More

    ಸದನದಲ್ಲಿ ಅಶಿಸ್ತು: ಆರ್​. ಅಶೋಕ್​, ಅಶ್ವಥ್ ನಾರಾಯಣ ಸೇರಿ ಬಿಜೆಪಿಯ 10 ಶಾಸಕರು ಸಸ್ಪೆಂಡ್​

    ಬೆಂಗಳೂರು: ಸದನದಲ್ಲಿ ಅಸಭ್ಯವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಬಿಜೆಪಿಯ 10 ಶಾಸಕರನ್ನು ಅಧಿವೇಶನ ಮುಗಿಯುವವರೆಗೂ ಸ್ಪೀಕರ್​ ಯು.ಟಿ. ಖಾದರ್​ ಅವರು ಅಮಾನತು ಮಾಡಿದ್ದಾರೆ.

    ಬಿಜೆಪಿ ಶಾಸಕರಾದ ಅಶ್ವಥ್ ನಾರಾಯಣ, ಯಶ್ ಪಾಲ್ ಸುವರ್ಣ, ಆರಗ ಜ್ಞಾನೇಂದ್ರ, ವೇದವ್ಯಾಸ ಕಾಮತ್, ಧಿರಜ್ ಮುನಿರಾಜು, ಭರತ್ ಶೆಟ್ಟಿ, ಆರ್. ಅಶೋಕ್, ಅರವಿಂದ್ ಬೆಲ್ಲದ, ಉಮಾನಾಥ್ ಕೊಟ್ಯಾನ್ ಹಾಗೂ ಸುನಿಲ್ ಕುಮಾರ್ ಎಂಬುವರನ್ನು ಅಮಾನತು ಮಾಡಲಾಗಿದೆ.

    ಇದನ್ನೂ ಓದಿ: ಕೆಳಗೆ ಬಿದ್ದು ತನಗೇನೂ ತಿಳಿಯದಂತೆ ಮುಖ ಮಾಡಿಕೊಂಡ ಪಾಂಡಾ; ಈ ವಿಡಿಯೋ ನೋಡಿದರೆ ನಗು ಉಕ್ಕಿ ಬರದೇ ಇರಲಾರದು…

    ಸದನಕ್ಕೆ ಅಗೌರವ ತಂದವರ ಹೆಸರನ್ನು ಸ್ಪೀಕರ್​ ಖಾದರ್​ ಅವರು ಪ್ರಸ್ತಾಪಿಸಿದರು. ಸದನದ ನಡುವಳಿಕೆ ನಿಯಮದ ಪ್ರಕಾರ ಕಾನೂನು ಸಚಿವ ಎಚ್.ಕೆ ಪಾಟೀಲರು ಮಂಡಿಸಿದ ಪ್ರಸ್ತಾಪ ಧ್ವನಿ ಮತದ ಮೂಲಕ ಅಂಗೀಕಾರವಾಯಿತು. 348 ನಿಯಮ ಹಕ್ಕನ್ನು ಖಾದರ್​ ಚಲಾಯಿಸಿದರು.

    ಊಟಕ್ಕೂ ಬಿಡದೆ ಕಲಾಪ ಮುಂದುವರಿಸಿ ಬಜೆಟ್ ಮೇಲೆ ಚರ್ಚೆಗೆ ಅವಕಾಶ ನೀಡಿದ್ದಕ್ಕೆ ಬಿಜೆಪಿ ಸದಸ್ಯರು ಸ್ಪೀಕರ್​ ವಿರುದ್ಧ ಪ್ರತಿಭಟನೆ ನಡೆಸಿದರು. ಸ್ಪೀಕರ್ ಪೀಠದ ಬಳಿ ಜಮಾಯಿಸಿ ವಿಪಕ್ಷ ನಾಯಕರು ಹರಿದ ವಿಧೇಯಕಗಳ ಪ್ರತಿಗಳನ್ನು ಎಸೆದರು. ಈ ವೇಳೆ ಸ್ಪೀಕರ್ ಪೀಠದಲ್ಲಿ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಕುಳಿತಿದ್ದರು. ಲಮಾಣಿ ಅವರ ಮುಖದ ಮೇಲೆಯೇ ಬಿಜೆಪಿ ಸದಸ್ಯರು ಹರಿದ ಹಾಳೆಗಳನ್ನು ಎಸೆದರು. ಈ ವೇಳೆ ಮಾರ್ಷಲ್​ಗಳು ಸ್ಪೀಕರ್ ರಕ್ಷಣೆಗೆ ಬಂದು ನಿಂತರು. ಬಳಿಕ ಸದನವನ್ನು ಮುಂದೂಡಲಾಯಿತು. ಬಿಜೆಪಿ ಸದಸ್ಯರ ಕಿರಿಕಿರಿ ತಡೆಯದೇ ಸದನ ಮುಂದೂಡಲಾಯಿತು.

    ವಿಪಕ್ಷಗಳ ಸಭೆ ವೇಳೆ ಭೇಟಿ ನೀಡಿದ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಮುಂದಾದ ಬಿಜೆಪಿ, ಜೆಡಿಎಸ್​

    ತನಿಖೆ ವೇಳೆ ರೋಚಕ ಸಂಗತಿಗಳ ಬಗ್ಗೆ ಬಾಯ್ಬಿಟ್ಟ ಶಂಕಿತ ಉಗ್ರರು..

    VIDEO| ಮೆಟ್ರೋದಲ್ಲಿ ಫಿಟ್ನೆಸ್ ಕೋಚ್ ಸ್ಟಂಟ್; ನೆಟ್ಟಿಗರಿಂದ ಟೀಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts