More

    ಗ್ರಾಮೀಣ ಭಾಗಕ್ಕೂ ಸೇವಾ ಕಾರ್ಯ ವಿಸ್ತರಿಸಲಿ

    ರಾಯಚೂರು: ಜನರಲ್ಲಿ ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಸೇರಿದಂತೆ ಹಲವಾರು ಸೇವಾ ಕಾರ್ಯಗಳನ್ನು ನಡೆಸುತ್ತಿರುವ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಗಳು ಗ್ರಾಮೀಣ ಭಾಗಕ್ಕೂ ವಿಸ್ತರಿಸಬೇಕು ಎಂದು ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಉಪಾಧ್ಯಕ್ಷ ಅಶೋಕ್ ಪಾಟೀಲ್ ಅತ್ತನೂರು ಹೇಳಿದರು.
    ಸ್ಥಳೀಯ ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಶಾಖೆ ಕಾರ್ಯಾಲಯದಲ್ಲಿ ಬುಧವಾರ ಜರುಗಿದ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಸ್ಥೆ ರಕ್ತದಾನ ಶಿಬಿರ, ರಕ್ತ ಭಂಡಾರಗಳನ್ನು ಮುನ್ನಡೆಸುವುದರ ಜತೆಗೆ ಪ್ರವಾಹ ಮುಂದಾದ ಸಂದರ್ಭದಲ್ಲಿ ಜನರಿಗೆ ಸಹಾಯಹಸ್ತ ಚಾಚುವ ಕೆಲಸ ಮಾಡುತ್ತಿದೆ ಎಂದರು.
    ಸೇವಾ ಸಂಸ್ಥೆ ಕಾರ್ಯದರ್ಶಿ ಸದಾನಂದ ಪೂಜಾರಿ ಮಾತನಾಡಿ, ಆರೋಗ್ಯದ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಹಾಗೂ ರಕ್ತಹೀನತೆ, ಸತ್ತ್ವವುಳ್ಳ ಆಹಾರ ತೆಗೆದುಕೊಳ್ಳಲು ರೆಡ್‌ಕ್ರಾಸ್ ಸಂಸ್ಥೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
    ಸಂಸ್ಥೆ ಸದಸ್ಯ ದಂಡಪ್ಪ ಬಿರಾದರ ಮಾತನಾಡಿ, ವಿಶ್ವದ ಯಾವುದೇ ದೇಶದಲ್ಲಿ ಆಪತ್ತು ಬಂದಾದ ರೆಡ್‌ಕ್ರಾಸ್ ಮುಂಚೂಣಿಯಲ್ಲಿ ನಿಂತು ನಿಸ್ವಾರ್ಥವಾಗಿ ಕೆಲಸ ಮಾಡುತ್ತದೆ. ಜಿಲ್ಲಾ ಶಾಖೆಯೂ ಕೂಡಾ ಕರೋನಾ, ನೆರೆ ಹಾವಳಿ ಸಂದರ್ಭದಲ್ಲಿ ಜನಸೇವೆ ಮಾಡಿದ್ದಕ್ಕಾಗಿ ಶಾಖೆಗೆ ಎರಡು ಬಾರಿ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಅತಾವುಲ್ಲಾ, ಸದಸ್ಯರಾದ ವಿದ್ಯಾಸಾಗರ ಚಿಮಣಗೇರಿ, ರಾವುತರಾವ್ ಬರೂರ, ಗ್ರೀನ್ ರಾಯಚೂರು ಕಾರ್ಯದರ್ಶಿ ರಾಜೇಂದ್ರ ಶಿವಾಳೆ, ಮಹೇಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts