More

    ಗೌರವಧನ ಸಕಾಲಕ್ಕೆ ಪಾವತಿಸಲು ಒತ್ತಾಯ

    ವಿಜಯಪುರ: ಅಂಗನವಾಡಿ ನೌಕರರ ಗೌರವ ಧನವನ್ನು ಸಕಾಲಕ್ಕೆ ಸಮರ್ಪಕವಾಗಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಅಂಗನವಾಡಿ ನೌಕರರು ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. 47 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಈವರೆಗೆ ಅಂಗನವಾಡಿ ನೌಕರರ ಬೇಡಿಕೆ ಈಡೇರಿಲ್ಲ. ಕಡಿಮೆ ಸಂಬಳ, ಹೆಚ್ಚು ದುಡಿಮೆ ಎನ್ನುವ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇನ್ನಾದರೂ ಸರ್ಕಾರ ನೌಕರರ ಬೇಡಿಕೆ ಈಡೇರಿಸಬೇಕು ಎಂದರು.

    ನಿಯಮಿತವಾಗಿ ಸಿಲಿಂಡರ್, ಮೊಟ್ಟೆ ಮತ್ತು ಗುಣಮಟ್ಟದ ಆಹಾರ ಪದಾರ್ಥಗಳ ಸರಬರಾಜು ಆಗುತ್ತಿಲ್ಲ. ವಿದ್ಯುತ್ ಮತ್ತು ಕಟ್ಟಡಗಳ ದುರಸ್ತಿಯಂಥ ಸಮಸ್ಯೆಗಳ ಮಧ್ಯೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಆಗದೆ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಆದ್ದರಿಂದ ನೌಕರರ ಪ್ರೋತ್ಸಾಹ ಧನ ಹೆಚ್ಚಿಸಿ, ಇಲ್ಲದಿದ್ದರೆ ಈ ಕೆಲಸಗಳಿಂದ ನಮ್ಮನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

    ಪ್ರಮುಖ ಬೇಡಿಕೆಗಳು
    ಬಾಕಿ ಇರುವ 3 ತಿಂಗಳ ಗೌರವ ಧನವನ್ನು ಕೂಡಲೆ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಗೌರವ ಧನ ಪಾವತಿಸಬೇಕು. ಮೊಟ್ಟೆ ಬಿಲ್‌ಗಳನ್ನು ಪ್ರತಿ ತಿಂಗಳು ನಿಯಮಿತವಾಗಿ ನೀಡಬೇಕು. ಅವಶ್ಯಕತೆಗೆ ತಕ್ಕಂತೆ ಸಮರ್ಪಕವಾಗಿ ಸಿಲಿಂಡರ್‌ಗಳನ್ನು ಪೂರೈಸಬೇಕು. ಬಾಡಿಗೆಯಲ್ಲಿರುವ ಕೇಂದ್ರಗಳಿಗೆ 3 ತಿಂಗಳಿಗೊಮ್ಮೆ ಬಾಡಿಗೆ ಪಾವತಿಸಬೇಕು ಎಂಬುದು ಸೇರಿದಂತೆ ಮತ್ತಿತರ ಬೇಡಿಕೆಗಳ ಪಟ್ಟಿ ಸಲ್ಲಿಸಿದರು.

    ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀ ಲಕ್ಷ್ಮಟ್ಟಿ, ಉಪಾಧ್ಯಕ್ಷೆ ನಿಂಗಮ್ಮ ಮಠ, ಸವಿತಾ ತೇರದಾಳ, ಸಾವಿತ್ರಿ ನಾಗರತ್ತಿ, ಗಂಗೂಬಾಯಿ ಪೂಜಾರಿ, ಗೀತಾ ಡೆಮರಿ, ಶೋಭಾ ಹಿರೇಕುರುಬರ, ಶಾರದಾ ಕೋಟಿ, ರೇಣುಕಾ ಬಿಳೂರು, ಸುನಂದಾ ಬಿರಾದಾರ, ಶೋಭಾ ಪತ್ತಾರ, ವೀಣಾ ಮಂಟೂರು, ಸತ್ಯಮ್ಮ ಹಡಪದ, ರೇಣುಕಾ ಕರ್ಜಗಿ, ಶಾಂತಾ ಖಠಾರೆ, ಸುರೇಖಾ ಹಿರೇಮಠ, ಬಸಮ್ಮ ಹಿರೇಮಠ, ಮಹಾದೇವಿ ನಾಗೋಡ, ಸುನಂದಾ ದಡ್ಡಿ, ಕಮಲಾಕ್ಷಿ ಬಿರಾದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts