ್ದ ಗದಗ ನಗರದ ಪ್ರಕಾಶ ಬಾಕಳೆ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಜಿಲ್ಲಾ ಪೊಲೀಸರು, ಪ್ರಕಾಶ ಬಾಕಳೆ ಮಗ ವಿನಾಯಕ ಬಾಕಳೆ ಸೇರಿದಂತೆ 8 ಜನ ಆರೋಪಿಗಳನ್ನು ಬಂಧಿಸಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಮುಖ್ಯ ಆರೋಪಿ ಮನೆಯ ಹಿರಿಮಗನೇ ಎಂಬುದು ಬಾಕಳೆ ಕುಟುಂಬದಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ಆಸ್ತಿ ವಿಚಾರವಾಗಿ ತಂದೆ ಮತ್ತು ಮಗನ ನಡುವೆ ವೈಮನಸ್ಸು ಮೂಡಿದ ಹಿನ್ನೆಲೆ ತಂದೆ ಪ್ರಕಾಶ ಬಾಕಳೆ, ಮಲತಾಯಿ ಸುನಂದಾ ಬಾಕಳೆ ಹಾಗೂ ಸಹೋದರ ಕಾತಿರ್ಕ ಬಾಕಳೆ ಕೊಲೆ ಮಾಡಲು 65 ಲಕ್ಷ ರೂ.ಗೆ ವಿನಾಯಕ ಬಾಕಳೆ ಸುಪಾರಿ ನೀಡಿದ್ದ ಎಂಬದು ಪೊಲೀಸ್​ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಗದಗ ನಗರದ ೈರೋಜ್​ ಎಂಬ ವ್ಯಕ್ತಿ ಸುಪಾರಿ ಪಡೆದಿದ್ದ ಮತ್ತು 2 ಲಕ್ಷ ರೂ, ಮುಂಗಡ ಪಡೆದು ಮಹಾರಾಷ್ಟ್ರ ಮೂಲದ ಹಂತಕರಿಗೆ ಕೊಲೆ ಡೀಲ್​ ಒಪ್ಪಿಸಿದ್ದ. ಕೊಲೆ ನಡೆದ ದಿನ ಹಂತಕರು ಬಾಕಳೆ ಕುಟುಂಬವೆಂದು ಭಾವಿಸಿ ಸುನಂದಾ ಅವರ ಸಹೋದರ ಸಂಬಂಧಿ ಕುಟುಂಬವನ್ನು ಹತ್ಯೆ ಮಾಡಿದ್ದಾರೆ. ಅದರಲ್ಲಿ ಕಾತಿರ್ಕ್​ ಬಾಕಳೆ ಕೊಲೆಯು ನಡೆದಿದೆ. ಹಂತಕರ್​ ಟಾರ್ಗೆಟ್​ ಮಿಸ್​ ಆಗಿ ಅಮಾಯಕ ಕುಟುಂಬವೊಂದು ಬಲಿಯಾಗಿದೆ ಎಂದು ಐಜಿ ವಿಕಾಸ್​ ಕುಮಾರ್​ ವಿಕಾಸ್​ ಸೋಮವಾರ ಸುದ್ದಿಗೋಷ್ಟಿ ನಡೆಸಿ ತಿಳಿಸಿದರು.

    ಏನಿದು ಪ್ರಕರಣ?
    ನಗರದ ದಾಸರ ಓಣಿಯಲ್ಲಿ ಶುಕ್ರವಾರ ಬೆಳಗಿನ ಜಾವ 2.30ಕ್ಕೆ ಪ್ರಕಾಶ ಬಾಕಳೆ ಕುಟುಂಬದ ನಾಲ್ವರ ಕೊಲೆ ನಡೆದಿತ್ತು. ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾತಿರ್ಕ್​ ಬಾಕಳೆ(27) ಸಹೋದರ ಸಂಬಂಧಿ ಪರಶುರಾಮ ಹಾದಿಮನಿ (55), ಪರಶುರಾಮನ ಪತ್ನಿ ಲಕ್ಷೀ ್ಮ (45) ಹಾಗೂ 16 ವರ್ಷದ ಪುತ್ರಿ ಆಕಾಂಕ್ಷಾ ಮೃತ ದುರ್ಧೈವಿಗಳು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಗದಗ ನಗರ ಮೂವರನ್ನು ಹಾಗೂ ಮಹಾರಾಷ್ಟ್ರದ ಮಿರಜ್​ ಮೂಲದ 5 ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕಾಶ ಬಾಕಳೆ ಅವರ ಮೊದಲನೇ ಪತ್ನಿಯ ಹಿರಿಮಗ ವಿನಾಯಕ್​ ಬಾಕಳೆ(31), ಗದಗಿನ ರಾಜೀವ್​ ಗಾಂಧಿ ನಗರದ ೈರೋಜ್​ ನಿಸಾರಅಹಮ್ಮದ ಖಾಜಿ(29) ಮತ್ತು ಹುಡ್ಕೋ ಕಾಲನಿಯ ಜಿಶಾನ್​ ಮೆಹಬೂಬಅಲಿ ಖಾಜಿ(24) ಹಾಗೂ ಮಹರಾಷ್ಟ್ರದ ಮಿರಜ್​ ಮೂಲದ ಅವಳಿ ಸಹೋದರರಾದ ಸಾಹಿಲ್​ ಖಾಜಿ(19) ಮತ್ತು ಸೋಹೆಲ್​ ಖಾಜಿ(19), ಸುಲ್ತಾನ ಶೇಖ್​(23), ಮಹೇಶ ಸಾಳೋಂಕೆ(21), ವಾಹಿದ್​ ಬೇಪಾರಿ(21) ಬಂಧಿತ ಆರೋಪಿಗಳು.

    ಕೊಲೆಗೆ ಸುಪಾರಿ ಏಕೆ?
    ನಗರಸಭೆ ಮಾಜಿ ಸದಸ್ಯ ಪ್ರಕಾಶ ಬಾಕಳೆ ಹಾಗೂ ಪ್ರಕಾಶನ ಮೊದಲನೇ ಹೆಂಡತಿಯ ಹಿರಿಮಗ ವಿನಾಯಕ ಬಾಕಳೆ ನಡುವೆ ಆಸ್ತಿ ವೈಷಮ್ಯವೇ ಕೊಲೆಗೆ ಮೂಲ ಕಾರಣ. ಪ್ರಕಾಶ ಬಾಕಳೆಯು ತನ್ನ ಹೆಸರಿನ ನೋಂದಾಯಿತ ಹಲವು ಆಸ್ತಿಗಳನ್ನು ವಿನಾಯಕ ಬಾಕಳೆಗೆ ಪವರ್​ ಆ್​ ಅಟಾನಿರ್ ಮಾಡಿ ಕೊಟ್ಟಿದ್ದ. ಪವರ್​ ಆ್​ ಅಟಾನಿರ್ ಬಳಸಿಕೊಂಡಿದ್ದ ವಿನಾಯಕ ಕೆಲ ಆಸ್ತಿಗಳನ್ನು ಮಾರಾಟ ಮಾಡಿದ್ದ ಎನ್ನಲಾಗಿದೆ. ಆಸ್ತಿ ಮಾರಾಟದ ವಿಷಯವಾಗಿ ಪ್ರಕಾಶ ಮತ್ತು ಮಗ ವಿನಾಯಕ್​ ನಡುವೆ ವೈಷಮ್ಯ ಬೆಳೆದಿದೆ. ಪವರ್​ ಆ್​ ಅಟಾನಿರ್ ರದ್ದುಗೊಳಿಸು ಆಸ್ತಿ ಹಕ್ಕು ಬಿಟ್ಟುಕೊಡಬೇಕೆಂದು ಪ್ರಕಾಶ ಬಾಕಳೆ ಮಗನಿಗೆ ತಾಕೀತು ಮಾಡಿದ್ದರಿಂದ ವೈಷಮ್ಯ ವಿಕೋಪಕ್ಕೆ ತಿರುಗಿ ಕೊಲೆಗೆ ಸುಪಾರಿ ನೀಡುವ ಹಂತಕ್ಕೆ ಪ್ರಕರಣ ಬೆಳೆದಿದೆ.

    ಕೊಲೆಗೆ ಡೀಲ್​ ಪಡೆದವ ೈರೋಜ್​?
    ನಗರದ ೈರೋಜ್​ ನಿಸಾರಅಹಮ್ಮದ ಖಾಜಿ(29) ಎಂಬ ಆರೋಪಿಯು ಪ್ರಕಾಶ, ಸುನಂದಾ ಮತ್ತು ಕಾತಿರ್ಕ್​ ಕೊಲೆ ನಡೆಸಲು 65 ಲಕ್ಷ ರೂ.ಗೆ ಸುಪಾರಿ ಪಡೆದುಕೊಂಡಿದ್ದ. 2 ಲಕ್ಷ ಮುಂಗಡ ಪಡೆದು ಮೀರಜ್​ ಮೂಲದವರಿಗೆ ಕೊಲೆ ಸುಪಾರಿ ನೀಡಿದ್ದ. ಕೊಲೆ ನಡೆದ ನಂತರ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣಗಳೆಲ್ಲವು ಹಂತಕರ ಪಾಲು ಎಂದು ಡೀಲ್​ ಒಪ್ಪಿಕೊಳ್ಳಲಾಗಿತ್ತು ಮತ್ತು ಕೊಲೆಗೆ ಬಳಸುವ ಶಸ್ತಾಸ್ತ್ರಗಳನ್ನು ಸ್ಥಳದಲ್ಲೇ ಎಸೆದು ಮರಳಬೇಕೆಂದು ಡೀಲ್​ ಕುದಿರಿಸಲಾಗಿತ್ತು.

    ಕೊಲೆ ನಡೆದ ದಿನ?
    ಶುಕ್ರವಾರ ಬೆಳಗಿನ ಜಾವ 2 ಗಂಟೆಗೆ ಗದಗ ನಗರದ ಮುಳಗುಂದ ನಾಕಾ ಬಳಿ ಕಾರಿನಲ್ಲಿ ಬಂದಿಳಿದ ಹಂತಕರು, ಕಾರನ್ನು ಹತ್ತಿರದಲ್ಲೇ ಪಾರ್ಕ್​ ಮಾಡಿ ಕಾಲ್ನಡಿಗೆಯಲ್ಲೇ ದಾಸರಒಣಿ ತಲುಪಿದ್ದಾರೆ. ಏಣಿ ಬಳಸಿ ಮನೆಯ ಮೇಲ್ಮಮಹಡಿ ತಲುಪಿದ ಹಂತಕರು ಮೊದಲನೇ ಮಹಡಿಯಲ್ಲಿ ಮಲಗಿದ್ದ ಪರಶುರಾಮ ಮತ್ತು ಕಾತಿರ್ಕ ಕೊಲೆಗೈದು, ಕೆಳಮಹಡಿಯಲ್ಲಿ ಮಲಗಿದ್ದ ಲಕ್ಷಿ$್ಮ ಮತ್ತು ಆಕಾಂಾಳನ್ನು ಕೊಲೆ ಮಾಡಿದ್ದಾರೆ. ಕೆಳಮಹಡಿಯ ಕೊಠಡಿ ಒಂದರಲ್ಲಿ ಮಲಗಿದ್ದ ಪ್ರಕಾಶ ಮತ್ತು ಸುನಂದಾ ಅವರಿಗೆ ಹೊರಗಿನ ಕೂಗಾಟ ಮತ್ತು ಚಿರಾಟ ಕೇಳಿ ಪೊಲೀಸರಿಗೆ ಮಾಹಿತಿ ನೀಡುವುದರ ಜತೆಗೆ ಜೋರಾಗಿ ಶಬ್ದವನ್ನು ಮಾಡಿದ್ದಾರೆ. ಈ ಹಿನ್ನೆಲೆ ಡೀಲ್​ ಪಡೆದುಕೊಂಡಂತೆ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣ ದೋಚಲು ಹಂತಕರಿಗೆ ಸಮಯ ಸಿಗಲಿಲ್ಲ. ಪೊಲೀಸರು ಬರುವ ಮುನ್ಸೂಚನೆ ದೊರೆತ ಹಂತಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸರಿಯಾಗಿ ಬೆಳಗಿನ ಜಾವ 3 ಗಂಟೆಗೆ ಚೆನ್ನಮ್ಮ ಸರ್ಕಲ್​ ಮುಖ್ಯ ರಸ್ತೆಗೆ ಹಂತಕರು ಬಂದು ತಲುಪುವುದು ಸಿಸಿ ಕೆಮಾರದಲ್ಲಿ ಸೆರೆಯಾಗಿದೆ. ತದನಂತರ ಕಾರಿನಲ್ಲಿ ಹಂತಕರು ಮಹಾರಾಷ್ಟ್ರ ತಲುಪಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

    ಅವನಲ್ಲ, ಇವನು?
    ನಾಲ್ವರ ಹತ್ಯೆ ನಡೆದ ನಂತರ ನಗರದಲ್ಲಿ ಅನೇಕ ಸುದ್ದಿಗಳು ಹರಿದಾಡಿದ್ದವು. ಪ್ರಕಾಶ ಬಾಕಳೆ ಅವರ ಮೊದಲನೇ ಹೆಂಡತಿಯ ಎರಡನೇ ಮಗ ದತ್ತು ಬಾಕಳೆ ಈ ಕೃತ್ಯ ಎಸಗಿರಬಹುದು ಎಂದು ಊಹಿಸಲಾಗಿತ್ತು. ದತ್ತು ಬಾಕಳೆ ಈಗಾಗಲೇ ನಕಲಿ ಚಿನ್ನ ಮಾರಾಟ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿನಾಯಕ ಬಂಧನ ನಂತರವೇ ಕೊಲೆಯ ಪ್ರಮುಖ ಆರೋಪಿ ಯಾರೇಂಬುದು ಬಯಲಿಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts