More

    ಕೋಳಿಯ ವಿರುದ್ಧ ದೂರು ದಾಖಲಿಸಿ ಡಾಕ್ಟರ್ ಕೊಟ್ಟ ಅಚ್ಚರಿಯ ಕಾರಣ ಹೀಗಿದೆ ನೋಡಿ…​

    ಇಂದೋರ್​: ಬೆಳಗಿನ ಸಮಯದಲ್ಲಿ ಕೋಳಿ ಕೂಗುವುದು ಸಾಮಾನ್ಯ. ಹಳ್ಳಿಯಲ್ಲಿ ಎಷ್ಟೋ ಮಂದಿಗೆ ಕೋಳಿ ಕೂಗುವುದೇ ಅಲರಾಂ ಇದ್ದಂತೆ. ಕೋಳಿ ಕೂಗುತ್ತಿದ್ದಂತೆ ಹಾಸಿಗೆಯಿಂದ ಎದ್ದು ತಮ್ಮ ತಮ್ಮ ಚಟುವಟಿಕೆಯಲ್ಲಿ ಎಲ್ಲರು ಬಿಜಿಯಾಗುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕೋಳಿ ಕೂಗುವುದರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವಿಚಿತ್ರ ಘಟನೆ ಮಧ್ಯಪ್ರದೇಶದ ಇಂದೋರ್​ ನಗರದಲ್ಲಿ ನಡೆದಿದೆ.

    ಅಲೋಕ್​ ಮೋದಿ ಎಂಬುವರ ಇಂದೋರ್​ನ ಪಲಾಸಿಯಾ ಏರಿಯಾದ ಗ್ರೇಟರ್​ ಕೈಲಾಶ ಆಸ್ಪತ್ರೆ ಸಮೀಪ ಇರುವ ಸಿಲ್ವರ್​ ಎನ್​ಕ್ಲೇವ್​ನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಕ್ಯಾನ್ಸರ್​ ವೈದ್ಯನಾಗಿರುವ ಅಲೋಕ್​ ಮೋದಿ, ದಿನದ ಎಲ್ಲ ಸಮಯದಲ್ಲೂ ಆಪರೇಷನ್​ನಲ್ಲಿ ಬಿಜಿಯಾಗಿರುತ್ತಾರೆ. ಹೀಗಾಗಿ ಮಧ್ಯ ರಾತ್ರಿ ಮನೆಗೆ ಬರುವುದು ಸಾಮಾನ್ಯವಾಗಿದೆ.

    ಅಲೋಕ್​ ಮೋದಿ ಬೆಳಗ್ಗೆ ತಡವಾಗಿ ಹೇಳುತ್ತಾರೆ. ಆದರೆ, ಪಕ್ಕದ ಮನೆಯಲ್ಲಿ ವಂದನಾ ವಿಜಾಯನ್​ ಎಂಬುವರಿಗೆ ಸೇರಿದ ಕೋಳಿ ಎಂದಿನಂತೆ ಪ್ರತಿನ್ಯವೂ ಕೂಗುತ್ತದೆ. ಇದರಿಂದ ಮೋದಿ ಅವರ ನಿದ್ರಾಭಂಗವಾಗುತ್ತಿದೆ. ಇದು ಮೋದಿ ಕೋಪಕ್ಕೆ ಕಾರಣವಾಗಿದ್ದು, ವಂದನಾ ವಿಜಯನ್​ಗೆ ಈ ಬಗ್ಗೆ ದೂರು ನೀಡಿ, ಕೋಳಿಯನ್ನು ಪಂಜರದಲ್ಲಿ ಕೂಡಿ ಹಾಕುವಂತೆ ಹೇಳಿದ್ದರು. ಆದರೆ, ವಂದನಾ ಕುಟುಂಬ ಮೊದಿ ಸಲಹೆಯನ್ನು ತಿರಸ್ಕರಿಸಿ ಕೋಳಿಯನ್ನು ಮುಕ್ತವಾಗೇ ಬಿಟ್ಟಿದ್ದರು. ಮತ್ತೆ ಕೋಳಿ ಕಿರಿಕಿರಿಯನ್ನು ಸಹಿಸದ ಮೋದಿ ಪೊಲೀಸ್​ ಠಾಣೆಗೆ ತೆರಳಿ ಕೋಳಿ ವಿರುದ್ಧ ದೂರು ದಾಖಲಿಸಿದ್ದಾರೆ.

    ಕೋಳಿ ತನ್ನ ನಿದ್ರೆಗೆ ಭಂಗ ತಂದಿದೆ ಎಂದು ಮೋದಿ ದೂರಿದ್ದಾರೆ. ದಿನವಿಡೀ ಆಸ್ಪತ್ರೆಯಲ್ಲಿ ದುಡಿದು ಸುಸ್ತಾಗಿ ರಾತ್ರಿ ಮಲಗುತ್ತೇನೆ ಆದರೆ, ಮನೆ ಸಮೀಪವೇ ಇರುವುದರಿಂದ ವಿಜಯನ್‌ನ ಕೋಳಿ ಪ್ರತಿದಿನ ನಾಲ್ಕೈದು ಗಂಟೆಯ ನಡುವೆ ನಿದ್ದೆಗೆಡಿಸುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಕೋಳಿಯ ಮಾಲೀಕ ವಂದನಾ ವಿಜಯನ್ ವಿರುದ್ಧ ಸೆಕ್ಷನ್ 138 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್​)

    ಕರ್ನಾಟಕ ಜಾನಪದ ವಿವಿ ಘಟಿಕೋತ್ಸವಕ್ಕೆ ಅದ್ದೂರಿ ಚಾಲನೆ

    ವೃದ್ಧನ ಮನೆಯನ್ನು ಹೊತ್ತು ಸಾಗಿದ ಗ್ರಾಮಸ್ಥರು! ಕಾರಣ ತಿಳಿದರೆ ಕಣ್ತುಂಬಿ ಬರುತ್ತದೆ

    ಕೆಜಿಎಫ್​ ತಾತನ ಆರೋಗ್ಯಸ್ಥಿತಿ ಗಂಭೀರ: ತಡರಾತ್ರಿ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts