More

    ಅಂತೂ 27 ವರ್ಷಗಳ ಬಳಿಕ ಶಿಕ್ಷೆ ಪ್ರಕಟ; ಪೊಲೀಸ್ ಇನ್​ಸ್ಪೆಕ್ಟರ್-ತಹಶೀಲ್ದಾರರೇ ಅಪರಾಧಿಗಳು..

    ರಾಯಚೂರು: ಇಪ್ಪತ್ತೇಳು ವರ್ಷಗಳ ಹಿಂದಿನ ಪ್ರಕರಣವೊಂದು ನ್ಯಾಯಾಲಯದಲ್ಲಿ ಕೊನೆಗೂ ಇತ್ಯರ್ಥಗೊಂಡಿದ್ದು, ಆರೋಪಿಗಳಿಗೆ ಶಿಕ್ಷೆಯೂ ಘೋಷಣೆಯಾಗಿದೆ. ವಿಶೇಷ ಎಂದರೆ ಈ ಪ್ರಕರಣದಲ್ಲಿ ಪೊಲೀಸ್ ಇನ್​ಸ್ಪೆಕ್ಟರ್ ಹಾಗೂ ತಹಶೀಲ್ದಾರ್ ಅವರೇ ಆರೋಪಿಗಳಾಗಿದ್ದು, ಅವರ ಮೇಲಿನ ಆರೋಪ ಸಾಬೀತಾಗಿದೆ.

    1994ರ ಜೂ. 1ರಂದು ನಡೆದ ಪ್ರಕರಣ ಸಂಬಂಧದ ವಿಚಾರಣೆಯಲ್ಲಿ ಆರೋಪ ಸಾಬೀತಾಗಿದ್ದು, ಇನ್​​ಸ್ಪೆಕ್ಟರ್​ ಕಾಶೀನಾಥ್ ಹಾಗೂ ತಹಶೀಲ್ದಾರ್​ ರಾಮಾಚಾರಿ ಎಂಬವರಿಗೆ 3 ವರ್ಷಗಳ ಜೈಲು ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

    ಇದನ್ನೂ ಓದಿ: ಹೆಂಡತಿಯೊಂದಿಗೆ ಜಗಳ, ಇಬ್ಬರು ಗಂಡಂದಿರ ಸಾವು!

    ರಾಯಚೂರಿನ ಮಾನ್ವಿಯ ಹರವಿ ಗ್ರಾಮದ ರೈತ ಮುಖಂಡರಾದ ಶಂಕರಗೌಡ ಹಾಗೂ ಬಸನಗೌಡರನ್ನು ಲಾಕಪ್​ನಲ್ಲಿ ಹಾಕಿ ಥಳಿಸಿ ರಕ್ತಗಾಯ ಮಾಡಿ ಜೀವ ಬೆದರಿಕೆಯೊಡ್ಡಿದ್ದ ಆರೋಪ ಅಂದಿನ ಮಾನ್ವಿ ಸಿಪಿಐ ಕಾಶೀನಾಥ್ ಹಾಗೂ ಮಾನ್ವಿ ತಹಶೀಲ್ದಾರ್ ರಾಮಾಚಾರಿ ವಿರುದ್ಧ ದಾಖಲಾಗಿತ್ತು.

    ಆರ್​ಡಿಸಿಸಿ ಬ್ಯಾಂಕ್​ನೊಂದಿಗೆ ತಡಕಲ್ ಗ್ರಾಮದ ರೈತರ ದಿನಬಳಕೆ ವಸ್ತುವನ್ನು ಈ ಅಧಿಕಾರಿಗಳು ಜಪ್ತಿ ಮಾಡಿದ್ದರು. ಇದನ್ನು ತಡೆಯಲು ಯತ್ನಿಸಿದ್ದ ರೈತ‌ಮುಖಂಡರಿಗೆ ಅವಾಚ್ಯವಾಗಿ ಬೈದು ಕವಿತಾಳ ಠಾಣೆಯಲ್ಲಿ ಥಳಿಸಿದ ಕುರಿತು ಆರೋಪಿಸಿ ದೂರು ದಾಖಲಾಗಿತ್ತು. ಈ ಕುರಿತ ಪ್ರಕರಣ ರಾಯಚೂರು 3ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಇಂದು ತೀರ್ಪು ಪ್ರಕಟವಾಗಿದೆ.

    ಇದನ್ನೂ ಓದಿ: ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​

    ಏ. 15ರೊಳಗೆ ಕರೊನಾದಿಂದಾಗಿ ದೇಶದಲ್ಲಿ 50 ಸಾವಿರ ಜನರ ಸಾವು!; ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?

    ಚಲಿಸುತ್ತಿದ್ದ ಆಟೋದಲ್ಲಿ ಮಹಿಳೆ ಎದುರು ಹಸ್ತಮೈಥುನ ಮಾಡಿಕೊಂಡ ದುರುಳ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts